ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ನಮ್ಮ ಜೊತೆಗೆ ನಿಮಗೆ ಇರೋಕಾಗದಿದ್ರೆ ಅಂತವರೆಲ್ಲ ಪಾಕಿಸ್ತಾನಕ್ಕೆ ಹೋಗಲಿ. ಸಿದ್ದರಾಮಯ್ಯ ಮುಸ್ಲಿಮರ ಗುರು ಇದ್ದಂತೆ, ಸಿದ್ದರಾಮಯ್ಯ ಮುಸ್ಲಿಮರಿಗೆ ₹10 ಸಾವಿರ ಕೋಟಿ ಕೊಡ್ತೀನಿ ಅಂದ್ರು, ಯಾಕಪ್ಪ ಕೊಡ್ತೀರಿ, ಮಸೀದಿಗಳಲ್ಲಿ ಅನ್ನ ದಾಸೋಹ ನೋಡಿದ್ದೀರಾ? ಮಂದಿರ, ಮಠಗಳಲ್ಲಿ ಮಾತ್ರ ದಾಸೋಹ ನಡೆಯುತ್ತೆ ಎಂದು ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಆಕ್ರೋಶ ವ್ಯಕ್ತಪಡಿಸಿದರು. ನಗರದ ಶಿವಾಜಿ ವೃತ್ತದಲ್ಲಿ ನಡೆದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಯತ್ನಾಳ ಮಾತನಾಡಿದರು.ವಕ್ಫ್ ಕಾನೂನು ವಿರುದ್ಧ ಯತ್ನಾಳ ಕಿಡಿ:
ವಿಜಯಪುರದಲ್ಲಿ 500 ಎಕರೆ ಆಸ್ತಿಯನ್ನು ವಕ್ಫ್‌ಗೆ ನೀಡಲಾಗಿದೆ ಎಂದು ಆರೋಪಿಸಿದ ಅವರು, ಮಂಗಳೂರು ಗಲಭೆ ವೇಳೆ ಕ್ರಮಕ್ಕೆ ಮುಂದಾಗದೇ ಬೊಮ್ಮಾಯಿ ಕಾದು ನೋಡಬೇಕು ಗೌಡ್ರೆ ಅಂದ್ರು. ಆಗ ನಾನು ಏನ್ ನೋಡ್ತೀರಿ ಅಂದೆ ಎಂದರು.ವಾಪಸ್ ನಮ್ಮ ಧರ್ಮದ ಕಡೆಗೆ ಬರ್ರಿ ಇಲ್ಲಾ ಪಾಕಿಸ್ತಾನಕ್ಕೆ ಹೋಗ್ರಿ. ಏಕ ನಾಗರಿಕ ಸಂಹಿತೆ ಜಾರಿಯಾಗುತ್ತೆ. ಎರಡೇ ಮಕ್ಕಳನ್ನು ಹೆರಬೇಕು, ಹಮ್ 2 ಹಮಾರಾ ಪಾಂಚ್ ನಹಿ ಚಲೇಗಾ. ನಹಿ ಚಲೇಗಾ ಎಂದು ಶಾಸಕ ಯತ್ನಾಳ ಗುಡುಗಿದರು. ಯತ್ನಾಳ ಭಾಷಣದ ವೇಳೆ ಶಿವಾಜಿಯವರ 2ನೇ ಅವತಾರ ಯಾರು ಎಂದಾಗ ಅಭಿಮಾನಿಗಳೆಲ್ಲ ಯತ್ನಾಳ ಎಂದರು. ಇದಕ್ಕೆ ಪ್ರತಿಯಾಗಿ ಮಾತನಾಡಿದ ಯತ್ನಾಳ, ನಾನು ಶಿವಾಜಿ ಅವತಾರ ಅಲ್ಲ, ಮೋದಿ ಶಿವಾಜಿ ಅವತಾರ. ಕಾಶಿ ವಿಶ್ವನಾಥ, ಮಥುರಾ ಎಲ್ಲವನ್ನು ತೆಗೆದುಕೊಳ್ಳುತ್ತೇವೆ. ಮೋದಿ ನಂತರ ಬರೋರು ಡೇಂಜರ್ ಇದ್ದಾರೆ, ಮೋದಿ ನಂತರ ಯೋಗಿ ಬರ್ತಾರೆ ಎಂದರು.
