ಸಾಮಾಜಿಕ ಕಳಕಳಿ ಹೊಂದಿದ್ದ ಸಿದ್ದೇಶ್ವರ ಶ್ರೀಗಳು: ಸಿ.ಎಂ. ಬಂಡಗರ

| Published : Jan 03 2024, 01:45 AM IST

ಸಾರಾಂಶ

ಇಂಡಿ: ಪಟ್ಟಣದ ವಿದ್ಯಾಸಂಸ್ಥೆ ಆರ್‌.ಎಂ.ಶಹಾ ಪಬ್ಲಿಕ್ ಶಾಲೆಯಲ್ಲಿ ಮಂಗಳವಾರ ಶ್ರೀ ಸಿದ್ದೇಶ್ವರ ಸ್ವಾಮೀಜಿ ಪುಣ್ಯಸ್ಮರಣೆ ಅಂಗವಾಗಿ ಗುರುನಮನ ಮಹೋತ್ಸವ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಇಂಡಿ:

ಪಟ್ಟಣದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಆರ್‌.ಎಂ.ಶಹಾ ಪಬ್ಲಿಕ್ ಶಾಲೆಯಲ್ಲಿ ಮಂಗಳವಾರ ಶ್ರೀ ಸಿದ್ದೇಶ್ವರ ಸ್ವಾಮೀಜಿ ಪುಣ್ಯಸ್ಮರಣೆ ಅಂಗವಾಗಿ ಗುರುನಮನ ಮಹೋತ್ಸವ ಹಮ್ಮಿಕೊಳ್ಳಲಾಗಿತ್ತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ನಾದ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಿ.ಎಂ. ಬಂಡಗರ ಮಾತನಾಡಿ, ನಡೆದಾಡುವ ದೇವರು ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿ ನಮ್ಮನಗಲಿ ಇಂದಿಗೆ ಒಂದು ವರ್ಷವಾಯಿತು. ಶ್ರೀಗಳು ತಮ್ಮ ಆಧ್ಯಾತ್ಮಿಕ ಪ್ರವಚನದ ಮೂಲಕ ಸಾಮಾಜಿಕ ಕಳಕಳಿ ಹೊಂದಿದವರು. ಅವರು ಸದಾ ಮಕ್ಕಳಿಗೆ ಮಾರ್ಗದರ್ಶನ ಮತ್ತು ತತ್ವಗಳನ್ನು ಬೋಧಿಸುವ ಮೂಲಕ ದಾರಿದೀಪವಾಗಿದ್ದಾರೆ. ಶ್ರೀಗಳ ಸರಳತೆ, ಆಧ್ಯಾತ್ಮಿಕ ಪ್ರವಚನ, ನಡೆ-ನುಡಿ ವಿಚಾರಗಳು ಇಂದಿನ ಜನಾಂಗಕ್ಕೆ ಮಾದರಿಯಾಗಿವೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಿ.ಆರ್ . ಶಹಾ ಮಾತನಾಡಿ, ಶ್ರೀ ಸಿದ್ದೇಶ್ವರ ಸ್ವಾಮೀಜಿ ಜೀವನ ತತ್ವಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಶ್ರೀಗಳು ಸದಾ ಸಹಜತೆ ಸರಳತೆಯಿಂದ ನಿಸರ್ಗದಲ್ಲಿ ದೇವರನ್ನು ಕಂಡವರು. ಹಾಗೆಯೇ ಪ್ರತಿಯೊಬ್ಬರಿಗೂ ಆಧ್ಯಾತ್ಮದ ಮೂಲಕ ಭಕ್ತಿಯ ಮಾರ್ಗವನ್ನು ತೋರಿದವರು. ಇಂತಹ ಮಹಾನ್ ಶರಣರ ತತ್ವ ಆದರ್ಶಗಳು ಮಕ್ಕಳು ಬದುಕಿನಲ್ಲಿ ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.

ನಾದ ಪ್ರೌಢಶಾಲೆಯ ದೈಹಿಕ ಶಿಕ್ಷಕ ಸಂಗನಗೌಡ ಹಚ್ಚಡದ ಮಾತನಾಡಿದರು. ಸಂಸ್ಥೆಯ ಆಡಳಿತಾಧಿಕಾರಿ ಕಲ್ಪನಾ ಶಹಾ, ನಿಶ್ಕಾಂತ ಶಹಾ, ಕಾಲೇಜು ವಿಭಾಗದ ಪ್ರಾಂಶುಪಾಲೆ ಪರವೀನ್ ಜಮಾದಾರ್ , ಶಿಕ್ಷಕ ವೃಂದ ಹಾಗೂ ಸಹ ಸಿಬ್ಬಂದಿ, ಮಕ್ಕಳು ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಸವಿತಾ ಸಾಲಿ ಶ್ರೀಗಳ ಕುರಿತು ಮಾತನಾಡಿದರು. ರೂಪಾ ಸ್ವಾಗತಿಸಿದರು. ಶಿಕ್ಷಕ ಬಿ ಎ. ಕಡಿಹಳ್ಳಿ ನಿರೂಪಿಸಿದರು, ಭಾಗ್ಯಜ್ಯೋತಿ ಕೋಳಾರಿ ವಂದಿಸಿದರು.