ಸಾರಾಂಶ
ಕಾರ್ಮಿಕರ ಹಲವಾರು ಹೋರಾಟಗಳ ಫಲವಾಗಿ ರಾಜ್ಯದಲ್ಲಿ 2006 ರಲ್ಲಿ ಕಲ್ಯಾಣ ಮಂಡಳಿ ಆರಂಭವಾಗಿದ್ದು, 2006, 2011 ಮತ್ತು 2019 ರ ನೋಂದಣಿ ವೇಳೆ ಕೆಲ ಲೋಪದೋಷಗಳ ಫಲವಾಗಿ ನಾಲ್ಕು ಲಕ್ಷಕ್ಕೂ ಅಧಿಕ ನಕಲಿ ಕಾರ್ಮಿಕ ಕಾರ್ಡ್‌ಗಳು ಸೃಷ್ಟಿಯಾಗಿದ್ದು, ರಾಜಕಾರಣಿಗಳ ಹಿಂಬಾಲಕರ ಪಾಲೇ ಹೆಚ್ಚಿದೆ.
ಕನ್ನಡಪ್ರಭ ವಾರ್ತೆ ತುಮಕೂರು
ಕಾರ್ಮಿಕ ಮಂಡಳಿಯ ನಿಧಿ ಬಳಕೆಯಲ್ಲಿ ಆಗಿರುವ ಅವ್ಯವಹಾರ ಕುರಿತು ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿ ಆ.5ರಂದು ಕಟ್ಟಡ ಕಾರ್ಮಿಕರ ಸಮನ್ವಯ ಸಮಿತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗಿರೀಶ್ ತಿಳಿಸಿದ್ದಾರೆ.ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೈಕೋರ್ಟ್ ಆದೇಶದಂತೆ ಶೈಕ್ಷಣಿಕ ಧನಸಹಾಯವನ್ನು ಅರ್ಜಿ ಸಲ್ಲಿಸಿರುವ ಎಲ್ಲಾ ಆರ್ಹರಿಗೂ ಪಾವತಿಸಬೇಕು. ಭ್ರಷ್ಟಾಚಾರದಿಂದ ಕಲ್ಯಾಣ ಮಂಡಳಿಯನ್ನು ಮುಕ್ತಗೊಳಿಸಬೇಕೆಂಬುದು ಈ ಹೋರಾಟದ ಹಿಂದಿನ ಉದ್ದೇಶವಾಗಿದೆ ಎಂದರು.
ಕಾರ್ಮಿಕರ ಹಲವಾರು ಹೋರಾಟಗಳ ಫಲವಾಗಿ ರಾಜ್ಯದಲ್ಲಿ 2006 ರಲ್ಲಿ ಕಲ್ಯಾಣ ಮಂಡಳಿ ಆರಂಭವಾಗಿದ್ದು, 2006, 2011 ಮತ್ತು 2019 ರ ನೋಂದಣಿ ವೇಳೆ ಕೆಲ ಲೋಪದೋಷಗಳ ಫಲವಾಗಿ ನಾಲ್ಕು ಲಕ್ಷಕ್ಕೂ ಅಧಿಕ ನಕಲಿ ಕಾರ್ಮಿಕ ಕಾರ್ಡ್‌ಗಳು ಸೃಷ್ಟಿಯಾಗಿದ್ದು, ರಾಜಕಾರಣಿಗಳ ಹಿಂಬಾಲಕರ ಪಾಲೇ ಹೆಚ್ಚಿದೆ ಎಂದರು.ಅಲ್ಲದೆ ವಿವಿಧ ಕಿಟ್‌ಗಳ ಖರೀದಿ ನೆಪದಲ್ಲಿ ಕಾರ್ಮಿಕ ಕಲ್ಯಾಣ ಮಂಡಳಿಯ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡಲಾಗುತ್ತಿದೆ. ಕಾರ್ಮಿಕರು ಹಾಗೂ ಅವರ ಮಕ್ಕಳಿಗೆ ಸವಲತ್ತು ನೀಡಿ ಎಂದು ಇಲ್ಲದ ಸಬೂಬು ಹೇಳುವ ಸರ್ಕಾರ, ಕೀಟ್‌ಗಳ ಖರೀದಿ, ಕಾರ್ಮಿಕ ಆರೋಗ್ಯ ತಪಾಸಣೆ ಹೆಸರಿನಲ್ಲಿ ಬೇಕಾಬಿಟ್ಟಿ ಹಣ ಖರ್ಚು ಮಾಡುತ್ತಿದೆ ಎಂದರು.
ಕಟ್ಟಡ ಕಾರ್ಮಿಕ ಫೆಡರೇಷನ್‌ನ ತುಮಕೂರು ಜಿಲ್ಲಾಧ್ಯಕ್ಷ ಬಿ.ಉಮೇಶ್, ಎಐಟಿಯುಸಿಯ ಬೋಜರಾಜ್,ಇಬಾಹಿಂ ಖಲೀಲ್ ಮತ್ತಿತರರು ಪಾಲ್ಗೊಂಡಿದ್ದರು.