ಸಾರಾಂಶ
ವಿದ್ಯಾಕಾಶಿ ಧಾರವಾಡ ಹಾಗೂ ಬೆಂಗಳೂರು ನಗರಗಳ ನಡುವೆ ಸಂಚರಿಸುತ್ತಿರುವ ಸಿದ್ಧಗಂಗಾ ಇಂಟರ್‌ಸಿಟಿ ರೈಲು ಶುಕ್ರವಾರದಿಂದ ಸಂಪೂರ್ಣ ವಿದ್ಯುತ್ ಚಾಲಿತವಾಗಿ ಮಾರ್ಪಟ್ಟಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ವಿದ್ಯಾಕಾಶಿ ಧಾರವಾಡ ಹಾಗೂ ಬೆಂಗಳೂರು ನಗರಗಳ ನಡುವೆ ಸಂಚರಿಸುತ್ತಿರುವ ಸಿದ್ಧಗಂಗಾ ಇಂಟರ್‌ಸಿಟಿ ರೈಲು ಶುಕ್ರವಾರದಿಂದ ಸಂಪೂರ್ಣ ವಿದ್ಯುತ್ ಚಾಲಿತವಾಗಿ ಮಾರ್ಪಟ್ಟಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸಚಿವರು, ಈ ರೈಲು ಧಾರವಾಡದಿಂದಲೇ ತನ್ನ ಪ್ರಯಾಣವನ್ನು ಬೆಂಗಳೂರು ನಗರದತ್ತ ಎಂದಿನಂತೆ ಆರಂಭಿಸಿದ್ದು, ಇನ್ನು ಮುಂದೆ ಸತತವಾಗಿ ವಿದ್ಯುತ್ ಚಾಲಿತ ಎಂಜಿನ್‌ನೊಂದಿಗೆ ಪ್ರಯಾಣ ನಡೆಸಲಿದೆ. ಇದಕ್ಕೂ ಮುನ್ನ ಡೀಸೆಲ್ ಚಾಲಿತ ಎಂಜಿನ್‌ನೊಂದಿಗೆ ಪ್ರಯಾಣ ಮಾಡುತ್ತಿತ್ತು. ಧಾರವಾಡ-ಬೆಂಗಳೂರು ರೈಲ್ವೆ ಲೈನನ್ನು ಶೇ. 100ರಷ್ಟು ವಿದ್ಯುದೀಕರಣಗೊಳಿಸಿದ್ದಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.