ಸ್ವಯಂ ವರ್ಚಸ್ಸಿನಿಂದ ಅಧಿಕಾರ ಹಿಡಿದ ಸಿದ್ದರಾಮಯ್ಯ

| Published : Nov 09 2025, 01:15 AM IST

ಸಾರಾಂಶ

ರಾಜ್ಯದಲ್ಲಿ ಸುಮಾರು ೫೦ ಲಕ್ಷ ಮಂದಿ ಕುರುಬ ಸಮಾಜದವರು ಇದ್ದರೂ ಸಹ ಸಿದ್ದರಾಮಯ್ಯ ರಾಜ್ಯದ ೭.೫ ಕೋಟಿ ಜನತೆಯ ಪರವಾಗಿ ಕೆಲಸ ನಿರ್ವಹಿಸುವ ಮೂಲಕ ರಾಜಕಾರಣ ಹೇಗೆ ಮಾಡಬೇಕೆಂಬುವುದಕ್ಕೆ ದಾರಿ ದೀಪವಾಗಿದ್ದಾರೆ. ತುಳಿತಕ್ಕೆ ಒಳಗಾದವರ ಪರವಾಗಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ಹೆಸರು ಇತಿಹಾಸದಲ್ಲಿ ದಾಖಲಾರ್ಹ

ಕನ್ನಡಪ್ರಭ ವಾರ್ತೆ ಕೋಲಾರಜೀವನದಲ್ಲಿ ಸಹಬಾಳ್ವೆ ಮುಖ್ಯವೇ ಹೊರತು ಜಾತಿಗಳಲ್ಲ. ದೇಶವು ಸಾರ್ವಜನಾಂಗೀಯ ತೋಟ ಎಂಬುವುದನ್ನು ಮರೆಯಬಾರದು, ಕನಕದಾಸರು ಕುಲ ಕುಲವೆಂದು ಹೊಡೆದಾಡದಿರಿ ಎಂದು ಸಾರಿದ್ದಾರೆ. ಬಸವಣ್ಣನವರ ಅನುಭವ ಮಂಟಪದ ಸಂದೇಶಗಳೇ ಅಂಬೇಡ್ಕರ್ ಸಂವಿಧಾನ ರಚನೆಗೆ ಪ್ರೇರಣೆಯಾಗಿತ್ತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅಭಿಪ್ರಾಯಪಟ್ಟರು. ನಗರದ ಎಸ್.ಎನ್.ಆರ್. ವೃತ್ತದಲ್ಲಿ ೫೩೮ನೇ ಶ್ರೀ ಕನಕ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿನ ೫ ಗ್ಯಾರೆಂಟಿ ಯೋಜನೆಗಳಿಗೆ ವರ್ಷಕ್ಕೆ ೬೦ ಸಾವಿರ ಕೋಟಿ ರು.ಗಳು ವೆಚ್ಚವಾಗುತ್ತಿವೆ. ಗ್ಯಾರಂಟಿ ಯೋಜನಾ ಸೌಲಭ್ಯಗಳು ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ, ಜಾತ್ಯಾತೀತವಾಗಿ ಸೌಲಭ್ಯ ಕಲ್ಪಿಸಲಾಗಿದೆ ಎಂದರು.

