ಸಿದ್ದಲಿಂಗೇಶ್ವರ, ಜನರ ಋಣ ತೀರಿಸಲು ಪ್ರಾಮಾಣಿಕ ಪ್ರಯತ್ನ

| Published : Sep 22 2024, 01:46 AM IST

ಸಿದ್ದಲಿಂಗೇಶ್ವರ, ಜನರ ಋಣ ತೀರಿಸಲು ಪ್ರಾಮಾಣಿಕ ಪ್ರಯತ್ನ
Share this Article
  • FB
  • TW
  • Linkdin
  • Email

ಸಾರಾಂಶ

ಕುಣಿಗಲ್: ಸಿದ್ದಲಿಂಗೇಶ್ವರ ಹಾಗೂ ಜನರ ಋಣ ತೀರಿಸಲು ನಾನು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು.

ಕುಣಿಗಲ್: ಸಿದ್ದಲಿಂಗೇಶ್ವರ ಹಾಗೂ ಜನರ ಋಣ ತೀರಿಸಲು ನಾನು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು.

ಯಡಿಯೂರು ಶ್ರೀ ಕ್ಷೇತ್ರದಲ್ಲಿ ಶ್ರೀ ಸಿದ್ದಲಿಂಗೇಶ್ವರ ಗದ್ದೆಗೆ ಪೂಜೆ ಸಲ್ಲಿಸಿ ಮಾತನಾಡಿದರು. ನನ್ನ ಆಧ್ಯಾತ್ಮ ಗುರುಗಳಾದ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಹಾಗೂ ಸಿದ್ದಲಿಂಗೇಶ್ವರರ ಆಶೀರ್ವಾದದ ಜೊತೆಗೆ ನನ್ನ ಮತದಾರರ ಕೃಪೆಯಿಂದ ನನಗೆ ಈ ಸ್ಥಾನಮಾನ ಸಿಕ್ಕಿದೆ. ಈ ಸಂಬಂಧ ನನ್ನ ಪತ್ನಿ ಸಿದ್ದಲಿಂಗೇಶ್ವರರಿಗೆ ಪೂಜೆ ಸಲ್ಲಿಸಬೇಕೆಂದು ಇಟ್ಟಿದ್ದ ಬೇಡಿಕೆಯಂತೆ ಈ ದಿನ ಭೇಟಿ ನೀಡಿದ್ದೇನೆ ಎಂದು ತಿಳಿಸಿದರು.

ತುಮಕೂರಿನ ಎಲ್ಲಾ ಮತದಾರರು ಪಕ್ಷಾತೀತವಾಗಿ ನನ್ನನ್ನು ಬೆಂಬಲಿಸಿದ್ದಾರೆ. ಅವರ ಪ್ರೀತಿಗೆ ನಾನು ಚಿರಋಣಿ. ಈ ಕ್ಷೇತ್ರ ಮತ್ತು ಈ ಜನರ ಋಣವನ್ನು ತೀರಿಸಬೇಕಾಗಿರುವುದು ನನ್ನ ಜವಾಬ್ದಾರಿ. ಅದಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದೇನೆ ಎಂದರು.

ಪೂಜೆ ನಂತರ ದಾಸೋಹ ಕೈಂಕರ್ಯ ಸೇವಾ ಸಮಿತಿಗೆ ತೆರಳಿದ ಕೇಂದ್ರ ಸಚಿವ ಸೋಮಣ್ಣ ಅಲ್ಲಿ ಪ್ರಸಾದ ಸ್ವೀಕರಿಸಿದರು. ಡಿ.ಕೃಷ್ಣಕುಮಾರ್, ಮಹೇಶ್, ನಿಟ್ಟೂರ್ ಪ್ರಕಾಶ್, ಕುಮಾರ್, ಮರಿಯಣ್ಣ ವೆಂಕಟೇಶ್, ಸಿದ್ದಲಿಂಗಣ್ಣ ಇದ್ದರು.

ತಪೋ ಕ್ಷೇತ್ರ ಕಗ್ಗೆರೆ ಗೆ ರೈಲ್ವೆ ನಿಲ್ದಾಣ ಮಾಡುವೆ:

ಸಾರ್ವಜನಿಕರು ಎಡೆಯೂರಿನಲ್ಲಿ ರೈಲು ನಿಲುಗಡೆ ಹೆಚ್ಚಿಸುವಂತೆ ಮತ್ತು ಶ್ರೀ ಸಿದ್ದಲಿಂಗೇಶ್ವರರ ತಪೋ ಕ್ಷೇತ್ರ ಕಗ್ಗೆರೆಗೆ ರೈಲ್ವೆ ನಿಲ್ದಾಣ ಮಂಜೂರು ಮಾಡುವ ವಿಚಾರ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ವಿ.ಸೋಮಣ್ಣ, ಸಿದ್ದಲಿಂಗೇಶ್ವರರ ಋಣ ತೀರಿಸಲು ನನಗೊಂದು ಅವಕಾಶ ಸಿಕ್ಕಿದೆ. ಆ ಕೆಲಸವನ್ನು ನಾನು ಮಾಡುತ್ತೇನೆ ಎಂದು ಭರವಸೆ ನೀಡಿದರು.