ಎನ್‌ಕೌಂಟರ್ ಮಾಡಿ ಬಿಡ್ತಿದ್ದೆ:ನಮ್ಮ ಸರ್ಕಾರ ಕೂಡ ಇತ್ತು, ನಮ್ಮ ಗೃಹಮಂತ್ರಿ ಇದ್ದರು. ಏನಾದರೂ ಆದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇನೆ ಅಂತಿದ್ದರು. ಬಿಜೆಪಿ ಅಧಿಕಾರದಲ್ಲಿದ್ದಾಗ ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಾಟೆಗೆ ಕಾರಣವಾದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರೂ ಸಿಎಂ ಸಹ ಮೆದುವಾಗಿಯೇ ಇದ್ದರು. ಹಾಗಾಗಿ ವಿಧಾನಸಭಾ ಚುನಾವಣೆಯಲ್ಲಿ ನಮಗೆ ಸೋಲಾಯಿತು. ನಾನೇನಾದ್ರೂ ಗೃಹ ಮಂತ್ರಿ ಆಗಿದ್ದರೆ, ಎನ್‌ಕೌಂಟರ್ ಮಾಡಿ ಬಿಡುತ್ತಿದ್ದೆ. ಎಲ್ಲರನ್ನು ಜೈ ಶ್ರೀರಾಮ, ಜೈ ಶಿವಾಜಿ ಎಂದು ಕೂಗಲು ಹಚ್ಚುತ್ತಿದ್ದೆ ಎಂದು ಯತ್ನಾಳ ಹೇಳಿದರು.ಬಾಕ್ಸ್..ಶುದ್ದ ಗಾಳಿಯಲ್ಲಿ ವಿಜಯಪುರಕ್ಕೆ 6ನೇ ಸ್ಥಾನವಿಜಯಪುರ: ದೇಶದಲ್ಲಿಯೇ ಅತೀ ಹೆಚ್ಚು ಶುದ್ಧ ಗಾಳಿಯಿರುವ ನಗರಗಳಲ್ಲಿ ವಿಜಯಪುರ 6ನೇ ಸ್ಥಾನದಲ್ಲಿದೆ ಎನ್ನುವುದು ಹೆಮ್ಮೆಯ ವಿಷಯ. ನಿರೀಕ್ಷೆ ಮೀರಿ ಅಭಿವೃದ್ಧಿಯಾಗಿರುವುದೇ ಇದಕ್ಕೆ ಕಾರಣ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ನಗರದ ಜಿಲ್ಲಾ ಕಾರಾಗೃಹ ವಸತಿ ಗೃಹದಲ್ಲಿ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘದಿಂದ ತೆರೆದ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಓಪನ್ ಜಿಮ್ ಉದ್ಘಾಟಿಸಿ ಮಾತನಾಡಿದರು. ನಗರದಲ್ಲಿ ಒಳಚರಂಡಿ ನಿರ್ಮಾಣ ಮಾಡುವ ಜೊತೆಗೆ ಆಂತರಿಕ ರಸ್ತೆಗಳು ಸೇರಿ ಪ್ರಮುಖ ರಸ್ತೆಗಳನ್ನು ಮಾದರಿ ರಸ್ತೆಗಳನ್ನಾಗಿ ಅಭಿವೃದ್ಧಿ ಪಡಿಸಲಾಗಿದೆ. ಈಗ ₹10 ಕೋಟಿ ಅನುದಾನದಲ್ಲಿ ದರ್ಗಾ ರಸ್ತೆಯಿಂದ ಇಟ್ಟಂಗಿ ಕ್ರಾಸ್ ವರೆಗೆ ಅಗಲೀಕರಣಗೊಳಿಸಿ ಮಾದರಿ ರಸ್ತೆಯಾಗಿ ಮಾಡಲಾಗುವುದು ಎಂದರು.ನಗರದಲ್ಲಿನ ಪುರಾತನ ಬಾವಿಗಳನ್ನು ನಗರಾಭಿವೃದ್ಧಿ ಇಲಾಖೆಯಿಂದ ಸ್ವಚ್ಛಗೊಳಿಸಲಾಗುವುದು. ಇದರಿಂದ ನಗರಕ್ಕೆ ಉಂಟಾಗುವ ನೀರಿನ ಸಮಸ್ಯೆ ನೀಗಿಸಬಹುದು. ಈಗಾಗಲೇ ನಿರಂತರ ಕುಡಿಯುವ ನೀರು ಯೋಜನೆ ಪೈಪ್ ಅಳವಡಿಕೆ ಮುಗಿದಿದೆ. ಆದರೆ, ನೀರಿನ ಕೊರತೆಯಿದ್ದು, ಅದಕ್ಕೆ ಶಾಶ್ವತ ಪರಿಹಾರ ಒದಗಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಗರದ ವಿವಿಧ ಬಡಾವಣೆ, ಕಾಲೊನಿಗಳಲ್ಲಿ ಓಪನ್ ಜಿಮ್ ಮಾಡಿದ್ದರಿಂದ ಕನಿಷ್ಠ 5-10 ವರ್ಷ ಆಯುಷ್ಯ ಹೆಚ್ಚಿಗೆ ಮಾಡಿರುವ ತೃಪ್ತಿಯಿದೆ. ಯುವಕರು, ಮಹಿಳೆಯರು, ವೃದ್ಧರಿಗೆ ಉದ್ಯಾನ, ಜಿಮ್ ಉಪಯೋಗವಾಗಿದ್ದು, ಕಾರಾಗೃಹ ಸಿಬ್ಬಂದಿಗಳಿಗೂ ಶುದ್ಧ ನೀರು, ಜಿಮ್ ವ್ಯವಸ್ಥೆ ಅವಶ್ಯವಿತ್ತು. ಹೀಗಾಗಿ ವ್ಯವಸ್ಥೆ ಮಾಡಿದ್ದಾಗಿ ತಿಳಿಸಿದರು. ಕಾರಾಗೃಹದ ಅಧಿಕಾರಿಗಳು, ಸಿಬ್ಬಂದಿ ಮತ್ತಿತರರು ಇದ್ದರು.