ಸಾರಾಂಶ
ತೇರದಾಳ: ಪಟ್ಟಣದ ಜೆವಿ ಮಂಡಳ ಎಸ್.ಎಂ. ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ನೇಮಿನಾಥ ಜಮಖಂಡಿ ಶೈಕ್ಷಣಿಕ ಕ್ಷೇತ್ರದಲ್ಲಿ ೨೦ ವರ್ಷಗಳ ಕಾಲ ಸೇವೆ ಸಲ್ಲಿಸಿದ ನಿಮಿತ್ತ ಸಂಸ್ಥೆಯಲ್ಲಿನ ಬಡ ಮಕ್ಕಳಿಗೆ ನೋಟಬುಕ್ , ಪೆನ್ನು ವಿತರಿಸಿದರು.
ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)
ತೇರದಾಳ ಜೆವಿ ಮಂಡಳ ಎಸ್.ಎಂ. ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ನೇಮಿನಾಥ ಜಮಖಂಡಿ ಶೈಕ್ಷಣಿಕ ಕ್ಷೇತ್ರದಲ್ಲಿ ೨೦ ವರ್ಷಗಳ ಕಾಲ ಸೇವೆ ಸಲ್ಲಿಸಿದ ನಿಮಿತ್ತ ಸಂಸ್ಥೆಯಲ್ಲಿನ ಬಡ ಮಕ್ಕಳಿಗೆ ನೋಟಬುಕ್ , ಪೆನ್ನು ವಿತರಿಸಿದರು.ಸಂಸ್ಥೆಯ ಸ್ವತಂತ್ರ ಪಿಯು ಕಾಲೇಜು ಪ್ರಾಚಾರ್ಯ ಸಂತೋಷ ಕುಳ್ಳಿ ಮಾತನಾಡಿ, ಶಿಕ್ಷಣ ಕಲಿಯುವ ಆಸಕ್ತಿ ಇದ್ದರೂ ಕುಟುಂಬದಲ್ಲಿನ ಕಡು ಬಡತನ ಕೆಲವರಿಗೆ ಕಲಿಯಲು ಬಿಡುವುದಿಲ್ಲ. ಅಂತವರನ್ನು ಗುರುತಿಸಿ ಸಹಾಯಕ್ಕೆ ಮುಂದೆ ಬರಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ. ಆ ದಿಸೆಯಲ್ಲಿ ಶಿಕ್ಷಕ ನೇಮಿನಾಥ ಜಮಖಂಡಿ ಅವರ ಕಾಳಜಿ ಶ್ಲಾಘನೀಯ ಎಂದು ಬಣ್ಣಿಸಿದರು. ವಿದ್ಯಾರ್ಥಿನಿ ಮಾಯಕ್ಕ ಮಾಂಗ ಮಾತನಾಡಿ, ಕಲಿಯಬೇಕೆಂಬ ಆಸೆ ಸಾಕಷ್ಟು ಇದೆ. ಆದರೆ ಮನೆಯಲ್ಲಿನ ಪರಿಸ್ಥಿತಿ ಚೆನ್ನಾಗಿಲ್ಲ. ನಾನು ಶಾಲೆ ಬಿಡಬೇಕೆಂದು ನಿರ್ಧರಿಸಿದ್ದೆ. ಆದರೆ ಜಮಖಂಡಿ ಶಿಕ್ಷಕರ ಪ್ರೋತ್ಸಾಹ ಮತ್ತು ಸಹಾಯದಿಂದ ಅನುಕೂಲಕರವಾಗಿದೆ ಎಂದರು. ಎಂ.ಪಿ. ಸವದತ್ತಿ, ಎಸ್.ಪಿ. ದೊಡವಾಡ ಇತರರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))