ಉಡುಪಿ: ನಗರಸಭಾ ವ್ಯಾಪ್ತಿಯ ಕಡಿಯಾಳಿ, ಗುಂಡಿಬೈಲು, ಬನ್ನಂಜೆ ವಾರ್ಡಿನ ಪ್ರಮುಖ ತೋಡುಗಳ ಹೂಳು ತೆರವು ಸ್ಥಳಗಳಿಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೃತಕ ನೆರೆ ತಪ್ಪಿಸಲು ತೋಡುಗಳ ಹೂಳು ತೆರವು ಈಗಾಗಲೇ ನಡೆಯುತ್ತಿದ್ದು ಬಾಕಿ ಇರುವ ತೋಡುಗಳ ಹೂಳು ತಕ್ಷಣ ತೆರವು ಮಾಡುವಂತೆ ಅಧಿಕಾರಿಗಳಿಗೆ ಶಾಸಕ ಯಶ್ ಪಾಲ್ ಸುವರ್ಣ ಸೂಚನೆ ನೀಡಿದರು.ಕಡಿಯಾಳಿ, ಕಲ್ಸಂಕ, ಗುಂಡಿಬೈಲು, ಮಠದಬೆಟ್ಟು, ಬನ್ನಂಜೆ ಗರಡಿ ಬಳಿಯ ತೋಡುಗಳಲ್ಲಿ ಭಾರೀ ಪ್ರಮಾಣದಲ್ಲಿ ಹೂಳು ಶೇಖರಣೆಯಾಗಿ ನೀರು ಸರಾಗವಾಗಿ ಹರಿಯಲು ತೊಂದರೆಯಾಗಿದ್ದು, ಈಗಾಗಲೇ ಅತೀ ಶೀಘ್ರದಲ್ಲಿ ಮಳೆ ಪ್ರಾರಂಭವಾಗಲಿದ್ದು ಆದ್ಯತೆಯ ಮೇರೆಗೆ ಹೂಳು ತೆರವಿಗೆ ಕ್ರಮ ವಹಿಸುವಂತೆ ತಿಳಿಸಿದರು.ನಗರಸಭೆ ಮಾಜಿ ಅಧ್ಯಕ್ಷರಾದ ಪ್ರಭಾಕರ ಪೂಜಾರಿ, ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್, ನಗರಸಭೆ ಮಾಜಿ ಸದಸ್ಯರಾದ ಹರೀಶ್ ಶೆಟ್ಟಿ, ಹರೀಶ್ ರಾಮ್ ಬನ್ನಂಜೆ, ಸ್ಥಳೀಯ ಮುಖಂಡರಾದ ಸತೀಶ್ ಕುಲಾಲ್ ಕಡಿಯಾಳಿ, ಆನಂದ ಮಠದಬೆಟ್ಟು, ಉದಯ ಮಠದಬೆಟ್ಟು, ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ದುರ್ಗಾಪ್ರಸಾದ್, ಪರಿಸರ ಅಧಿಕಾರಿ ರವಿಶಂಕರ್ ಮತ್ತಿತರರಿದ್ದರು.