ಸಾರಾಂಶ
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಸಾಮಾಜಿಕ ಬದುಕಿಗೆ ಅಗತ್ಯವಿರುವ ಮೌಲ್ಯಾಧಾರಿತ ಶಿಕ್ಷಣ ಮತ್ತು ಸಂಸ್ಕಾರ ಕಲಿಸುವಲ್ಲಿ ವಿದ್ಯಾನಿಧಿ ಶಾಲೆಯು ಭದ್ರ ಬುನಾದಿ ಹಾಕುವ ಮೂಲಕ ಅವರ ಬದುಕಿಗೆ ಉಜ್ವಲಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ಸುರಾನ ಕಾಲೇಜಿನ ಸಹಪ್ರಾಧ್ಯಾಪಕರಾದ ವತ್ಸಲಾಮೋಹನ್ ತಿಳಿಸಿದರು.ನಗರದ ವಿದ್ಯಾನಿಧಿ ಪಬ್ಲಿಕ್ ಶಾಲೆಯಲ್ಲಿ ನವೆಂಬರ್ 29ಶುಕ್ರವಾರ ಆಯೋಜಿಸಿದ್ದ ಶಾಲೆಯ ಬೆಳ್ಳಿಮಹೋತ್ಸವ ಸಂಭ್ರಮ ವಿರಾಸತ್-2024ನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು. ಗಡಿ ಭಾಗದಲ್ಲಿ ಬೆಳೆಗ ಸಂಸ್ಥೆರಾಜ್ಯದ ಗಡಿಭಾಗದಲ್ಲಿನ ಕಳೆದ 25ವರ್ಷಗಳಿಂದಲೂ ಸತತವಾಗಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ವಿದ್ಯಾನಿಧಿ ಸಂಸ್ಥೆ ಬೆಳ್ಳಿಹಬ್ಬ ಆಚರಿಸುತ್ತಿದೆ. ಆಧುನಿಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಕೇವಲ ಶಿಕ್ಷಣದಿಂದ ಮಾತ್ರ ಬದುಕನ್ನು ರೂಪಿಸಲು ಸಾಧ್ಯವಿಲ್ಲ. ಅದಕ್ಕೆ ಪೂರಕವಾಗಿ ಕಲೆ, ಸಾಹಿತ್ಯ, ನೃತ್ಯ, ಭಾಷೆ,ಸಂಸ್ಕೃತಿ, ಸಂಸ್ಕಾರ ಮತ್ತು ನಾಗರೀಕತೆ ಸೇರಿದಂತೆ ಎಲ್ಲವೂ ಅಗತ್ಯವಾಗಿದೆ ಎಂದರು.ಮಾಜಿ ಕೃಷಿ ಸಚಿವ ಎನ್.ಹೆಚ್.ಶಿವಶಂಕರರೆಡ್ಡಿ ಮಾತನಾಡಿ, ಕ್ಷೇತ್ರದಲ್ಲಿ ಕಳೆದ ಎರಡೂವರೆ ದಶಕಗಳಿಂದಲೂ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣನೀಡುವ ಮೂಲಕ ವಿದ್ಯಾನಿಧಿ ಸಂಸ್ಥೆ ಬೆಳೆದುಬಂದಿದೆ.. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಕಲಿಕಾದಾಹ ಮತ್ತು ಪೋಷಕರನಿರೀಕ್ಷೆಗೂಮೀರಿದ ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕಾಗಿದೆ ಎಂದು ಹೇಳಿದರು. ವಿದ್ಯಾನಿಧಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಇಸ್ತೂರಿ ರಮೇಶ್ ಕುಮಾರ್ ಮಾತನಾಡಿ, 25ವರ್ಷಗಳ ಹಿಂದೆ ಗ್ರಾಮೀಣ ಭಾಗದಲ್ಲಿನ ವಿದ್ಯಾರ್ಥಿಗಳಿಗೆ ಗುಣಮಟ್ಟ ಮತ್ತು ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವ ಸಲುವಾಗಿ ಆರಂಭಿಸಲಾಗಿತ್ತು. ಸಾಕಷ್ಟು ಸವಾಲುಗಳ ಮತ್ತು ವಿದ್ಯಾರ್ಥಿಗಳ ಸಾಧನೆಯ ನಡುವೆ ಶಾಲೆ ಯಶಸ್ವಿಯಾಗಿ 24ವರ್ಷಗಳನ್ನು ಪೂರೈಸಿ 25ರ ಬೆಳ್ಳಿಸಂಭ್ರಮಕ್ಕೆ ಪಾದಾರ್ಪಣೆ ಮಾಡಿದೆ ಎಂದರು.ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ-ಪಿ.ಮಧುಸೂದನ್, ಶಾಲಾಆಡಳಿತ ಮಂಡಳಿಯ ಉಪಾಧ್ಯಕ್ಷರಾದ-ಎ.ಆರ್.ನಾಗರಾಜ, ಜೆ.ಎಚ್.ವಿಶ್ವನಾಥರಾವ್, ಜಂಟಿಕಾರ್ಯದರ್ಶಿ-ಕೆ.ವೆಂಕಟೇಶ್ ಬಾಬು,ನಿರ್ದೇಶಕರಾದ ಎನ್.ಸಿ.ಶ್ರೀನಿವಾಸಮೂರ್ತಿ,ಕೆ.ಆರ್.ಸುರೇಶ್,ಡಿ.ಎಸ್.ರಮೇಶ್ ಕುಮಾರ್,ಜಿ.ಆರ್.ಅರುಣ್ ಕುಮಾರ್, ಎಸ್.ಜಿ.ಸುಬ್ರಮಣ್ಯ, ಕೆ.ಬಾಬುರಾಜ್, ಕೆ.ಎಸ್.ಮಹೇಶ್,ಉಪಪ್ರಾಂಶುಪಾಲರಾದ ಕೆ.ಮನುಜಾಕ್ಷಿ,ಆಡಳಿತಾಧಿಕಾರಿ ಶರ್ಮಿಳಾ ಮತ್ತಿತರರು ಇದ್ದರು.