ಸಾರಾಂಶ
ತಾಲೂಕಿನ ಜಡಿಗೇನಹಳ್ಳಿ ಹೋಬಳಿಯ ಮುಗಬಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದಾಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ 11 ಕಾಂಗ್ರೆಸ್ ಬೆಂಬಲಿತ ಹಾಗೂ 2 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದು, ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಕನ್ನಡಪ್ರಭ ವಾರ್ತೆ ಹೊಸಕೋಟೆತಾಲೂಕಿನ ಜಡಿಗೇನಹಳ್ಳಿ ಹೋಬಳಿಯ ಮುಗಬಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದಾಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ 11 ಕಾಂಗ್ರೆಸ್ ಬೆಂಬಲಿತ ಹಾಗೂ 2 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದು, ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಹಿಂದುಳಿದ ವರ್ಗ ಮೀಸಲು ಪ್ರವರ್ಗ-ಎ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ವಿಜಯಕುಮಾರ್, ಹಿಂದುಳಿದ ವರ್ಗ ಮೀಸಲು ಸ್ಥಾನ ಪ್ರವರ್ಗ-ಬಿಗೆ ದೊಡ್ಡತಾಯಮ್ಮ, ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ಓಬಟ್ಟಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ ಹತ್ತು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಬಸವರಾಜಪ್ಪ, ಮುನಿ ಲಕ್ಷ್ಮಯ್ಯ, ಚಂದ್ರಪ್ಪ, ದೇವರಾಜಪ್ಪ, ನಂದೀಶಪ್ಪ ಮಲ್ಲೇಶಪ್ಪ, ಬಸವರಾಜಮ್ಮ, ಬಸಮ್ಮ, ಮುನಿಯಮ್ಮ, ಬಿಜೆಪಿ ಬೆಂಬಲಿತ ಚನ್ನಯ್ಯ ಆಯ್ಕೆಯಾದ್ದಾರೆ.ನೂತನ ನಿರ್ದೇಶಕರುಗಳನ್ನ ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಬಿ.ವಿ ರಾಜಶೇಖರ್ ಗೌಡ ಅಭಿನಂದಿಸಿ ಮಾತನಾಡಿ, ಸಹಕಾರ ಸಂಘಗಳಲ್ಲಿ ಯಾವುದೇ ರೀತಿಯ ರಾಜಕೀಯ ಹಸ್ತಕ್ಷೇಪ ಮಾಡದೆ ಎಲ್ಲಾ ನಿರ್ದೇಶಕರುಗಳು ಡೈರಿ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿ ಎಂದು ಸಲಹೆ ಸೂಚನೆಗಳನ್ನು ನೀಡಿದರು.ಹಾಪ್ ಕಾಮ್ಸ್ ನಿರ್ದೇಶಕ ವೆಂಕಟೇಶಪ್ಪ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡಿ. ತದನಂತರ ಡೈರಿ ಅಭಿವೃದ್ಧಿಗೆ ಒತ್ತು ನೀಡಬೇಕು. ಸಹಕಾರ ಸಂಘಗಳ ಮೂಲಕ ಡೈರಿಗಳ ಅಭಿವೃದ್ಧಿಗೆ ಹಾಗೂ ಹಾಲು ಉತ್ಪಾದಕರ ಅಭಿವೃದ್ಧಿಗೆ ಸಾಕಷ್ಟು ಸವಲತ್ತುಗಳನ್ನು ನೀಡುತ್ತಿದ್ದು, ನಿರ್ದೇಶಕರುಗಳು ಹಾಲು ಉತ್ಪಾದಕರಿಗೆ ತಲುಪಿಸುವ ಕೆಲಸ ಮಾಡಬೇಕು. ಈ ಮೂಲಕ ಹೈನೋದ್ಯಮಕ್ಕೆ ಪ್ರೋತ್ಸಾಹ ನೀಡಬೇಕು ಎಂದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬಿ.ವಿ ರಾಜಶೇಖರ ಗೌಡ, ಕೋಡಿಹಳ್ಳಿ ಸುರೇಶ್, ಹಾಪ್ ಕಾಮ್ಸ್ ನಿರ್ದೇಶಕ ಎಂ.ಬಿ.ವೆಂಕಟೇಶಪ್ಪ, ಟಿಎಪಿಸಿಎಂಎಸ್ ಉಪಾಧ್ಯಕ್ಷ ರವೀಂದ್ರ, ಎಪಿಎಂಸಿ ಮಾಜಿ ಅಧ್ಯಕ್ಷ ಧರ್ಮೇಶ್, ಗ್ರಾಪಂ ಸದಸ್ಯ ಮಂಜುಳಾ ಮುನೇಶ್, ಮುಗಬಾಳ ಗ್ರಾಪಂ ಆಧ್ಯಕ್ಷೆ ಭಾಗ್ಯ ನಾಗರಾಜ್, ಮುಖಂಡರಾದ ಪ್ರವೀಣ್ ಹಳ್ಳಿಗೌಡ, ಕೆಂಪಣ್ಣ, ಗುರುಬಸಪ್ಪ, ಮಂಜುನಾಥ್ ಪರಮೇಶ್ವರ್, ಮಂಜುನಾಥ್, ಶಿವಶಂಕರ್, ದೊಡ್ಡಕನಿಯಪ್ಪ ಚಿಕ್ಕ ಕನಿಯಪ್ಪ, ಕೆಂಬಳಗಾನಹಳ್ಳಿ ಮಂಜುನಾಥ್ ಹಾಜರಿದ್ದರು.