ಪಹಲ್ಗಾಮ್‌ ಘಟನೆ ಖಂಡಿಸಿ ಮುಂಡಗೋಡದಲ್ಲಿ ಮೌನ ಮೆರವಣಿಗೆ

| Published : Apr 24 2025, 12:04 AM IST

ಸಾರಾಂಶ

ಶಿವಾಜಿ ಸರ್ಕಲ್ ವರೆಗೆ ತೆರಳಿ ಸರ್ಕಲ್ ನಲ್ಲಿ ಹುತಾತ್ಮರಾದವರ ಭಾವಚಿತ್ರಗಳ ಮುಂದೆ ಎಣ್ಣೆ ದೀಪ ಹಚ್ಚಿ ಶ್ರದ್ಧಾಂಜಲಿಯನ್ನು ಸಲ್ಲಿಸಿ ಮೌನಾಚರಣೆ ಮಾಡಲಾಯಿತು.

ಮುಂಡಗೋಡ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ಕೃತ್ಯವನ್ನು ಖಂಡಿಸಿ ತಾಲೂಕು ಬಿಜೆಪಿ ಹಾಗೂ ವಿವಿಧ ಹಿಂದೂ ಸಂಘಟನೆಯವರು ಬುಧವಾರ ರಾತ್ರಿ ಮೇಣದ ಬತ್ತಿ ಮೌನ ಮೆರವಣಿಗೆ ನಡೆಸಿ ಹುತಾತ್ಮರಾದವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.

ಇಲ್ಲಿಯ ಬಸವೇಶ್ವರ ದೇವಸ್ಥಾನದಿಂದ ಮೇಣ ಬತ್ತಿಯನ್ನು ಹಿಡಿದು ಮೌನ ಮೆರವಣಿಗೆ ಮುಖಾಂತರ ಶಿವಾಜಿ ಸರ್ಕಲ್ ವರೆಗೆ ತೆರಳಿ ಸರ್ಕಲ್ ನಲ್ಲಿ ಹುತಾತ್ಮರಾದವರ ಭಾವಚಿತ್ರಗಳ ಮುಂದೆ ಎಣ್ಣೆ ದೀಪ ಹಚ್ಚಿ ಶ್ರದ್ಧಾಂಜಲಿಯನ್ನು ಸಲ್ಲಿಸಿ ಮೌನಾಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ಮಂಜುನಾಥ ಪಾಟೀಲ್, ಧುರೀಣ ಸಂಗಮೇಶ ಬಿದರಿ, ಬಸವರಾಜ ಠಣಕೆದಾರ, ಗುರು ಕಾಮತ, ಮಂಜುನಾಥ ಶೇಟ್, ಸುದೀರ ರಾವ್, ತುಕಾರಾಮ ಇಂಗಳೆ, ಭರತರಾಜ ಹದಳಗಿ, ರಾಜೇಶ ರಾವ್, ನವೀನ ಇಂಗಳೆ, ಚಂದ್ರು ಗಾಣಿಗೇರ, ಹರೀಶ ಪೂಜಾರ ಮುಂತಾದವರು ಉಪಸ್ಥಿತರಿದ್ದರು.

ಕಾಶ್ಮೀರದ ಪಹಲ್ಗಾಮ್‌ ನಲ್ಲಿ ನಡೆದ ಭಯೋತ್ಪಾದಕ ಕೃತ್ಯವನ್ನು ಖಂಡಿಸಿ ಮುಂಡಗೋಡದಲ್ಲಿ ಮೇಣದ ಬತ್ತಿ ಹಚ್ಚಿ ಮೌನ ಮೆರವಣಿಗೆ ನಡೆಸಿ ಹುತಾತ್ಮರಾದವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.