ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿಬನಹಟ್ಟಿಯಲ್ಲಿಯೇ ಪ್ರಜಾಸೌಧ ನಿರ್ಮಿಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಕಳೆದ 23 ದಿನಗಳಿಂದ ನಡೆಯುತ್ತಿರುವ ಸರದಿ ಸತ್ಯಾಗ್ರಹ ಸೋಮವಾರ ಬೆಳಗ್ಗೆ 11ಕ್ಕೆ ಜಿಲ್ಲಾಡಳಿತಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ ಎಂದು ಹೋರಾಟ ಸಮಿತಿ ಅಧ್ಯಕ್ಷ ಶಂಕರ ಸೊರಗಾಂವಿ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಬನಹಟ್ಟಿಯಲ್ಲಿಯೇ ಪ್ರಜಾಸೌಧ ನಿರ್ಮಿಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಕಳೆದ 23 ದಿನಗಳಿಂದ ನಡೆಯುತ್ತಿರುವ ಸರದಿ ಸತ್ಯಾಗ್ರಹ ಸೋಮವಾರ ಬೆಳಗ್ಗೆ 11ಕ್ಕೆ ಜಿಲ್ಲಾಡಳಿತಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ ಎಂದು ಹೋರಾಟ ಸಮಿತಿ ಅಧ್ಯಕ್ಷ ಶಂಕರ ಸೊರಗಾಂವಿ ತಿಳಿಸಿದ್ದಾರೆ.ಶನಿವಾರ ಬನಹಟ್ಟಿಯಿಂದ ಆರಂಭಗೊಂಡಿರುವ ಬೃಹತ್ ಪಾದಯಾತ್ರೆ ಭಾನುವಾರ ತುಳಸಿಗೇರಿ ತಲುಪಿ, ತುಳಸಿಗೇರಿ ರಾಮಾರೂಢ ಮಠದಲ್ಲಿ ವಾಸ್ತವ್ಯ ಹೂಡಿದೆ. ಸೋಮವಾರ ಬೆಳಗ್ಗೆ ಬಾಗಲಕೋಟೆಯತ್ತ ಪಾದಯಾತ್ರೆ ಮುಂದುವರಿದೆ. ನೂರಾರು ಬೈಕ್, ಕಾರುಗಳು, ಜೀಪುಗಳು ಹಾಗೂ ಕ್ರೂಸರ್ ವಾಹನಗಳು ಸೇರಲಿದ್ದು, 2 ಸಾವಿರಕ್ಕೂ ಅಧಿಕ ಜನರು ಪ್ರತಿಭಟನಾ ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.ಬನಹಟ್ಟಿ ಸುತ್ತಮುತ್ತಲಿನ ಆಸಂಗಿ, ಆಸ್ಕಿ, ಯಲ್ಲಟ್ಟಿ-ಬಂಡಿಗಣಿ, ಕುಲಹಳ್ಳಿ, ಜಗದಾಳ ಹಾಗೂ ನಾವಲಗಿ ಸೇರಿದಂತೆ ಹಲವು ಗ್ರಾಮಗಳ ಜನರು ಬೆಂಬಲ ವ್ಯಕ್ತಪಡಿಸಿದ್ದಾರೆ. ರಾಜೇಂದ್ರ ಭದ್ರಣ್ಣವರ, ಮಲ್ಲಿಕಾರ್ಜುನ ತುಂಗಳ, ಮಲ್ಲಿಕಾರ್ಜುನ ಬಾಣಕಾರ, ದಯಾನಂದ ಹೊರಟ್ಟಿ, ಪ್ರಶಾಂತ ಕೊಳಕಿ, ಈಶ್ವರ ಕಾಡದೇವರ, ಕುಮಾರ ಕದಮ, ಮಾಳು ಹಿಪ್ಪರಗಿ, ಬುಡಾನಸಾಬ ಜಮಾದಾರ, ಸೋಮನಾಥ ಗೊಂಬಿ, ಸಂಜು ಶಿವಪೂಜಿ, ವಿಜಯ ರಾವಳ, ಗುರು ಪಾಟೀಲ, ಕುಬೇರ ಸಾರವಾಡ, ಮಲ್ಲಣ್ಣ ಬಾವಲತ್ತಿ ಸೇರಿದಂತೆ ಅನೇಕರು ಭಾಗವಹಿಸಿದ್ದಾರೆ.