ಸಾರಾಂಶ
ಪದೇಪದೇ ಕಿರಿಕೇಡಿಗಳು ಈ ರೀತಿ ಮಾಡುತ್ತಿದ್ದರು ಸಹ ಅರಣ್ಯ ಇಲಾಖೆ ಮೌನವಹಿಸಿದೆ. ಇಂತಹ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳದೆ ಪ್ರತಿ ವರ್ಷವೂ ಸಾವಿರಾರು ರು. ಬೆಳೆ ಬಾಳುವ ಔಷಧ ಗಿಡಗಳು ಅಲ್ಲದೆ ಅರಣ್ಯ ಇಲಾಖೆ ಇತ್ತೀಚಿಗೆ ನೆಟ್ಟಿರುವ ನೀಲಗಿರಿ ಮರಗಳು ಬೆಂಕಿಗೆ ಆಹುತಿಯಾಗಿದ್ದು, ಪ್ರಾಣಿ, ಪಕ್ಷಿಗಳು ಸಹ ಬೆಂಕಿಗೆ ಆಹುತಿಯಾಗಿವೆ.
ಫೋಟೋ- 15ಎಂವೈಎಸ್ 61
--------ಕನ್ನಡಪ್ರಭ ವಾರ್ತೆ ಬೆಟ್ಟದಪುರ
ಇತಿಹಾಸ ಪ್ರಸಿದ್ಧ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದ ಅರಣ್ಯಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಸಾವಿರಾರು ಎಕರೆ ಅರಣ್ಯ ಪ್ರದೇಶ ನಾಶವಾಗಿದೆ.ಪದೇಪದೇ ಕಿರಿಕೇಡಿಗಳು ಈ ರೀತಿ ಮಾಡುತ್ತಿದ್ದರು ಸಹ ಅರಣ್ಯ ಇಲಾಖೆ ಮೌನವಹಿಸಿದೆ. ಇಂತಹ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳದೆ ಪ್ರತಿ ವರ್ಷವೂ ಸಾವಿರಾರು ರು. ಬೆಳೆ ಬಾಳುವ ಔಷಧ ಗಿಡಗಳು ಅಲ್ಲದೆ ಅರಣ್ಯ ಇಲಾಖೆ ಇತ್ತೀಚಿಗೆ ನೆಟ್ಟಿರುವ ನೀಲಗಿರಿ ಮರಗಳು ಬೆಂಕಿಗೆ ಆಹುತಿಯಾಗಿದ್ದು, ಪ್ರಾಣಿ, ಪಕ್ಷಿಗಳು ಸಹ ಬೆಂಕಿಗೆ ಆಹುತಿಯಾಗಿವೆ.
ಕಿಡಿಗೇಡಿಗಳ ಈ ಕೃತ್ಯದಿಂದ ನಶಿಸಿ ಹೋಗುತ್ತಿರುವ ಬೆಟ್ಟದಪುರದ ಸಿಡಿಲು ಮಲ್ಲಿಕಾರ್ಜುನ ಸ್ವಾಮಿಯ ಬೆಟ್ಟವನ್ನು ಅರಣ್ಯ ಇಲಾಖೆ ರಕ್ಷಿಸಬೇಕೆಂದು ಪರಿಸರ ಪ್ರೇಮಿಗಳು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.