ಸಾರಾಂಶ
ಕೋಲ್ಕತ್ತಾದಲ್ಲಿ ನಡೆದ ಮಹಿಳಾ ವೈದ್ಯೆಯ ಅತ್ಯಾಚಾರ ಮತ್ತು ಸಾವಿನ ಘಟನೆ ಖಂಡಿಸಿ ಐಎಂಎ ತಾಲೂಕು ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ರಾಣಿಬೆನ್ನೂರು: ಕೋಲ್ಕತ್ತಾದಲ್ಲಿ ನಡೆದ ಮಹಿಳಾ ವೈದ್ಯೆಯ ಅತ್ಯಾಚಾರ ಮತ್ತು ಸಾವಿನ ಘಟನೆ ಖಂಡಿಸಿ ಐಎಂಎ ತಾಲೂಕು ಘಟಕದ ನೇತೃತ್ವದಲ್ಲಿ ಸ್ಥಳೀಯ ವೈದ್ಯರು ಮಂಗಳವಾರ ಸಂಜೆ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಕೈಗೊಂಡು ಪೋಸ್ಟ್ ಸರ್ಕಲ್ ಬಳಿ ಮೇಣದಬತ್ತಿ ಬೆಳಗಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಕೆಇಬಿ ವಿನಾಯಕ ದೇವಸ್ಥಾನದ ಬಳಿಯಿಂದ ಮೆರವಣಿಗೆಯಲ್ಲಿ ಹೊರಟ ವೈದ್ಯರು ಬಸ್ ನಿಲ್ದಾಣ, ಮೆಡ್ಲೇರಿ ಕ್ರಾಸ್, ಪೋಸ್ಟ್ ಸರ್ಕಲ್, ಎಂ.ಜಿ. ರಸ್ತೆ, ದುರ್ಗಾ ಸರ್ಕಲ್, ಕುರುಬಗೇರಿ ಕ್ರಾಸ್, ಪಿ.ಬಿ. ರಸ್ತೆಯ ಮೂಲಕ ತಹಸೀಲ್ದಾರ್ ಕಚೇರಿ ವರೆಗೆ ಸಾಗಿ ಬಂದರು.ಈ ಸಮಯದಲ್ಲಿ ಐಎಂಐ ತಾಲೂಕು ಅಧ್ಯಕ್ಷ ಅಭಿನಂದನ ಸಾವಕಾರ ಮಾತನಾಡಿ, ಕೋಲ್ಕತ್ತಾದ ಮೆಡಿಕಲ್ ಕಾಲೇಜಿನಲ್ಲಿ ಕರ್ತವ್ಯ ನಿರತ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಘಟನೆ ಅತ್ಯಂತ ಹೇಯ ಕೃತ್ಯವಾಗಿದೆ. ಕಲಿಕೆಯ ಕೋಟೆಗಳಲ್ಲಿ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗದಿದ್ದರೆ ಅದು ಆಡಳಿತದ ಅಸಮರ್ಥತೆಯನ್ನು ಮಾತ್ರ ಸೂಚಿಸುತ್ತದೆ. ಕೇರಳದ ತಾಲೂಕು ಆಸ್ಪತ್ರೆಯೊಂದರಲ್ಲಿ ಚಾಕು ಇರಿತದಿಂದ ವೈದ್ಯೆ ಸಾವನ್ನಪ್ಪಿದ್ದಳು. ಆಸ್ಪತ್ರೆಗಳು ಮತ್ತು ಕ್ಯಾಂಪಸ್‌ಗಳಲ್ಲಿ ವೈದ್ಯರ ಸುರಕ್ಷತೆಯನ್ನು ಒದಗಿಸುವುದು ಅಧಿಕಾರಿಗಳ ಕರ್ತವ್ಯವಾಗಿದೆ ಎಂದರು.
ಐಎಂಐ ತಾಲೂಕು ಕಾರ್ಯದರ್ಶಿ ಡಾ. ಪುಟ್ಟರಾಜ, ಡಾ. ಶಿವಪ್ರಕಾಶ ತಂಡಿ, ಡಾ. ಬಸವರಾಜ ಕೇಲಗಾರ, ಡಾ. ಅನಿಲಕುಮಾರ ಬೆನ್ನೂರ, ಡಾ. ವಿದ್ಯಾವತಿ ವಾಸುದೇವಮೂರ್ತಿ, ಡಾ. ರಾಜೇಶ್ವರಿ ಬೆನ್ನೂರ, ಡಾ. ಲೀನಾ ಪಾಟೀಲ, ಡಾ. ಚಂದ್ರಶೇಖರ ಕೇಲಗಾರ, ಡಾ. ವಿದ್ಯಾ ಕೇಲಗಾರ, ಡಾ. ಜ್ಯೋತಿ ತಂಡಿ, ಡಾ. ರವಿ ಸಾಲ್ಮನಿ, ಡಾ. ನಳಿನಾ ಸಾಲ್ಮನಿ, ಡಾ. ಎಲ್.ಕೆ. ಚಳಗೇರಿ, ಡಾ. ರವಿ ಕುಲಕರ್ಣಿ, ಡಾ. ನಾಗರಾಜ ಎಸ್., ಡಾ. ಸಂತೋಷ ಮೋಟಗಿ, ಡಾ. ನಾಗರಾಜ ಪಾಟೀಲ, ಡಾ. ಮೇನಕ ಸಾವಕಾರ, ಡಾ. ಆನಂದ ಇಂಗಳಗಾವಿ, ಡಾ. ಹೇಮಾ ಪಾಟೀಲ, ಡಾ. ಅನಿತಾ ಕೇಲಗಾರ, ಡಾ. ಬಸವ ಗೊಂದಿ, ಡಾ. ಮಾಲತೇಶ ಜಿ., ಸಂತೋಷಕುಮಾರ ಜಿ. ಪಾಲ್ಗೊಂಡಿದ್ದರು.