ಸ್ವಯಂ ವರ್ಚಸ್ಸಿನಿಂದ ಆಡಳಿತ ಚುಕ್ಕಾಣಿಸಿಎಂ ಆಗಿ ಸಿದ್ದರಾಮಯ್ಯ ಯಾವುದೇ ಲಕೋಟೆ ಮೂಲಕ ಆಗಲಿಲ್ಲ, ರಾಜ್ಯದ ೧೩೬ ಶಾಸಕರ ಸ್ವಯಂ ವರ್ಚಸ್ಸಿನಿಂದ ಬೆಂಬಲ ಪಡೆದು ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ, ನಮ್ಮ ಬೆಳವಣಿಗೆಗೆ ಏಣಿಯಾಗಿ ಆಸರೆ ನೀಡಿರುವಂತ ಸಿದ್ದರಾಮಯ್ಯರ ಸಹಕಾರದಿಂದ ನಾವೆಲ್ಲಾ ಈ ಸ್ಥಾನ ಅಲಂಕರಿಸಲು ಸಾಧ್ಯವಾಗಿದೆ ಎಂದು ಹೇಳಿದರು. ರಾಜ್ಯದಲ್ಲಿ ಸುಮಾರು ೫೦ ಲಕ್ಷ ಮಂದಿ ಕುರುಬ ಸಮಾಜದವರು ಇದ್ದರೂ ಸಹ ಸಿದ್ದರಾಮಯ್ಯ ರಾಜ್ಯದ ೭.೫ ಕೋಟಿ ಜನತೆಯ ಪರವಾಗಿ ಕೆಲಸ ನಿರ್ವಹಿಸುವ ಮೂಲಕ ರಾಜಕಾರಣ ಹೇಗೆ ಮಾಡಬೇಕೆಂಬುವುದಕ್ಕೆ ದಾರಿ ದೀಪವಾಗಿದ್ದಾರೆ. ತುಳಿತಕ್ಕೆ ಒಳಗಾದವರ ಪರವಾಗಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ಹೆಸರು ಇತಿಹಾಸದಲ್ಲಿ ದಾಖಲಾರ್ಹ ಎಂದು ತಿಳಿಸಿದರು.ಜಿಲ್ಲೆಯ ಅಭಿವೃದ್ದಿಗೆ ₹೧೨೪೦ ಕೋಟಿಸಿದ್ದರಾಮಯ್ಯರನ್ನು ಯಾವುದೇ ಸಂದರ್ಭದಲ್ಲೂ ಬದಲಿಸುವ ಸಾಧ್ಯತೆಗಳಿಲ್ಲ. ಪಕ್ಷದ ಹೈಕಮಾಂಡ್‌ಗೆ ಸಿದ್ದರಾಮಯ್ಯರ ಮೇಲೆ ಸಮರ್ಪಕ ಆಡಳಿತ ನೀಡುತ್ತಾರೆಂಬ ಧೃಡವಾದ ವಿಶ್ವಾಸವಿದೆ, ಕೋಲಾರ ಜಿಲ್ಲೆಯ ಅಭಿವೃದ್ದಿಗಾಗಿ ನಾನು ಉಸ್ತುವಾರಿ ಮಂತ್ರಿಯಾಗಿ ಕಳೆದ ಎರಡೂವರೆ ವರ್ಷದಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಕೋಲಾರ ಜಿಲ್ಲೆಯ ಅಭಿವೃದ್ದಿಗೆ ಸುಮಾರು ೧೨೪೦ ಕೋಟಿ ರು.ಗಳನ್ನು ರಾಜ್ಯ ಸರ್ಕಾರದಿಂದ ನೀಡಲಾಗಿದೆ ಎಂದರು. ಕಾಲುವೆಗಳ ಅಭಿವೃದ್ದಿಗೆ ೧೦೦ ಕೋಟಿ ರೂ. ಮೆಡಿಕಲ್ ಕಾಲೇಜಿಗೆ ೬.೫ ಕೋಟಿ ರೂ, ನಗರದ ರಸ್ತೆ ಅಭಿವೃದ್ದಿಗೆ ೧೦೦ ಕೋಟಿ ರೂಗಳನ್ನು ಸಿಎಂ ಮಾದ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಹಾಗೂ ಕೊತ್ತೂರು ಮಂಜುನಾಥ್ ತಂದಿದ್ದಾರೆ. ೨೦೨೮ರಲ್ಲಿ ಕಾಂಗ್ರೆಸ್ ಸರ್ಕಾರ ಮತ್ತೆ ಆಡಳಿತ ಚುಕ್ಕಾಣಿ ಹಿಡಿಯುವುದು ಖಚಿತ ಎಂದು ಭವಿಷ್ಯ ನುಡಿದರು. ಸಮುದಾಯಕ್ಕೂ ಸಹಾಯದ ಹಸ್ತಕೋಲಾರ ಜಿಲ್ಲಾ ಅಭಿವೃದ್ದಿಯ ಜೂತೆಗೂ ಸಮುದಾಯದ ಅಭಿವೃದ್ದಿಗೂ ಕೈಜೋಡಿಸುವೆ. ವಿದ್ಯಾರ್ಥಿ ನಿಲಯದ ಕಟ್ಟಡದ ಕಾಮಗಾರಿಯು ಬಹುವರ್ಷದಿಂದ ನೆನಗುದಿಗೆ ಬಿದ್ದಿದ್ದು, ಇದಕ್ಕೆ ಒಂದೂವರೆ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿ ಇದರ ಉಸ್ತುವಾರಿ ಶ್ರೀ ಕನಕ ಸೇವಾ ಮಂಡಳಿಗೆ ವಹಿಸಲಾಗುವುದು. ಇದಕ್ಕೆ ನನ್ನ ಅನುದಾನದಿಂದ ೧೦ ಲಕ್ಷ ರು, ಶಾಸಕ ಕೊತ್ತೂರು ಮಂಜುನಾಥ್ ಅವರ ಅನುದಾನದಿಂದ ೫ ಲಕ್ಷ ರು.ಗಳನ್ನು, ವರ್ತೂರು ಪ್ರಕಾಶ್ ೫ ಲಕ್ಷ ರೂ ಸೇರಿಂದ ಒಟ್ಟು ೨೦ ಲಕ್ಷ ರೂ ನೀಡಲಾಗುವುದು ಹಾಗೂ ಇನ್ನು ೬ ತಿಂಗಳಲ್ಲೀ ಪೂರ್ಣಗೊಳಿಸುವ ನಿರೀಕ್ಷೆ ಹೊಂದಿರುವುದಾಗಿ ತಿಳಿಸಿದರು. ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಬಾಕರ್, ಶಾಸಕ ಕೊತ್ತೂರು ಮಂಜುನಾಥ್, ಮಾಜಿ ಸಚಿವ ವರ್ತೂರು ಪ್ರಕಾಶ್, ಸಂಸದ ಎಂ.ಮಲ್ಲೇಶ್ ಬಾಬು, ಎಂಎಲ್ಸಿಗಳಾದ ಎಂ.ಎಲ್.ಅನಿಲ್ ಕುಮಾರ್, ಇಂಚರ ಗೋವಿಂದರಾಜು, ನಗರಸಭೆ ಅಧ್ಯಕ್ಷೆ ಲಕ್ಷ್ಮೀ ದೇವಮ್ಮ, ಜಿಲ್ಲಾ ಗ್ಯಾರೆಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ವೈ.ಶಿವಕುಮಾರ್, ಕುಡಾ ಅಧ್ಯಕ್ಷ ಮಹಮ್ಮದ್ ಹನೀಫ್, ಜೆಡಿಎಸ್ ಮುಖಂಡ ಸಿ.ಎಂ.ಆರ್.ಶ್ರೀನಾಥ್ ಮತ್ತಿತರರು ಇದ್ದರು.