ಸಾರಾಂಶ
ಯಾದಗಿರಿ: ಭೂಮಿಗೆ ಗುರುವಾಗಿ ಬಂದ ಸದ್ಗುರು ಸಿದ್ಧಾರೂಢರು ಸಾಕ್ಷಾತ್ ಪರಶಿವನ ಅವತಾರ ಮತ್ತು ಮನುಕುಲದ ಆರಾಧ್ಯ ದೈವ ಎಂದು ಮಠದ ಗುರುಗಳಾದ ಅಭಿನವ ನಿಜಗುಣ ಮಹಾಸ್ವಾಮಿಗಳು ಹೇಳಿದರು.
ಜಿಲ್ಲೆಯ ವಡಗೇರಾ ತಾಲೂಕಿನ ಬೆಂಡೆಬೆಂಬಳಿ ಗ್ರಾಮದ ಸಿದ್ಧಾರೂಢರ ಮಠದಲ್ಲಿ ಗ್ರಾಮಸ್ಥರು ಹಮ್ಮಿಕೊಂಡಿದ್ದ ಸದ್ಗುರು ಸಿದ್ಧರೂಢರ ಜಯಂತ್ಯುತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಸರ್ವರ ಭಾವನೆಗಳಿಗೆ ಸ್ಪಂದಿಸಿ ನೊಂದ ಜೀವಿಗಳಿಗೆ ಸಾಂತ್ವನ ನೀಡುತ್ತಿದ್ದರು. ಲೋಕಕಲ್ಯಾಣಕ್ಕಾಗಿ ದೇಶ ಸಂಚಾರ ಮಾಡಿ ಅಜ್ಞಾನ ಅಂಧಕಾರದಲ್ಲಿರುವ ಜನರಿಗೆ ಸುಜ್ಞಾನ ನೀಡುವ ಮೂಲಕ ಬೋಧನೆ ಗೈಯುತ್ತಿದ್ದರು ಮತ್ತು ಅವರು ದೇಶಪ್ರೇಮಿಯಾಗಿದ್ದರು ಎಂದರು.ಸಿದ್ಧಾರೂಢರು ಹುಬ್ಬಳ್ಳಿಯಲ್ಲಿ ನಡೆದ ಸ್ವಾತಂತ್ರ್ಯ ಚಳುವಳಿಯ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿದ್ದರು. ಅಹಿಂಸಾ ತತ್ವವನ್ನು ಪ್ರತಿಪಾದಿಸುತ್ತಾ, ಸಮಾಜ ಸುಧಾರಣೆಗೆ ಶ್ರಮಿಸಿದಂತ ಮಹಾನ್ ಚೇತನರಾಗಿದ್ದರು. ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸಿದರು. ಜಯಂತ್ಯುತ್ಸವ ಅಂಗವಾಗಿ ಸದಾನಂದ ಮಹಾರಾಜರ ನೇತೃತ್ವದಲ್ಲಿ ಐದು ದಿನಗಳ ಕಾಲ ಪ್ರವಚನ ಕಾರ್ಯಕ್ರಮ ಜರುಗಿತು. ಬುದೇಣ್ಣಗೌಡ ಬೆಳಿಕಟ್ಟಿ, ರಘುನಾಥ ರೆಡ್ಡಿ, ಸೂಗುರೆಡ್ಡಿ, ಬಸಯ್ಯಸ್ವಾಮಿ ಒಳಗಿನಮಠ, ಸಂಗಪ್ಪಗೌಡ ಹಳಿಮನಿ, ಚನ್ನಪ್ಪಗೌಡ, ಸಿದ್ದಯ್ಯ ಸ್ವಾಮಿ ರಾಜಾಪುರ, ಬಸನಗೌಡ, ಈರಣ್ಣಗೌಡ, ಮಲ್ಲು, ದುರ್ಗಪ್ಪ ಚಿಗರಿ, ಪ್ರಕಾಶ್ ಸ್ವಾಮಿ, ಗುರುಬಸಪ್ಪ, ಹನುಮಂತ, ಮಲ್ಲಿಕಾರ್ಜುನ್ ಕಟ್ಟಿಮನಿ, ನಿಂಗಪ್ಪ ದಂಡಿನ್, ಬಸವರಾಜ ಕಾಟರಪ್ಪಲ್ಲಿ, ಜಿಬಲಪ್ಪ ಕಟ್ಟಿಮನಿ, ಸೋಮಪ್ಪ ಗೋಸಿ, ಪ್ರಭು ಹಾಲಗೇರಾ ಇತರರಿದ್ದರು.