ಸಿದ್ದೇಶ್ವರ ಶ್ರೀ, ಬಸವೇಶ್ವರ ಹೆಸರು ನಾಮಕರಣಕ್ಕೆ ಒತ್ತಾಯ

| Published : Oct 27 2024, 02:44 AM IST

ಸಿದ್ದೇಶ್ವರ ಶ್ರೀ, ಬಸವೇಶ್ವರ ಹೆಸರು ನಾಮಕರಣಕ್ಕೆ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ವಿಜಯಪುರ ವಿಮಾನ ನಿಲ್ದಾಣಕ್ಕೆ ಶ್ರೀ ಬಸವೇಶ್ವರ ಹೆಸರು, ಗಾಂಧಿ ವೃತ್ತದ ನವೀಕರಣ, ರೈಲ್ವೆ ನಿಲ್ದಾಣಕ್ಕೆ ಶ್ರೀ ಸಿದ್ದೇಶ್ವರ ಶ್ರೀಗಳ ಹೆಸರನ್ನು ಮರುನಾಮಕರಣ ಮಾಡಬೇಕು ಮತ್ತು ವಿಜಯಪುರ ನಗರದ ಕಿತ್ತೂರ ರಾಣಿ ಚನ್ನಮ್ಮ ರಂಗ ಮಂದಿರ ನವೀಕರಗೊಳಿಸಿ ನಾಟಕ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ನಡೆಸುತ್ತಿರುವ ಧರಣಿ ೪ನೇ ದಿನಕ್ಕೆ ಕಾಲಿಟ್ಟಿದೆ.

ಕನ್ನಡಪ್ರಭ ವಾರ್ತೆ ವಿಜಯಪುರ

ವಿಜಯಪುರ ವಿಮಾನ ನಿಲ್ದಾಣಕ್ಕೆ ಶ್ರೀ ಬಸವೇಶ್ವರ ಹೆಸರು, ಗಾಂಧಿ ವೃತ್ತದ ನವೀಕರಣ, ರೈಲ್ವೆ ನಿಲ್ದಾಣಕ್ಕೆ ಶ್ರೀ ಸಿದ್ದೇಶ್ವರ ಶ್ರೀಗಳ ಹೆಸರನ್ನು ಮರುನಾಮಕರಣ ಮಾಡಬೇಕು ಮತ್ತು ವಿಜಯಪುರ ನಗರದ ಕಿತ್ತೂರ ರಾಣಿ ಚನ್ನಮ್ಮ ರಂಗ ಮಂದಿರ ನವೀಕರಗೊಳಿಸಿ ನಾಟಕ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ನಡೆಸುತ್ತಿರುವ ಧರಣಿ ೪ನೇ ದಿನಕ್ಕೆ ಕಾಲಿಟ್ಟಿದೆ.ಈ ವೇಳೆ ಉದ್ಯಮಿ ಎಸ್.ವಿ.ಪಾಟೀಲ ಸಿಂದಗಿ ಮಾತನಾಡಿ, ಬಸವೇಶ್ವರರರು ಜಗತ್ತಿಗೆ ವಚನಗಳ ಮೂಲಕ ಜ್ಞಾನ ದೀವಿಗೆ ಬೆಳಗಿದವರು. ಜಿಲ್ಲೆಯಲ್ಲಿ ಜನಿಸಿ ಜಗತ್ತಿಗೆ ಮಾದರಿಯಾದವರು. ಇಂತಹ ಮಹನೀಯರ ಹೆಸರು ನೆನಪಿಸಿಕೊಳ್ಳುವದು ನಮ್ಮ ಆದ್ಯ ಕರ್ತವ್ಯ. ಅದೇ ರೀತಿ ನಡೆದಾಡುವ ದೇವರೆಂದು ಕರೆಸಿಕೊಂಡ ಸಿದ್ದೇಶ್ವರ ಸ್ವಾಮೀಜಿಗಳು ನಮಗೆ ಜೀವನದ ಪಾಠ ಹೇಳಿಕೊಟ್ಟವರು. ಅವರು ಯಾವುದೇ ಆಸೆ ಆಮಿಗ್ಳಿಗೆ ಒಳಗಾಗದೇ ಬಿಳಿಬಟ್ಟೆಯಂತೆ ಜೀವನ ಸಾಗಿಸಿದವರು. ಇವರ ಜೀವನ ಆದರ್ಶಗಳು ನಮ್ಮೆಲ್ಲರಿಗೂ ಆದರ್ಶಪ್ರಯವಾಗಿವೆ ಎಂದು ಹೇಳಿದರು.

ರಾಷ್ಟ್ರಪಿತ ಮಹಾತ್ಮಾಗಾಂಧಿಯವರ ಸರಳ ಸಜ್ಜನಿಕೆಯ ಜೀವನ, ಶಾಂತಿಯಿಂದಲೇ ಬ್ರಿಟೀಷರ ಮನವೊಲಿಸುವಲ್ಲಿ ಪ್ರಮುಖಪಾತ್ರವನ್ನು ನಿರ್ವಹಿಸಿದ ಮಹಾತ್ಮಾಗಾಂಧಿಯವರು ಹೆಸರು ಸಹ ನೆನಪಿನಲ್ಲಿಟ್ಟುಕೊಂಡು ಜೀವನ ಸಾಗಿಸಬೇಕು. ಅದರಂತೆ ಇಂತಹ ಮಹನೀಯರ ಹೆಸರನ್ನು ಮುಖ್ಯ ಸ್ಥಳಗಳಿಗೆ ಇಡುವ ಮೂಲಕ ಅವರಿಗೆ ಗೌರವ ನೀಡಿದಂತಾಗುತ್ತದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಭೀಮಾ ಶಂಕರ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಎಂ.ಆರ್.ಪಾಟೀಲ, ಜಿಲ್ಲಾಧ್ಯಕ್ಷ ಸಂಗಮೇಶ ಗೌಡ ದಾಶ್ಯಾಳ, ಬರಟಗಿ ಗ್ರಾಮ ಪಂಚಾಯತಿ ಸದಸ್ಯ ಗೋವಿಂದ ಶಿಂಧೆ, ದತ್ತು ಕಾಟಕರ, ಬರಟಗಿ ಎಲ್.ಟಿ.ನಂ.೦೨ರ ಗ್ರಾಪಂ ಸದಸ್ಯರಾದ ರಾಜು ನಾಯಕ, ಸದಾಶಿವ ಪತ್ತಾರ, ವಿರೇಶ ಗೆಣ್ಣುರ, ಇಸಾಕ ಮುಲ್ಲಾ, ರವಿಕಾಂತ ಬಿರಾದಾರ, ಪಿಂಟು ಗಬ್ಬೂರ, ಸಿದ್ದರಾಜ ಹೋಳಿ, ಮುಕಾದಾಸ್ ಇನ್ನಾಮದಾರ, ಚನ್ನಪ್ಪಗೌಡ ಬಿರಾದಾರ, ರಿಯಾಜ ಪಾಂಡು, ಶಿವರಾಜಗೌಡ ಪಾಟೀಲ, ಆನಂದ ಹೂನ್ನೂರ, ಉಮೇಶ ಚಲವಾದಿ, ಅಶೋಕ ಕೊಡಗ, ಮೀಣಾ ಕುಂದನಗಾರ, ಶರಣು ಹೂಗಾರ, ಬಸವರಾಜ ಸಿಂಗನಳ್ಳಿ, ಸಿದ್ರಾಮಪ್ಪ ಅವಟಿ, ಸಂತೋಷ ಮನಗೂಳಿ ಮುಂತಾದವರು ಇದ್ದರು.