ಪಿಎಸೈ ದೇವೇಂದ್ರ ರೆಡ್ಡಿ, ಜಯಶ್ರೀಗೆ ಸಿಎಂ ಪದಕ

| Published : Aug 15 2024, 01:47 AM IST

ಪಿಎಸೈ ದೇವೇಂದ್ರ ರೆಡ್ಡಿ, ಜಯಶ್ರೀಗೆ ಸಿಎಂ ಪದಕ
Share this Article
  • FB
  • TW
  • Linkdin
  • Email

ಸಾರಾಂಶ

CM Medal for PSAI Devendra Reddy, Jayashree

-ಯಾದಗಿರಿ: ಕಾನ್ಸಟೇಬಲ್‌ ಹರಿನಾಥರೆಡ್ಡಿ ಸಹ ಸಿಎಂ ಪದಕಕ್ಕೆ ಭಾಜನ

-----

ಕನ್ನಡಪ್ರಭ ವಾರ್ತೆ ಯಾದಗಿರಿ

ಪೊಲೀಸ್‌ ಇಲಾಖೆಯ 2023ನೇ ಸಾಲಿನ ಮುಖ್ಯಮಂತ್ರಿ ಪದಕಗಳನ್ನು ಪ್ರಕಟಿಸಿದ್ದು, ಯಾದಗಿರಿ ಜಿಲ್ಲೆ ಶಹಾಪುರ ತಾಲೂಕು ಗೋಗಿ ಠಾಣೆಯ ಪಿಎಸೈ ದೇವೇಂದ್ರ ರೆಡ್ಡಿ, ವಡಗೇರಾ ಠಾಣೆಯ ಪಿಎಸೈ ಆಗಿದ್ದ ಜಯಶ್ರೀ ಹಾಗೂ ಯಾದಗಿರಿ ವೃತ್ತ ಕಚೇರಿಯ ಸಿಪಿಸಿ-267 ಹರಿನಾಥರೆಡ್ಡಿ ಅವರು ಪದಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

126 ಪೊಲೀಸ್‌ ಅಧಿಕಾರಿ, ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ ಪ್ರಕಟವಾಗಿದ್ದು, ಇದರಲ್ಲಿ ಯಾದಗಿರಿಯ ಈ ಮೂವರಿಗೆ ಪದಕದ ಗರಿ ಮೂಡಿದೆ.

ಇನ್ನು, ಸುರಪುರ ಡಿವೈಎಸ್ಪಿ ಜಾವೇದ್‌ ಇನಾಂದಾರ್‌ ಅವರಿಗೆ ಶಿಫಾರಸ್ಸು ಮಾಡಲಾಗಿತ್ತಾದರೂ, ಅವರ ಮೇಲಿನ ವಿವಿಧ ಆರೋಪಗಳಿಂದಾಗಿ ಸಿಎಂ ಪದಕ ಕೈತಪ್ಪಿದೆ. ಅಕ್ಕಿ ಅಕ್ರಮದ ಆರೋಪಿಗೆ ಸನ್ಮಾನ ಹಾಗೂ ಈ ಹಿಂದೆ ಅಥಣಿಯಲ್ಲಿದ್ದಾಗ ಚಿನ್ನ ಜಪ್ತಿ ಪ್ರಕರಣದಲ್ಲಿ ವಿವಿಧ ಆರೋಪಗಳಿಗೆ ಗುರಿಯಾಗಿದ್ದ ಜಾವೇದ್‌ ಇನಾಂದಾರ್‌ ಅವರಿಗೆ ಸಿಎಂ ಪದಕಕ್ಕೆ ಶಿಫಾರಸ್ಸು ಮಾಡಿರುವುದನ್ನು ಖಂಡಿಸಿ, ಗುರುಮಠಕಲ್‌ ಶಾಸಕ ಶರಣಗೌಡ ಕಂದಕೂರು ಸಿಎಂ ಹಾಗೂ ಗೃಹ ಸಚಿವರಿಗೆ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದರು.

ಹಲವು ಆರೋಪಗಳಿಗೆ ಗುರಿಯಾಗಿರುವ ಡಿವೈಎಸ್ಪಿ ಜಾವೇದ್‌ ಇನಾಂದಾರ್‌ ಅವರ ಹೆಸರನ್ನು ಶಿಫಾರಸ್ಸು ಮಾಡುವ ವೇಳೆ ಮೇಲಧಿಕಾರಿಗಳು ಅವರ ಮೇಲಿನ ಆರೋಪಗಳನ್ನು ಮುಚ್ಚಿಡಲಾಗಿದೆ. ಅಕ್ಕಿ ಅಕ್ರಮ ಸೇರಿದಂತೆ ಅನೇಕ ಪ್ರಕರಣಗಳನ್ನು ಇವರು ಮುಚ್ಚಿ ಹಾಕುವ ಯತ್ನ ನಡೆಸಿದ್ದ ಆರೋಪಗಳಿವೆ. ಹೀಗಿದ್ದಾಗ್ಯೂ ಕೂಡ, ಜಾವೇದ್‌ ಇನಾಂದಾರ್ ಗೆ ಪದಕ ನೀಡಿದರೆ ಪ್ರಾಮಾಣಿಕ ಅಧಿಕಾರಿಗಳ ಸ್ಥೈರ್ಯ ಕುಗ್ಗಿಸಿದಂತೆ ಎಂದು ಶಾಸಕ ಕಂದಕೂರು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು. "ಕನ್ನಡಪ್ರಭ "ದಲ್ಲಿ ಈ ಕುರಿತು ವರದಿ ಸಂಚಲನ ಮೂಡಿಸಿತ್ತು.

------

ಕೋಟ್‌.....

ಹಲವಾರು ಅಕ್ರಮಗಳಿಗೆ ಪರೋಕ್ಷ ಬೆಂಬಲಿಸುತ್ತಿರುವ ಆರೋಪಗಳ ಹೊತ್ತ ಡಿವೈಎಸ್ಪಿ ಜಾವೇದ್‌ ಇನಾಂದಾರ್‌ ಅವರಿಗೆ ಪದಕ ನೀಡಿದರೆ ಇದು ಪ್ರಾಮಾಣಿಕರಿಗೆ ಅನ್ಯಾಯವಾದಂತೆ ಎಂದು ನಾನು ಸಿಎಂ ಹಾಗೂ ಗೃಹ ಸಚಿವರಿಗೆ ಮನವರಿಕೆ ಮಾಡಿದ್ದೆ. ಈಗ ಥ್ಯಾಂಕ್ಸ್‌ ಹೇಳಿದ್ದೇನೆ.

- ಶರಣಗೌಡ ಕಂದಕೂರ, ಶಾಸಕರು, ಗುರುಮಠಕಲ್‌.

-

14ವೈಡಿಆರ್‌13 : ದೇವೇಂದ್ರ ರೆಡ್ಡಿ, ಪಿಎಸ್ಐ, ಗೋಗಿ ಠಾಣೆ, ಶಹಾಪುರ ತಾಲೂಕು.

14ವೈಡಿಆರ್‌14 : ಜಯಶ್ರೀ, ಪಿಎಸ್ಐ ವಡಗೇರಾ,

14ವೈಡಿಆರ್‌15 : ಹರಿನಾಥರೆಡ್ಡಿ, ಸಿಪಿಸಿ, ಯಾದಗಿರಿ.

---000---