ಸಿದ್ಧೇಶ್ವರ ಶ್ರೀಗಳ ಆಧ್ಯಾತ್ಮಿಕ ಶ್ರೇಷ್ಠ ಚಿಂತನೆಗಳು ದಾರಿದೀಪ

| Published : Jan 17 2024, 01:45 AM IST

ಸಿದ್ಧೇಶ್ವರ ಶ್ರೀಗಳ ಆಧ್ಯಾತ್ಮಿಕ ಶ್ರೇಷ್ಠ ಚಿಂತನೆಗಳು ದಾರಿದೀಪ
Share this Article
  • FB
  • TW
  • Linkdin
  • Email

ಸಾರಾಂಶ

ಇಂಡಿ ತಾಲೂಕಿನ ಹೊರ್ತಿ ಗ್ರಾಮದಲ್ಲಿ ಶ್ರೀರೇವಣಸಿದ್ಧೇಶ್ವರ ಹಳೇ ದೇವಸ್ಥಾನದ, ದೇವಸ್ಥಾನದ ಆವರಣದಲ್ಲಿ ಸಿದ್ಧೇಶ್ವರ ಸ್ವಾಮೀಜಿಗಳ ನುಡಿನಮನ ಹಾಗೂ ಧ್ಯಾನ ಮಂದಿರ ಉದ್ಘಾಟನೆಯಲ್ಲಿ ಸಂಸದ ರಮೇಶ ಜಿಗಜಿಣಗಿ ಹೇಳಿಕೆ.

ಕನ್ನಡಪ್ರಭ ವಾರ್ತೆ ಇಂಡಿ

ಮಹಾನ್ ಸಂತ ಸಿದ್ಧೇಶ್ವರ ಶ್ರೀಗಳ ತತ್ವಾದರ್ಶ ಹಾಗೂ ಆಧ್ಯಾತ್ಮಿಕ ಚೇತನದ ಶ್ರೇಷ್ಠ ಚಿಂತನೆಗಳು ನಮಗೆಲ್ಲಾ ದಾರಿದೀಪವಾಗಿವೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ತಾಲೂಕಿನ ಹೊರ್ತಿ ಗ್ರಾಮದಲ್ಲಿ ಶ್ರೀರೇವಣಸಿದ್ಧೇಶ್ವರ ಹಳೇ ದೇವಸ್ಥಾನದ, ದೇವಸ್ಥಾನದ ಆವರಣದಲ್ಲಿ ಭಾನುವಾರ ಸಿದ್ಧೇಶ್ವರ ಸ್ವಾಮೀಜಿಗಳ ನುಡಿನಮನ ಹಾಗೂ ಧ್ಯಾನ ಮಂದಿರ ಉದ್ಘಾಟಿಸಿ ಮಾತನಾಡಿದ ಅವರು, ಇಡೀ ಮನುಕುಲಕ್ಕೆ ಸಿದ್ಧೇಶ್ವರ ಶ್ರೀಗಳ ತತ್ವಾದರ್ಶಗಳು ಆದರ್ಶಪ್ರಾಯವಾಗಿ, ಇಂತಹ ಮಹಾನ್ ಸಂತರನ್ನು ಸ್ಮರಿಸುವುದೇ ಶ್ರೇಷ್ಠ ಕಾಯಕ ಎಂದರು.

ಕಾತ್ರಾಳ ಗುರುದೇವಾಶ್ರಮದ ಅಮೃತಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿ, ಸಿದ್ಧೇಶ್ವರ ಶ್ರೀಗಳು ಆಧ್ಯಾತ್ಮಿಕ ಪ್ರವಚನದ ಮೂಲಕ ಜನರನ್ನು ಸನ್ಮಾರ್ಗದ ದಾರಿ ತೋರಿದ ಮಹಾನ್ ಸಂತರಾಗಿದ್ದ ಅವರು ಇಡೀ ಮನುಕುಲಕ್ಕೆ ಸಿದ್ಧೇಶ್ವರ ಶ್ರೀಗಳ ತತ್ವಾದರ್ಶಗಳು ಆದರ್ಶಪ್ರಾಯವಾಗಿ ಇಂತಹ ಮಹಾನ್ ಸಂತರನ್ನು ಸ್ಮರಿಸುವುದೇ ಶ್ರೇಷ್ಠ ಕಾಯಕ ಎಂದರು.

