ಚಿಕ್ಕಮಗಳೂರು: ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಭದ್ರಬುನಾದಿ ಹಾಕಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುದೀರ್ಘ ಆಡಳಿತದ ಸರದಾರ. ಆಡಳಿತದಲ್ಲಿ ತಾರತಮ್ಯ ಎಸಗದೇ ಸರ್ವರಿಗೆ ಸಮಾನವಾದ ಯೋಜನೆ ಜಾರಿಗೊಳಿಸಿದವರು ಎಂದು ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ ಹೇಳಿದರು.

ನಗರದ ಕದ್ರಿಮಿದ್ರಿ ಸಮೀಪದ ಜೀವನಸಂಧ್ಯಾ ವೃದ್ಧಾಶ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮ ಯ್ಯನವರ ಸುದೀರ್ಘ ಆಡಳಿತದ ದಾಖಲೆ ಅಂಗವಾಗಿ ಕಾಂಗ್ರೆಸ್ ಮುಖಂಡ ಉಪ್ಪಳ್ಳಿ ಕೆ.ಭರತ್ ಸಹಯೋಗದಲ್ಲಿ ಆಯೋಜಿಸಿದ್ಧ ಅನ್ನದಾಸೋಹದಲ್ಲಿ ಪಾಲ್ಗೊಂಡು ಮಾತನಾಡಿದರು. ಕಾಂಗ್ರೆಸ್ ಮುಖಂಡ ಉಪ್ಪಳ್ಳಿ ಕೆ.ಭರತ್ ಮಾತನಾಡಿ ಸಿದ್ದರಾಮಯ್ಯ ರಾಜ್ಯದ ಅಹಿಂದಾ ನಾಯಕ. ಜನಪರ ಅಭಿವೃದ್ಧಿ ಮೂಲಕರ್ತವ್ಯ ಎಂದು ಭಾವಿಸಿರುವ ಮುಖ್ಯಮಂತ್ರಿಗಳಿಗೆ, ಹಿಂದೆ ಮಗನನ್ನು ಕಳೆದುಕೊಂಡ ದುಃಖದ ನಡುವೆಯೂ ದೃತಿಗೆಡದೇ ರಾಜ್ಯದ ಒಳಿತಿಗೆ ಶ್ರಮಿಸಿದ ಕಾಯಕಜೀವಿ ಎಂದು ಬಣ್ಣಿಸಿದರು.ಜೀವನಸಂಧ್ಯಾ ವೃದ್ಧಾದಾಶ್ರಮದ ಮುಖ್ಯಸ್ಥ ಹರಿಸಿಂಗ್ ಮಾತನಾಡಿ ಹಿಂದೆ ವೃದ್ಧಾಶ್ರಮಕ್ಕೆ ಕೇವಲ ೧.೯೬ ಲಕ್ಷ ಅನುದಾನ ಲಭ್ಯವಾಗುತ್ತಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿ ನಂತರ ಅದನ್ನು ೮ ಲಕ್ಷದವರೆಗೆ ಏರಿಸುವ ಮೂಲಕ ಹಿರಿಯ ಜೀವಗಳಿಗೆ ಸ್ಪಂದಿಸುವ ಕಾರ್ಯ ಮಾಡಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಸದಸ್ಯೆ ಜಯಂತಿ, ನಗರಸಭೆ ಮಾಜಿ ನಾಮಿನಿ ಸದಸ್ಯೆ ಮಲ್ಲಿಕಾ ದೇವಿ, ಮುಖಂಡರಾದ ಕುಸುಮ ಭರತ್, ಸಿದ್ದೇಶ್, ಆಶ್ರಮದ ಮೇಲ್ವಿಚಾರಕಿ ಚಂದ್ರಕಲಾ ಹಾಗೂ ವೃದ್ದರು ಉಪಸ್ಥಿತರಿದ್ದರು.