ಸಿದ್ದು ಹೇಳಿಕೆ ಸಿಎಂ ಬದಲಾವಣೆ ಸಂದೇಶ - ಜಿಟಿಡಿ

| Published : Apr 03 2024, 01:33 AM IST / Updated: Apr 03 2024, 06:36 AM IST

gt devegowda

ಸಾರಾಂಶ

ವರುಣ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ 60 ಸಾವಿರ ಲೀಡ್‌ ಬಂದರೆ ತಮ್ಮನ್ನು ಯಾರೂ ಮುಟ್ಟಲಿಕ್ಕಾಗಲ್ಲ ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನಸ್ಸಿನ ಮಾತು. ಒಂದು ವೇಳೆ ಹಿನ್ನಡೆಯಾದರೆ ತಮ್ಮನ್ನು ಬದಲಾವಣೆ ಮಾಡುತ್ತಾರೆ ಎಂಬ ಸಂದೇಶವನ್ನು  ನೀಡಿದ್ದಾರೆ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ.

 ಬೆಂಗಳೂರು :  ವರುಣ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ 60 ಸಾವಿರ ಲೀಡ್‌ ಬಂದರೆ ತಮ್ಮನ್ನು ಯಾರೂ ಮುಟ್ಟಲಿಕ್ಕಾಗಲ್ಲ ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನಸ್ಸಿನ ಮಾತು. ಒಂದು ವೇಳೆ ಹಿನ್ನಡೆಯಾದರೆ ತಮ್ಮನ್ನು ಬದಲಾವಣೆ ಮಾಡುತ್ತಾರೆ ಎಂಬ ಸಂದೇಶವನ್ನು ಅವರು ರಾಜ್ಯದ ಜನತೆಗೆ ನೀಡಿದ್ದಾರೆ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆಗೆ ಮಾತನಾಡಿ, ರಾಜ್ಯದಲ್ಲಿ ಹಲವು ಸಮಯದಿಂದ ಮುಖ್ಯಮಂತ್ರಿ ಬದಲಾವಣೆ, ಉಪ ಮುಖ್ಯಮಂತ್ರಿ ಬದಲಾವಣೆ, ನಾಲ್ವರು ಉಪ ಮುಖ್ಯಮಂತ್ರಿಗಳ ನೇಮಕ ಸಂಬಂಧಿಸಿ ಚರ್ಚೆಗಳು ನಡೆಯುತ್ತಲೇ ಇವೆ. ಇನ್ನು ಲೋಕಸಭೆ ಚುನಾವಣೆ ಬಳಿಕ ಮುಖ್ಯಮಂತ್ರಿ ಬದಲಾವಣೆ ಆಗುತ್ತಾರೆ ಎಂದು ಕಾಂಗ್ರೆಸ್‌ ಪಕ್ಷದವರೇ ಮಾತನಾಡುತ್ತಿದ್ದಾರೆ. 

ಇಂಥ ಪರಿಸ್ಥಿತಿಯಲ್ಲಿ ಪಕ್ಷ ಗೆದ್ದರೆ ಮಾತ್ರ ನಾನು ಉಳಿಯುತ್ತೇನೆ, ನನ್ನನ್ನು ಯಾರೂ ಮುಟ್ಟಲಿಕ್ಕಾಗಲ್ಲ, ಒಂದು ವೇಳೆ ನಾನು ಗೆಲ್ಲದೇ ಹೋದರೆ ಬದಲಾವಣೆ ಮಾಡುತ್ತಾರೆ ಎಂಬ ಸಂದೇಶವನ್ನು ಸಿದ್ದರಾಮಯ್ಯ ಅ‍ವರು ರಾಜ್ಯದ ಜನತೆಗೆ ನೀಡಿದ್ದಾರೆ ಎಂದು ತಿಳಿಸಿದರು.