ಸಿದ್ದಗಂಗಾ ಶ್ರೀಗಳೇ ಒಂದು ವಿಶ್ವವಿದ್ಯಾಲಯ

| Published : Apr 02 2025, 01:00 AM IST

ಸಾರಾಂಶ

ನೆಲಮಂಗಲ: ತ್ರಿವಿಧ ದಾಸೋಹಿಗಳಾದ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅನ್ನ, ಅಕ್ಷರ, ಆಶ್ರಯ ನೀಡುವ ಮೂಲಕ ಅಪಾರ ವಿದ್ಯಾರ್ಥಿಗಳ ಜೀವನಕ್ಕೆ ದಾರಿ ದೀಪವಾಗಿದ್ದರು. ಅವರ ಕಾಯಕನಿಷ್ಠೆ ಜಗತ್ತಿಗೆ ಮಾದರಿ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೇಂದ್ರ ಘಟಕದ ಮಾಜಿ ನಿರ್ದೇಶಕ ಎನ್.ಎಸ್.ನಟರಾಜು ತಿಳಿಸಿದರು.

ನೆಲಮಂಗಲ: ತ್ರಿವಿಧ ದಾಸೋಹಿಗಳಾದ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅನ್ನ, ಅಕ್ಷರ, ಆಶ್ರಯ ನೀಡುವ ಮೂಲಕ ಅಪಾರ ವಿದ್ಯಾರ್ಥಿಗಳ ಜೀವನಕ್ಕೆ ದಾರಿ ದೀಪವಾಗಿದ್ದರು. ಅವರ ಕಾಯಕನಿಷ್ಠೆ ಜಗತ್ತಿಗೆ ಮಾದರಿ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೇಂದ್ರ ಘಟಕದ ಮಾಜಿ ನಿರ್ದೇಶಕ ಎನ್.ಎಸ್.ನಟರಾಜು ತಿಳಿಸಿದರು.

ವಿನಾಯಕನಗರದ ಎನ್‌ಸಿಎಸ್ ಸದನದಲ್ಲಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕ ಹಮ್ಮಿಕೊಂಡಿದ್ದ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರ 118ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸಿದ್ದಗಂಗಾ ಶ್ರೀಗಳ ಜೀವನ ಚರಿತ್ರೆಯೇ ಒಂದು ವಿಶ್ವದ್ಯಾಲಯ. ಅವರ ಆದರ್ಶಗಳು ಬಡವರ ಮತ್ತು ಸಮಾಜದ ಉದ್ದಾರಕ್ಕೆ ಶ್ರೀಗಳಿಗಿದ್ದ ಆಲೋಚನೆ ಕಾರ್ಯತತ್ಪರತೆ ಅಸಾಧಾರಣವಾದುದು. ತಮ್ಮ ವೃತ್ತಿಯಲ್ಲಿ ಕಾಯಕದ ಮೂಲಕ ಕೈಲಾಸವನ್ನು ಕಾಣುವಂತಹ ಮಹಾ ಸಂತರು. ಅವರ ಬದುಕು ಮತ್ತು ಆದರ್ಶಗಳು ಎಲ್ಲಾ ಸ್ವಾಮೀಜಿಗಳಿಗೂ ಆದರ್ಶವಾಗಲಿ ಎಂದು ಹೇಳಿದರು.

