ಸಾರಾಂಶ
ಆಂಬ್ಯುಲೆನ್ಸ್
ಕನ್ನಡಪ್ರಭ ವಾರ್ತೆ ಸಿದ್ದಾಪುರ
ಕರಡಿಗೋಡುವಿನ ಇವಾಲ್ ಬ್ಯಾಕ್ ರೆಸಾರ್ಟ್ ವತಿಯಿಂದ ಕೊಡಗು ಎಸ್‌ಎನ್‌ಡಿಪಿ ಯೂನಿಯನ್‌ಗೆ ಸಾರ್ವಜನಿಕ ಸೇವೆಗಾಗಿ ನೂತನ ಆಂಬ್ಯುಲೆನ್ಸ್ ವಾಹನವನ್ನು ಕೊಡುಗೆಯಾಗಿ ನೀಡಲಾಯಿತು.ಆಂಬ್ಯುಲೆನ್ಸ್ ವಾಹನದ ಕೀ ಮತ್ತು ದಾಖಲೆಗಳನ್ನು ಆರೆಂಜ್ ಕೌಂಟಿ ರೆಸಾರ್ಟ್ ಮುಖ್ಯಸ್ಥ ಇಮಾನ್ಯುವಲ್ ರಾಮಾಪುರಂರವರು ಎಸ್‌ಎನ್‌ಡಿಪಿ ಕೊಡಗು ಯೂನಿಯನ್ ಅಧ್ಯಕ್ಷ ವಿ.ಕೆ. ಲೋಕೆಶ್ ಅವರಿಗೆ ನೀಡಿದರು.
ಬಳಿಕ ಮಾತನಾಡಿದ ಅವರು, ತಮ್ಮ ಸಂಸ್ಥೆಯು ಹಲವು ಸಮಾಜಮುಖಿ ಸೇವಾ ಕಾರ್ಯಗಳನ್ನು ಮಾಡುತ್ತಾ ಬರುತ್ತಿದ್ದು, ಸೇವೆಯ ಭಾಗವಾಗಿ ಆಧುನಿಕ ವ್ಯವಸ್ಥೆಯೊಂದಿರುವ ಆಂಬ್ಯುಲೆನ್ಸನ್ನು ಎಸ್‌ಎನ್‌ಡಿಪಿ ಯೂನಿಯನ್‌ಗೆ ನೀಡುತ್ತಿರುವುದಾಗಿ ಹೇಳಿದರು.ಆಂಬ್ಯುಲೆನ್ಸ್ ಸ್ವೀಕರಿಸಿ ಮಾತನಾಡಿದ ಯೂನಿಯನ್ ಅಧ್ಯಕ್ಷ ವಿ.ಕೆ. ಲೋಕೆಶ್, ಆರೆಂಜ್ ಕೌಂಟಿ ಮುಖ್ಯಸ್ಥರು ಸಂಕಷ್ಟದಲ್ಲಿರುವವರ ಸೇವೆಗಾಗಿ ನಮ್ಮ ಮನವಿಯ ಮೇರೆಗೆ ಕೇವಲ ಒಂದು ತಿಂಗಳ ಅವಧಿಯಲ್ಲಿ ಎಲ್ಲ ಸೌಲಭ್ಯ ಹೊಂದಿರುವ ಸುಮಾರು 16 ಲಕ್ಷ ರು. ಮೌಲ್ಯದ ಆಂಬ್ಯುಲೆನ್ಸ್ ನೀಡಿದ್ದಾರೆ. ಸಿದ್ದಾಪುರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿನ ಸಂಕಷ್ಟದ ಜನರಿಗೆ ಇದರ ಸದುಪಯೋಗ ದೊರೆಯಲಿದೆ. ಹಾಗಾಗಿ ಸಂಸ್ಥೆ ಅವರಿಗೆ ಚಿರ ಋಣಿಯಾಗಿರುವುದಾಗಿ ತಿಳಿಸಿದರು.
ಈ ಸಂಧರ್ಭ ಸಂಸ್ಥೆಯ ವ್ಯವಸ್ಥಾಪಕ ಥೋಮಸ್ ಪೌಲ್, ಯೂನಿಯನ್ ಕಾರ್ಯದರ್ಶಿ ನಂದಾ, ಪದಾಧಿಕಾರಿಗಳಾದ ಗೀರೀಶ್ ಆನಂದ್ ಸೇರಿದಂತೆ ಇವಾಲ್ ಬ್ಯಾಕ್ ಸಂಸ್ಥೆಯ ಸಿಬ್ಬಂದಿ ಇದ್ದರು.