ಜಮಖಂಡಿ ಓಂಕಾರ ಆಶ್ರಮದ ಮಾತೋಶ್ರೀ ಪ್ರವಚನಕಾರೆ ಶ್ರೀದೇವಿ ತಾಯಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಜ್ಞಾನಾಮೃತದ ಮೂಲಕ ಇಡೀ ನಾಡಿಗೆ ಚಿರಪರಿಚಿತರಾದ ಸಿದ್ಧೇಶ್ವರ ಶ್ರೀಗಳ ಜೀವನ ಶೈಲಿ ಮಾದರಿಯಾಗಿದೆ. ಯಾವುದೇ ಆಸೆಗಳಿಗೆ ಬಲಿಯಾಗದೆ, ಅತ್ಯಂತ ಸರಳ ಜೀವನದಿಂದ ಅವರು ಹೆಸರಾಗಿದ್ದಾರೆ. ಲೌಕಿಕ ಲಾಲಸೆ ಬಿಡಬೇಕು ಎಂಬ ತತ್ವ ತಿಳಿಸಿದ್ದಾರೆ. ಶ್ರೀಗಳ ವಾಣಿ ಮನಕುಲಕ್ಕೆ ಶಾಂತಿಯ ಸಂದೇಶ ಸಾರುವ ಖಣಿಯಾಗಿದೆ. ಅವರ ಪ್ರತಿಯೊಂದು ವಿಚಾರಧಾರೆ ಮಾದರಿಯಾಗಿ ಎಲ್ಲರಿಗೂ ಮಾರ್ಗದರ್ಶಕವಾಗಿದೆ ಎಂದು ತಿಳಿಸಿದರು.

ದೇವಸ್ಥಾನ ಸಮಿತಿ ಅಧ್ಯಕ್ಷ ಅಣ್ಣಪ್ಫ ಸಾಹುಕಾರ ಖೈನೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಿದ್ದೇಶ್ವರ ಸ್ವಾಮೀಜಿಯವರು ಸಾದಾ ಸರಳ ಜೀವನ ಉಚ್ಚಮಟ್ಟದ ವಿಚಾರಧಾರೆಯಾಗಿ ಅವರೊಬ್ಬ ಮಹಾನ್ ಸಂತ, ನಡೆದಾಡುವ ದೇವರು ಎನಿಸಿಕೊಂಡ ಅವರ ಸರಳತೆಯ ಸೂತ್ರದ ನಡೆ, ನುಡಿ, ಆಚಾರ, ವಿಚಾರ, ಆದರ್ಶಗಳು ಸಮಾಜಕ್ಕೆ ಆದರ್ಶಪ್ರಾಯವಾಗಿವೆ ಎಂದರು.

ಈ ವೇಳೆ ನಿವೃತ್ತ ಪ್ರಾಚಾರ್ಯ ಬಸವರಾಜ ಸಾವಕಾರ, ಗುರುಲಿಂಗಪ್ಪ ಆರ್‌.ತೇಲಿ, ಸಂಸ್ಥೆಯ ನಿರ್ದೇಶಕ ಗುರಪ್ಪ ರೇ.ಪೂಜಾರಿ, ಶ್ರೀಮಂತ ಗಡ್ಡದ (ಪೂಜಾರಿ), ಕಾಂತಯ್ಯ ಹಿರೇಮಠ, ಹಣಮಂತ ಬಿ.ಕುಂಬಾರ, ಶಂಕ್ರೆಪ್ಪ ಚ.ಡೊಳ್ಳಿ, ಬಡೇಸಾಬ್‌ ಸಾರವಾಡ, ಶ್ರೀನಿವಾಸ ಕಂದಗಲ್, ಶ್ರೀಮಂತ ತಳವಾರ, ಏಗಪ್ಪಗೌಡ ಬಿರಾದಾರ, ಶರಣು ಡೊಣಗಿ, ಪವನ ಕುಲಕರ್ಣಿ, ಶರಣಬಸು ಎಂ.ಡೊಣಗಿ, ಬಸವರಾಜ ಜಂಬಗಿ ಭಾಗವಹಿಸಿದ್ದರು. ಬಸವರಾಜ ಸಾವಕಾರ ಸ್ವಾಗತಿಸಿದರು. ಬಸವರಾಜ ಜಂಬಗಿ ನಿರೂಪಿಸಿದರು. ದುಂಡಪ್ಪ ತಾಂಬೆ ವಂದಿಸಿದರು.