ಸಾರಾಂಶ
ಕನ್ನಡಪ್ರಭ ವಾರ್ತೆ ತುರುವೇಕೆರೆ
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಎದುರು ಎಸ್ಸಿ-ಎಸ್ಟಿ ಸಮುದಾಯದ ಮಂತ್ರಿಗಳಿಗೆ ನಿಂತು ಮಾತನಾಡುವ ಧೈರ್ಯ ಇಲ್ಲ. ಅಲ್ಲದೇ ಅವರನ್ನು ಕಂಡ್ರೆ ಗಡಗಡ ನಡುಗ್ತಾರೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಲೇವಡಿ ಮಾಡಿದರು.ಪಟ್ಟಣದ ಶ್ರೀ ಗಣಪತಿ ಆಸ್ಥಾನ ಮಂಟಪದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಆಶ್ರಯದಲ್ಲಿ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ರವರ ಜನ್ಮ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ದಲಿತರ ಅಭಿವೃದ್ದಿಗೆ ಮೀಸಲಿಟ್ಟ ೪೪ ಸಾವಿರ ಕೋಟಿ ರು. ಹಣವನ್ನು ಮುಖ್ಯಮಂತ್ರಿಗಳು ಗ್ಯಾರಂಟಿಗಾಗಿ ಬಳಸಿಕೊಂಡರು. ದಲಿತ ಸಮುದಾಯ ಮಂತ್ರಿಗಳಿಗೆ ಅದನ್ನು ವಿರೋಧಿಸುವ ಧೈರ್ಯ ಇಲ್ಲವಾಗಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಆರೋಪಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ರೂಲ್ ೭ ಕಾನೂನು ತಿದ್ದುಪಡಿ ಮಾಡಿದರು. ಕ್ಯಾಬಿನೆಟ್‌ನಲ್ಲಿ ಇದನ್ನು ಬದಲಾವಣೆ ಮಾಡದಂತೆ ದಲಿತ ಮಂತ್ರಿಗಳು ಸಹ ತಡೆಯಲಿಲ್ಲ. ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ದಿಗೆ ಮೀಸಲಿಟ್ಟ ಹಣವನ್ನು ತೆಗೆದುಕೊಂಡು ಗ್ಯಾರಂಟಿಗೆ ನೀಡುತ್ತಿರುವುದು ಈ ಸರ್ಕಾರ ದಲಿತರಿಗೆ ಅನ್ಯಾಯ ಮಾಡಿದ್ದಾರೆ. ಆದರೂ ದಲಿತರ ಹೆಸರು ಹೇಳಿಕೊಂಡು ರಾಜಕೀಯ ಮಾಡುತ್ತಾರೆ ಎಂದು ಆರೋಪಿಸಿದರು.ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸ್ವಪ್ನಾ ನಟೇಶ್, ಉಪಾಧ್ಯಕ್ಷೆ ಭಾಗ್ಯಮ್ಮ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯರು ಹಾಗೂ ವಿಮರ್ಶಕರಾದ ಡಾ.ರವಿಕುಮಾರ್ ನೀಹ ತಹಸೀಲ್ದಾರ್ ಎನ್.ಎ.ಕುಂ.ಇ.ಅಹಮದ್ಸ ದಸ್ಯರಾದ ಚಿದಾನಂದ್, ಸುರೇಶ್, ಡಾ.ನವೀನ್, ರಂಗನಾಥ್, .ಶಿವರಾಜಯ್ಯ, ಬಿಇಒ ಸೋಮಶೇಖರ್, ಶ್ರೀಧರಮೂರ್ತಿ, ಶ್ರೀನಾಥ್‌ಬಾಬು, ಶಿಕ್ಷಕ ಲೋಕೇಶ್, ದಲಿತ ಮುಖಂಡರಾದ ವಿ.ಟಿ.ವೆಂಕಟರಾಮಯ್ಯ, ಡೊಂಕಿಹಳ್ಳಿ ರಾಮಣ್ಣ, ರಂಗಧಾಮಯ್ಯ, ಡಾ.ಚಂದ್ರಯ್ಯ, ದಂಡಿನಶಿವರ ಕುಮಾರ್, ನೆಮ್ಮದಿಗ್ರಾಮ ಮೂರ್ತಿ ಸೇರಿದಂತೆ ಹಲವಾರು ಮುಖಂಡರು ಇದ್ದರು.