ಸಾರಾಂಶ
ಕನ್ನಡಪ್ರಭ ವಾರ್ತೆ ತಿಕೋಟಾ ಶ್ರೀ ಸಿದ್ದೇಶ್ವರ ಶ್ರೀಗಳು ಸರಳತೆಯ ಜೀವನ ನಡೆಸಿ ಜನಮಾನಸದಲ್ಲಿ ನೆಲೆಸಿದರು. ಅಂತಹ ಮಹಾನ್ ವ್ಯಕ್ತಿಯನ್ನು ಪಡೆದ ನಮ್ಮ ನಾಡು ಪುಣ್ಯದಭೂಮಿ. ಈ ನಾಡಿನಲ್ಲಿ ಹುಟ್ಟಿದ ನಾವೆಲ್ಲ ಪುಣ್ಯವಂತರು ಎಂದು ಹೊನವಾಡದ ಪ್ರವಚನಕಾರ ಪ.ಪು.ಬಾಬುರಾವ ಮಹಾರಾಜ ಹೇಳಿದರು.
ಕನ್ನಡಪ್ರಭ ವಾರ್ತೆ ತಿಕೋಟಾಶ್ರೀ ಸಿದ್ದೇಶ್ವರ ಶ್ರೀಗಳು ಸರಳತೆಯ ಜೀವನ ನಡೆಸಿ ಜನಮಾನಸದಲ್ಲಿ ನೆಲೆಸಿದರು. ಅಂತಹ ಮಹಾನ್ ವ್ಯಕ್ತಿಯನ್ನು ಪಡೆದ ನಮ್ಮ ನಾಡು ಪುಣ್ಯದಭೂಮಿ. ಈ ನಾಡಿನಲ್ಲಿ ಹುಟ್ಟಿದ ನಾವೆಲ್ಲ ಪುಣ್ಯವಂತರು ಎಂದು ಹೊನವಾಡದ ಪ್ರವಚನಕಾರ ಪ.ಪು.ಬಾಬುರಾವ ಮಹಾರಾಜ ಹೇಳಿದರು.ತಿಕೋಟಾ ತಾಲೂಕಿನ ಬಾಬಾನಗರ ಗ್ರಾಮದ ಮಹಾತ್ಮ ಗಾಂಧೀಜಿ ಪ್ರೌಢ ಶಾಲೆಯಲ್ಲಿ ಸೋಮವಾರ ಶತಮಾನದ ಸಂತ ಸಿದ್ದೇಶ್ವರ ಶ್ರೀಗಳ 84ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಿಕೋಟಾ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ರಾಮಯ್ಯ ಲಂಕ್ಕುಡಿಮಠ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪಿತವಾದ ಸಂಸ್ಥೆ. ಕನ್ನಡ ಮಣ್ಣಿನ ಋಣ ತೀರಿಸಬೇಕು. ಎಲ್ಲಭಾಷೆ ಕಲಿಯೋಣ, ಇಂದಿನ ದಿನಗಳಲ್ಲಿ ಅವಶ್ಯಕ ಕನ್ನಡ ಭಾಷೆ,ಸಾಹಿತ್ಯ. ಅದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಧೃಡ ಸಂಕಲ್ಪ ಮಾಡಬೇಕು ಎಂದರು,ಅಧ್ಯಕ್ಷತೆಯನ್ನು ಬಾಬಾನಗರದ ಮಹಾತ್ಮ ಗಾಂಧಿಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ರಾವಸಾಬ ಬಿರಾದಾರ ವಹಿಸಿದ್ದರು, ಕಾಶೀನಾಥ ಮೊಗಲಿ, ಬೀರಪ್ಪ ಖಂಡೇಕಾರ, ಕಸಾಪ ಗೌರವ ಕಾರ್ಯದರ್ಶಿ ನಿಂಗಪ್ಪ ಕಲಘಟಗಿ ಇದ್ದರು.