ಕೆರೆ, ಸಿದ್ದರಾಮೇಶ್ವರರು ಬಾವಿ, ದೇವಾಲಯಗಳನ್ನು ಕಟ್ಟುವ ಮೂಲಕ ಹೆಸರುವಾಸಿಯಾಗಿದ್ದರು

ಹನುಮಸಾಗರ: ಶಿವಯೋಗಿ ಸಿದ್ದರಾಮೇಶ್ವರರು ಕೆರೆಗಳನ್ನು ಕಟ್ಟುವ ಮೂಲಕ ಜಲ ಸಂರಕ್ಷಣೆ ಮಾಡಿದ ಮಹಾನ್ ಶರಣರು ಎಂದು ಭೋವಿ ಸಮುದಾಯದ ತಾಲೂಕಾಧ್ಯಕ್ಷ ಸೂಚಪ್ಪ ದೇವರಮನಿ ಹೇಳಿದರು.

ಪಟ್ಟಣದ ಶಿವಯೋಗಿ ಸಿದ್ದರಾಮೇಶ್ವರ ಸರ್ಕಲ್‌ನಲ್ಲಿ ಜಯಂತಿ ನಿಮಿತ್ತ ಮೂರ್ತಿಗೆ ಪೂಜೆ ಸಲ್ಲಿಸಿ ಮಾತನಾಡಿ, ಕೆರೆ, ಸಿದ್ದರಾಮೇಶ್ವರರು ಬಾವಿ, ದೇವಾಲಯಗಳನ್ನು ಕಟ್ಟುವ ಮೂಲಕ ಹೆಸರುವಾಸಿಯಾಗಿದ್ದರು. ಆಗಿನ ಕಾಲದಲ್ಲಿ ಅನಿಷ್ಟ ಪದ್ಧತಿ ಹೋಗಲಾಡಿಸಲು ಶ್ರಮಿಸಿದವರು. ಅವರ ವಿಚಾರಧಾರೆ ಸರ್ವಕಾಲಕ್ಕೂ ಪ್ರಸ್ತುತವಾಗಿವೆ. ಪ್ರತಿಯೊಬ್ಬರು ಸಿದ್ದರಾಮೇಶ್ವರರ ತತ್ವಾದರ್ಶ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಗ್ರಾಪಂ ಸದಸ್ಯ ಮರೇಗೌಡ ಬೋದೂರು, ಹುಲಗಪ್ಪ ತೋರಗಲ್, ಬಸಪ್ಪ ತೋರಗಲ್, ರಾಮಣ್ಣ ಮನ್ನೆರಾಳ, ಹುಲ್ಲಪ್ಪ ಬಂಡಿವಡ್ಡರ, ಲಕ್ಷ್ಮಣ ಭೋವಿ, ಯಮನೂರ ಬೆಳಗಲ್, ಚಂದ್ರು ಬೆಳಗಲ್, ಕೃಷ್ಣಪ್ಪ, ಹುಲಗಪ್ಪ, ರಾಮಣ್ಣ, ಮುದುಕಪ್ಪ, ಶರಣಪ್ಪ, ವೆಂಕಟೇಶ್, ಚನ್ನು, ಅರ್ಜುನ್, ಮಹಾಗುಂಡಪ್ಪ ಇತರರು ಇದ್ದರು.