ಸಿದ್ದರಾಮಯ್ಯ ಕುರುಬ ಸಮಾಜದ ಆದರ್ಶ ವ್ಯಕ್ತಿ

| Published : Aug 13 2024, 12:51 AM IST / Updated: Aug 13 2024, 12:52 AM IST

ಸಾರಾಂಶ

ಸಿದ್ದರಾಮಯ್ಯ ಅವರು ಕೆವಲ ಒಂದೇ ಸಮಾಜಕ್ಕೆ ಸೀಮಿತವಾಗದೆ ಸಮಾಜದ ಸರ್ವಸಮಾಜಕ್ಕೆ ಸಿಮಿವಾಗಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದು ಸಮಾಜದ ಭಾಗ್ಯವೇ ಸರಿ. ಇದೀಗ ವಿರೋದ ಪಕ್ಷದವರು ಇಲ್ಲಸಲ್ಲದ ಅಪಾದನೆ ಹೊರಿಸಿ ಇವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಯತ್ನಲ್ಲಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಸಿಎಂ ಸಿದ್ದರಾಮಯ್ಯ ಅವರು ಕುರುಬ ಗೊಂಡ ಸಮಾಜದ ಕೀರ್ತಿಯ ಕಳಶರಾಗಿದ್ದಾರೆ. ಮೈಸೂರಿನ ವರುಣ ತಾಲೂಕಿನ ಸಿದ್ದರಾಮನ ಹುಂಡಿಯ ಗ್ರಾಮದ ಕೂಡು ಅವಿಭಕ್ತ ಕುಟುಂಬದಲ್ಲಿ ಜನಿಸಿ ಇಡೀ ರಾಜ್ಯದ ಜನರನ್ನು ಸಲಹುತ್ತಿದ್ದಾರೆಂದು ಕರ್ನಾಟಕ ಪ್ರದೇಶ ಕುರುಬಗೊಂಡ ಸಮಾಜದ ಕಾಳಗಿ ತಾಲೂಕು ಅಧ್ಯಕ್ಷರಾದ ಲಕ್ಷ್ಮಣ ಪೂಜಾರಿ ಸಿದ್ದರಾಮಯ್ಯನವರ ಕುರಿತು ಮೆಚ್ಚುಗೆ ಮಾತನ್ನಾಡಿದ್ದಾರೆ.

ಬಡತನ ಬೆನ್ನಿಗಿದ್ದರು ಲೆಕ್ಕಿಸದೆ ಕಾನೂನು ಪದವಿಯನ್ನು ಪಡೆದು ದೀನ ದಲಿತರ, ಬಡವರ ಪರ ಹೋರಾಟವನ್ನು ಮಾಡಿ ರಾಜ್ಯದ ಜನತೆಗೆ ನ್ಯಾಯ ಒದಗಿಸುವಲ್ಲಿ ಯಶಸ್ವಿಯಾಗಿ ಬುದ್ಧ, ಬಸವ ಡಾ. ಅಂಬೇಡ್ಕರ್ ತತ್ವಗಳನ್ನು ಮೈಗೂಡಿಸಿಕೊಂಡು, ಕುರುಬಗೊಂಡ ಸಮಾಜದ ಕೀರ್ತಿ ಕಳಸ ಸಿಎಂ ಸಿದ್ದರಾಮಯ್ಯ ನವರು ಎಂದೂ ಪೂಜಾರಿ ಕೊಂಡಾಡಿದ್ದಾರೆ.

ಕೆವಲ ಒಂದೇ ಸಮಾಜಕ್ಕೆ ಸೀಮಿತವಾಗದೆ ಸಮಾಜದ ಸರ್ವಸಮಾಜಕ್ಕೆ ಸಿಮಿವಾಗಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದು ಸಮಾಜದ ಭಾಗ್ಯವೇ ಸರಿ. ಇದೀಗ ವಿರೋದ ಪಕ್ಷದವರು ಇಲ್ಲಸಲ್ಲದ ಅಪಾದನೆ ಹೊರಿಸಿ ಇವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಯತ್ನಲ್ಲಿದ್ದಾರೆ. ಇದು ವ್ಯರ್ಥ ಪ್ರಯತ್ನ. ನಿಷ್ಕಳಂಕ ರಾಜಕಾರಣಿ ಸಿಎಂ ಸಿದ್ದರಾಮಯ್ಯ 4ದಶಕಗಳ ರಾಜಕೀಯ ಜೀವನದಲ್ಲಿ ಯಶಸ್ಸು ಕಂಡವರು. ಇ‍ರು ಕುರುಬ ಸಮಾಜದ ಹೆಮ್ಮೆ. ಬೀರಲಿಂಗೇಶ್ವರ ಅವರಿಗೆ ಸದಾಕಾಲ ಒಳಿತು ಮಾಡಲಿ ಎಂದು ಮುಖಂಡರಾದ ಲಕ್ಷ್ಮಣ ಎಸ್ ಪೂಜಾರಿ ಶುಭ ಕೋರಿದ್ದಾರೆ.