ಸಾರಾಂಶ
ವಿರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಿಲ್ ಬ್ಲೂಮ್ಸ್ ಹೆಲ್ತ್ ಕೇರ್ ಆಸ್ಪತ್ರೆಯ ಸಹಯೋಗದಲ್ಲಿ ವಿರಾಜಪೇಟೆ ತಾಲೂಕಿನ ಪತ್ರಕರ್ತರ ಸಂಘದ ಸದಸ್ಯರಿಗಾಗಿ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಕನ್ನಡ್ರಭ ವಾರ್ತೆ ಸಿದ್ದಾಪುರ
ಸಮಾಜದ ಆಗುಹೋಗುಗಳ ಬಗ್ಗೆ ಸದಾ ಕಾರ್ಯನಿರತರಾಗಿರುವ ಪತ್ರಕರ್ತರು ಕೆಲಸದ ಒತ್ತಡಗಳ ಮಧ್ಯೆ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಮುಂದಾಗಬೇಕೆಂದು ಹಿಲ್ ಬ್ಲೂಮ್ಸ್ ಹೆಲ್ತ್ ಕೇರ್ ಆಸ್ಪತ್ರೆಯ ವೈದ್ಯ ಡಾ. ಕಿರಣ್ ಸಲಹೆ ನೀಡಿದ್ದಾರೆ.ವಿರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಿಲ್ ಬ್ಲೂಮ್ಸ್ ಹೆಲ್ತ್ ಕೇರ್ ಆಸ್ಪತ್ರೆಯ ಸಹಯೋಗದಲ್ಲಿ ವಿರಾಜಪೇಟೆ ತಾಲೂಕಿನ ಪತ್ರಕರ್ತರ ಸಂಘದ ಸದಸ್ಯರಿಗಾಗಿ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.ಸಮಾಜದ ಬಗ್ಗೆ ಇರುವ ಕಾಳಜಿಯಿಂದ ಸದಾ ಕೆಲಸದ ಒತ್ತಡದಲ್ಲಿರುವ ಪತ್ರಕರ್ತರು ತಮ್ಮ ಆರೋಗ್ಯ ಹಾಗೂ ಮನೆಯವರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುವುದರ ಜತೆಗೆ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದರ ಮೂಲಕ ತಮ್ಮ ತಮ್ಮ ಆರೋಗ್ಯ ಕಾಪಾಡಿಕೊಳ್ಳುವಂತೆ ತಿಳಿ ಹೇಳಿದರು,
ಹಿಲ್ ಬ್ಲೂಮ್ಸ್ ಹೆಲ್ತ್ ಕೇರ್ ಆಸ್ಪತ್ರೆಯ ಸಿದ್ದಾಪುರ ಹಾಗೂ ವಿರಾಜಪೇಟೆಯಲ್ಲಿ ಹೃದಯ ತಪಾಸಣೆ ಸೇರಿದಂತೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಬಳಿಕ ಅಗತ್ಯವಿರುವ ಔಷಧಿಗಳನ್ನು ಉಚಿತವಾಗಿ ನೀಡಲಾಯಿತು.ವಿರಾಜಪೇಟೆ ಆಸ್ಪತ್ರೆಯಲ್ಲಿ ಡಾ.ಅಭಿಜಿತ್, ಡಾ. ಅಭಿನವ್ ಆರೋಗ್ಯ ತಪಾಸಣೆ ಮಾಡಿದರು.
ವಿರಾಜಪೇಟೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರೆಜಿತ್ ಕುಮಾರ್ ಗುಹ್ಯ, ಪ್ರಧಾನ ಕಾರ್ಯದರ್ಶಿ ಎ.ಎಸ್ ಮುಸ್ತಫ, ಉಪಾಧ್ಯಕ್ಷ ಪುತ್ತಂ ಪ್ರದೀಪ್, ಖಜಾಂಚಿ ಹೇಮಂತ್, ನಿರ್ದೇಶಕರಾದ ಮಂಜುನಾಥ್, ಕಿಶೋರ್ ಶೆಟ್ಟಿ, ರವಿಕುಮಾರ್, ಹಿಲ್ ಬ್ಲೂಮ್ಸ್ ಆಸ್ಪತ್ರೆಯ ಡಾ.ಅಲೀಮ, ವ್ಯವಸ್ಥಾಪಕರಾದ ಸಿರಾಜುದ್ದೀನ್, ಸಿಬ್ಬಂದಿ ಮಲರ್, ನಿರೋಶ, ಬಾಲ್ಕೀಸ್, ಹಾಜರಿದ್ದರು.