ದೇಶದ ಏಕತೆಗಾಗಿ ಶ್ರಮಿಸಿದ ಶ್ಯಾಮಪ್ರಸಾದ್‌ ಮುಖರ್ಜಿ

| Published : Jul 09 2024, 12:46 AM IST

ಸಾರಾಂಶ

ಬಾಗಲಕೋಟೆ : ಹಿಂದುತ್ವ ಈ ದೇಶದ ಆತ್ಮ ಎಂದು ಸಾರಿದ ಶ್ಯಾಮಪ್ರಸಾದ್‌ ಮುಖರ್ಜಿ ಭಾರತದ ಏಕತೆಗಾಗಿ ಜೀವತೆತ್ತ ಸ್ವತಂತ್ರ ಭಾರತದ ಮೊದಲ ಬಲಿದಾನಿ ಎಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಹಿಂದುತ್ವ ಈ ದೇಶದ ಆತ್ಮ ಎಂದು ಸಾರಿದ ಶ್ಯಾಮಪ್ರಸಾದ್‌ ಮುಖರ್ಜಿ ಭಾರತದ ಏಕತೆಗಾಗಿ ಜೀವತೆತ್ತ ಸ್ವತಂತ್ರ ಭಾರತದ ಮೊದಲ ಬಲಿದಾನಿ ಎಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು.

ನಗರದ ಶಿವಾನಂದ ಜಿನ್‌ ನಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ಬಾಗಲಕೋಟೆ ಮತಕ್ಷೇತ್ರದಿಂದ ಹಮ್ಮಿಕೊಂಡ ಡಾ.ಶ್ಯಾಮಪ್ರಸಾದ್ ಮುಖರ್ಜಿ ಅವರ ಜನ್ಮದಿನಾಚರಣೆ ನಿಮಿತ್ತ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ವಂದನೆ ಸಲ್ಲಿಸಿ ಮಾತನಾಡಿದರು.

ಡಾ.ಶ್ಯಾಮಪ್ರಸಾದ್‌ ಮುಖರ್ಜಿ ಅವರು ಭಾರತದ ಏಕತೆಗಾಗಿ ಜೀವತೆತ್ತ ಸ್ವತಂತ್ರ ಭಾರತದ ಮೊದಲ ಬಲಿದಾನಿಯಾದವರು. ಪ್ರಖರ ರಾಷ್ಟ್ರೀಯವಾದಿ, ದೇಶದ ಅಖಂಡತೆಗಾಗಿ ಶ್ರಮಿಸಿದ ಅವರು ಹಿಂದುತ್ವ ಈ ದೇಶದ ಆತ್ಮ ಎಂದು ಸಾರಿದವರು ಅವರ ದೇಶಪ್ರೇಮ ನಮಗೆಲ್ಲ ಆದರ್ಶ ಎಂದರು.

ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಮಾತನಾಡಿ, ಡಾ.ಶ್ಯಾಮಪ್ರಸಾದ್ ಮುಖರ್ಜಿ ಭಾರತೀಯ ಜನಸಂಘದ ಸಂಸ್ಥಾಪಕರಾಗಿದ್ದವರು. ಒಂದು ರಾಷ್ಟ್ರ ಒಂದು ಧ್ವಜ ಘೋಷಣೆಯೊಂದಿಗೆ ರಾಷ್ಟ್ರೀಯ ಐಕ್ಯತೆ ಹಾಗೂ ಕಾಶ್ಮೀರಕ್ಕಾಗಿ ಹೋರಾಡಿದ ಮುಖರ್ಜಿ ಅವರ ದೇಶಭಕ್ತ ವಿಚಾರಧಾರೆಗಳು ಕೋಟ್ಯಂತರ ಕಾರ್ಯಕರ್ತರಿಗೆ ಸರ್ವಕಾಲಿಕ ಪ್ರೇರಣೆ ಎಂದರು.

ಮುಖಂಡರಾದ ಜಿ.ಎನ್.ಪಾಟೀಲ. ಡಾ.ಎಂ.ಎಸ್. ದಡ್ಡೆನ್ನವರ, ಲಕ್ಷ್ಮೀನಾರಾಯಣ ಕಾಸಟ್, ಗುಂಡುರಾವ ಶಿಂಧೆ, ಕೇಶವ ಭಜಂತ್ರಿ, ರಾಜು ನಾಯ್ಕರ, ಸತ್ಯನಾರಾಯಣ ಹೇಮಾದ್ರಿ, ಶಿವಾನಂದ ಟವಳಿ, ನಗರಮಂಡಲ ಅಧ್ಯಕ್ಷ ಬಸವರಾಜ ಹುನಗುಂದ, ನಗರಸಭೆ ಸದಸ್ಯೆ ಜ್ಯೋತಿ ಭಜಂತ್ರಿ, ಉಮೇಶ ಹಂಚಿನಾಳ, ಬಸವರಾಜ ಅವರಾಧಿ, ಸಂಗಮೇಶ ಹಿತ್ತಲಮನಿ, ಸೇರಿದಂತೆ ಅನೇಕರು ಇದ್ದರು.