ಸಾರಾಂಶ
ಸಿದ್ಧಗಂಗಾ ಮಠದ ಶ್ರೀಗಳು ಗುರು ಪರಂಪರೆಗೆ ಮಾದರಿ ಆಗಿದ್ದರು. ಆ ನಿಟ್ಟಿನಲ್ಲಿಯೇ ನಡೆದಂತಹವರು. ಸರ್ವಧರ್ಮಗಳನ್ನು ಸಮಾನತೆಯಿಂದ ನೋಡಿದ ಮಹಾನ್ ಪುರುಷರು ಎಂದು ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ನುಡಿದಿದ್ದಾರೆ.
- ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ 118ನೇ ಜಯಂತಿ
- - -ದಾವಣಗೆರೆ: ಸಿದ್ಧಗಂಗಾ ಮಠದ ಶ್ರೀಗಳು ಗುರು ಪರಂಪರೆಗೆ ಮಾದರಿ ಆಗಿದ್ದರು. ಆ ನಿಟ್ಟಿನಲ್ಲಿಯೇ ನಡೆದಂತಹವರು. ಸರ್ವಧರ್ಮಗಳನ್ನು ಸಮಾನತೆಯಿಂದ ನೋಡಿದ ಮಹಾನ್ ಪುರುಷರು ಎಂದು ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ನುಡಿದರು.
ನಗರದ ಕೊಂಡಜ್ಜಿ ರಸ್ತೆಯ ಆರ್‌ಟಿಒ ಕಚೇರಿ ಸಮೀಪ ಮಂಗಳವಾರ ಶ್ರೀ ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿ ಸರ್ಕಲ್ ಬಳಗದಿಂದ ಆಯೋಜಿಸಿದ್ದ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಅವರ 118ನೇ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.ಸಾವಿರಾರು ವಿದ್ಯಾರ್ಥಿಗಳು ಸಿದ್ಧಗಂಗಾ ಶ್ರೀಗಳ ಆಶ್ರಯದಲ್ಲಿ ನೆರಳನ್ನು ಕಂಡಿದ್ದಾರೆ. ಇಂತಹ ಪೂಜ್ಯರು ಊರಿಗೊಬ್ಬಬ್ಬರು ಇರಬೇಕು. ಅಂತಹ ಪೂಜ್ಯರಿಂದ ದೇಶ, ನಾಡು ಶಾಂತಿ-ನೆಮ್ಮದಿಯಿಂದ ಇರಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಆರ್‌ಟಿಒ ಅಧಿಕಾರಿಗಳು, ಡಿವೈಎಸ್ಪಿ ರುದ್ರಪ್ಪ ಉಜಿನಕೊಪ್ಪ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಡೋಲಿ ಚಂದ್ರಪ್ಪ, ಚಲನಚಿತ್ರ ನಿರ್ದೇಶಕ ಹಾಸನದ ಗೋಪಾಲಪ್ಪ, ಉಪನ್ಯಾಸಕ ಕೆ.ಮಂಜುನಾಥ, ಬಳಗದ ಸಂಸ್ಥಾಪಕ ಅಧ್ಯಕ್ಷ ಶಂಕರ್ ಎ.ಶಿರೇಕರ್ ಪವರ್, ನಿವೃತ್ತ ಪ್ರಾಚಾರ್ಯ ಸುನೀಲ್ ಶೆಟ್ಟರ್, ಟೋಪಿ ವೀರೇಶ್, ಭಾರತ ಸೇವಾದಳದ ಸಂಘಟಕ ಫಕ್ಕೀರ ಗೌಡ, ಹೋಟೆಲ್ ಮಲ್ಲಿಕಾರ್ಜುನ, ನಂದಿಪುರ ನಾಗರಾಜ, ಸಾಹಿತಿ ಶಿವಪ್ರಸಾದ ಕರ್ಜಗಿ, ಶಂಕ್ರಪ್ಪ ಸುರ್ವೆ, ಪೇಂಟರ್ ವಿಜಯಕುಮಾರ್, ಬಳಗದ ಸ್ನೇಹಿತರು ಸಾರ್ವಜನಿಕರು ಇದ್ದರು.- - - -1ಕೆಡಿವಿಜಿ31.ಜೆಪಿಜಿ:
ದಾವಣಗೆರೆಯಲ್ಲಿ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಿದ್ಧಗಂಗಾ ಶ್ರೀಗಳ 118ನೇ ಜಯಂತಿ ಕಾರ್ಯಕ್ರಮ ಸಂಪನ್ನಗೊಂಡಿತು.