ಅ.ಭಾ.ವೀ.ಲಿಂ.ಮಹಾಸಭಾ ತಾಲೂಕು ಅಧ್ಯಕ್ಷ ಎನ್.ರಾಜಶೇಖರ್ ಮಾತನಾಡಿ, ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ಸಂತರು ನಮ್ಮನ್ನಗಲಿರುವುದು ನಮಗೆ ನೋವು ತಂದಿದೆ. ಆದರೆ ಅವರ ಆದರ್ಶಗಳನ್ನು ನಾವು ಪಾಲಿಸಿದಾಗ ಮಾತ್ರ ಅವರು ನಮ್ಮ ಜೊತೆಯಲ್ಲಿಯೆ ಇರುತ್ತಾರೆ. ಶಿವಕುಮಾರ ಸ್ವಾಮೀಜಿ ಅನೇಕ ವಿದ್ಯಾರ್ಥಿಗಳ ಪಾಲಿಗೆ ದಾರಿ ದೀಪವಾಗಿದ್ದಾರೆ. ಅವರು ಅನ್ನದಾಸೋಹ ಶಿಕ್ಷಣ ಹಾಗೂ ಗ್ರಾಮೀಣ ಭಾಗದಲ್ಲಿ ಅನೇಕ ಶಾಲೆಗಳನ್ನು ತೆರೆದು ಅನೇಕರು ಅವರ ಶ್ರೀಮಠದ ವಿದ್ಯಾಸಂಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡಿ ವಿದ್ಯಾವಂತರಾಗಿ ಸಮಾಜದಲ್ಲಿ ಸಾಧಕರಾಗಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದ ಅಂಗವಾಗಿ ಶ್ರೀ ಶಿವಕುಮಾರ ಸ್ವಾಮೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಲಾಯಿತು. ಅ.ಭಾ.ವೀ.ಲಿಂ.ಮಹಾಸಭಾ ಬೆಂಗಳೂರು ಗ್ರಾಮಾಂತರ ಮಹಿಳಾಘಟಕದ ಮಾಜಿ ಜಿಲ್ಲಾಧ್ಯಕ್ಷೆ ರಾಜಮ್ಮ ಪ್ರಕಾಶ್ ಅವರು ಮಹಾಸಭಾ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದು, ಮಹಾಸಭಾ ಕೇಂದ್ರ ಘಟಕದ ಮಾಜಿ ನಿರ್ದೇಶಕ ನಟರಾಜು, ದಯಾಶಂಖರ್, ಜಿಲ್ಲಾಧ್ಯಕ್ಷ ರೇವಣ್ಣಸಿದ್ದಯ್ಯ, ತಾಲೂಕು ಅಧ್ಯಕ್ಷ ಎನ್.ರಾಜಶೇಖರ್ ಸೇರಿದಂತೆ ಸಮಾಜ ಬಾಂಧವರು ಅಭಿನಂದಿಸಿದರು.ಇದೇ ಸಂದರ್ಭದಲ್ಲಿ ಅ.ಭಾ.ವೀ.ಲಿಂ.ಮಹಾಸಭಾ ಜಿಲ್ಲಾ ಮಾಜಿ ಕಾರ್ಯದರ್ಶಿ ಎನ್.ಬಿ.ದಯಾಶಂಕರ್, ರಾಜ್ಯ ಘಟಕದ ಮಾಜಿ ನಿರ್ದೇಶಕ ಎಂ.ಬಿ.ಮಂಜುನಾಥ್, ರಾಜ್ಯಯುವ ಘಟಕದ ಮಾಜಿ ಕಾರ್ಯದರ್ಶಿ ಕೊಟ್ರೇಶ್.ಆರ್, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ವೇದಾವತಿ ಮಂಜುನಾಥ್, ತಾಲೂಕು ಘಟಕದ ಮಾಜಿ ಅಧ್ಯಕ್ಷ ಕೆ.ಸಿ.ಅಣ್ಣಪ್ಪ, ಮುಖಂಡರಾದ ಅದರಂಗಿ ಪರಮೇಶ್, ಕೆ.ಸಿ.ಸಿದ್ದೇಗೌಡ, ಕಾರ್ತಿಕ್, ಎಚ್.ಡಿ.ಗಿರೀಶ್, ರುದ್ರೇಶ್, ಎನ್.ಆರ್.ಗಣೇಶ್ ಜಗದೀಶ್, ಪೂರ್ಣಿಮಾ ಸುಗ್ಗರಾಜು, ಮಂಜುಳಾ ಸುರೇಶ್, ಲೊಲಾಕ್ಷಿ ಗಂಗಾಧರ್, ಮಂಜುಳಾ, ಸುಮಾ, ವಂಸತ ಮತ್ತಿತರರು ಉಪಸ್ಥಿತರಿದ್ದರು.

ಪೊಟೊ-1ಕೆ ಎನ್ ಎಲ್ ಎಮ್ 1: ನೆಲಮಂಗಲದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಶ್ರೀ ಶಿವಕುಮಾರ ಸ್ವಾಮೀಜಿ 118ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.