ಹಿಂದುಗಳ ಸಂಕಟ ಸಿದ್ದರಾಮಯ್ಯರಿಗೆ ಅರ್ಥ ಆಗುವುದಿಲ್ಲ: ಕೋಟ

| Published : Sep 17 2024, 12:53 AM IST

ಹಿಂದುಗಳ ಸಂಕಟ ಸಿದ್ದರಾಮಯ್ಯರಿಗೆ ಅರ್ಥ ಆಗುವುದಿಲ್ಲ: ಕೋಟ
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯದ ನಾಗಮಂಗಲದ ಗಣಪತಿ ಮೆರವಣಿಗೆ ಪೆಟ್ರೋಲ್ ಬಾಂಬ್ ಹಾಕಿದರು. ಬಿ.ಸಿ.ರೋಡಿನಲ್ಲಿ ತಾಕತ್ತಿದ್ರೆ ಬನ್ನಿ ಎಂದು ಹಿಂದುಗಳಿಗೆ ಸವಾಲು ಹಾಕಿದ್ದಾರೆ. ದೇಶದಲ್ಲೇ ಪ್ರಥಮ ಬಾರಿಗೆ ಗಣಪತಿಯನ್ನು ಪೊಲೀಸ್ ಸುಪರ್ದಿಯಲ್ಲಿ ಇಡುವ ದಾರುಣ ಪರಿಸ್ಥಿತಿ ಬಂದಿದೆ ಎಂದು ಕೋಟ ಹೇಳಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಪರಿಶಿಷ್ಟ ಜಾತಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿಗೆ ಬಳಸಲಾಗಿದೆ ಎಂದು ಪ್ರಥಮ ಬಾರಿಗೆ ಸಿಎಂ ಸಿದ್ದರಾಮಯ್ಯ ಸತ್ಯ ಒಪ್ಪಿಕೊಂಡಿದ್ದಾರೆ. 24 ಸಾವಿರ ಕೋಟಿ ರು.ಗಳನ್ನು ತಕ್ಷಣ ಇಲಾಖಾ ಖಾತೆಗೆ ಮರು ವರ್ಗಾಯಿಸಿ, ಪ.ಜಾತಿಯ ಅಭಿವೃದ್ಧಿ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಈ ಹಣ ವಿನಿಯೋಗಿಸಿ ಎಂದು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.

ಅವರು ಸೋಮವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಒಂದೂವರೆ ವರ್ಷದಿಂದ ಬಿಜೆಪಿಯ ಆರೋಪ ಅಲ್ಲಗಳೆಯುತ್ತಾ ಬಂದಿದ್ದ ಅವರು, ಈಗ ಒಪ್ಪಿಕೊಂಡಿದ್ದಾರೆ ಎಂದರು.ಮಂಡ್ಯದ ನಾಗಮಂಗಲದ ಗಣಪತಿ ಮೆರವಣಿಗೆ ಪೆಟ್ರೋಲ್ ಬಾಂಬ್ ಹಾಕಿದರು. ಬಿ.ಸಿ.ರೋಡಿನಲ್ಲಿ ತಾಕತ್ತಿದ್ರೆ ಬನ್ನಿ ಎಂದು ಹಿಂದುಗಳಿಗೆ ಸವಾಲು ಹಾಕಿದ್ದಾರೆ. ದೇಶದಲ್ಲೇ ಪ್ರಥಮ ಬಾರಿಗೆ ಗಣಪತಿಯನ್ನು ಪೊಲೀಸ್ ಸುಪರ್ದಿಯಲ್ಲಿ ಇಡುವ ದಾರುಣ ಪರಿಸ್ಥಿತಿ ಬಂದಿದೆ. ಹಿಂದುಗಳ ಸಂಕಟ ಸಿದ್ದರಾಮಯ್ಯ ಅವರಿಗೆ ಅರ್ಥ ಆಗುವುದಿಲ್ಲ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದವರು ಟೀಕಿಸಿದರು.ತಾಳ್ಮೆ ಪರೀಕ್ಷಿಸಬೇಡಿ: ಯಶ್ಪಾಲ್

ಸಿದ್ದರಾಮಯ್ಯ ಸರ್ಕಾರದ ಆಡಳಿತದಲ್ಲಿ ಜನರ ನೆಮ್ಮದಿ ಕೆಟ್ಟಿದೆ. ಕೇವಲ ಒಂದು ಸಮುದಾಯದ ಓಲೈಕೆ ಮಾಡುತ್ತಿದ್ದಾರೆ. ತುಂಡು ನಾಯಕರು ಹಿಂದೂ ನಾಯಕರ ವಿರುದ್ಧ ಸವಾಲೆಸೆಯುತಿದ್ದಾರೆ. ಯಾರೂ ಹಿಂದೂಗಳ ತಾಳ್ಮೆಯನ್ನು ಪರೀಕ್ಷಿಸಲು ಬರಬೇಡಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ತಿಳಿಸಿದ್ದಾರೆ.ಹಿಂದೂ ಸಂಘಟನೆಗಳಿಂದ ಬಿ.ಸಿ ರೋಡ್ ಚಲೋ ಅಭಿಯಾನದ ಕುರಿತಾಗಿ ಸೋಮವಾರ ಉಡುಪಿಯಲ್ಲಿ ಪ್ರತಿಕ್ರಿಯಿಸಿದ ಅವರು, ಹಿಂದುಗಳ ಶಕ್ತಿ ಸಂಘಟನೆಗಳಿಂದ ಪ್ರದರ್ಶನವಾಗಿದೆ. ಹಿಂದೂಗಳ ಸಹನೆಯನ್ನು ಕೆಣಕಬೇಡಿ ಎಂದರು.