ಮಲ್ಪೆ ಶ್ರೀ ರಾಮಮಂದಿರದ ರಜತ ಮಹೋತ್ಸವ, ನವರಾತ್ರಿ, ಚಂಡಿಕಾ ಹವನ ಸಂಪನ್ನ

| Published : Oct 17 2024, 12:14 AM IST

ಮಲ್ಪೆ ಶ್ರೀ ರಾಮಮಂದಿರದ ರಜತ ಮಹೋತ್ಸವ, ನವರಾತ್ರಿ, ಚಂಡಿಕಾ ಹವನ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ರಜತ ಮಹೋತ್ಸವ ಆಚರಣೆ ಮತ್ತು ನವರಾತ್ರಿ ವಿಜಯದಶಮಿ ಪ್ರಯುಕ್ತ ಚಂಡಿಕಾ ಹವನ ನಡೆಯಿತು. ಈ ಪ್ರಯುಕ್ತ ಶ್ರೀ ದೇವರಿಗೆ ವಿಶೇಷ ಅಲಂಕಾರ ನೆರವೇರಿತು.

ಕನ್ನಡಪ್ರಭ ವಾರ್ತೆ ಮಲ್ಪೆ

ಇಲ್ಲಿನ ಜಿ.ಎಸ್.ಬಿ. ಸಮಾಜದ ಶ್ರೀ ರಾಮ ಮಂದಿರದಲ್ಲಿ ಶ್ರೀ ರಾಮಚಂದ್ರ ದೇವರ ಪ್ರತಿಷ್ಠೆಯಾಗಿ 25 ವರ್ಷಗಳಾದ ಹಿನ್ನೆಲೆಯಲ್ಲಿ ಅ.13ರಂದು ರಜತ ಮಹೋತ್ಸವ ಆಚರಣೆ ಹಾಗೂ ನವರಾತ್ರಿಯ ವಿಜಯದಶಮಿ ಪ್ರಯುಕ್ತ ಶ್ರೀ ದೇವರ ಸನ್ನಿಧಿಯಲ್ಲಿ ಚಂಡಿಕಾ ಹವನ ನಡೆಯಿತು.

ಈ ಪ್ರಯುಕ್ತ ಶ್ರೀ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಈ ಸಂದರ್ಭ ಕುಮಾರಿ ಪೂಜೆ, ಜಲದುರ್ಗೆ ಪೂಜೆ, ಪೂರ್ಣಾಹುತಿ, ಮಹಾಪೂಜೆ ಬಳಿಕ ಸಾರ್ವಜನಿಕ ಮಹಾಅನ್ನಸಂತರ್ಪಣೆ ನಡೆಯಿತು.

ಚಂಡಿಕಾ ಹವನದ ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ವೇದಮೂರ್ತಿ ಜಯದೇವ ಭಟ್ ಕಲ್ಯಾಣಪುರ ನೇತೃತ್ವದಲ್ಲಿ ನಡೆಯಿತು. ಹವನದ ಸೇವಾದಾರರಾದ ಪ್ರಕಾಶ್ ಕಾಮತ್ ಮತ್ತು ಮಕ್ಕಳು ಪಂದುಬೆಟ್ಟು ಹವನದಲ್ಲಿ ಭಾಗವಹಿಸಿದರು. ಮಂದಿರದ ಅರ್ಚಕರಾದ ಶೈಲೇಶ ಭಟ್, ಲಕ್ಷ್ಮಣ ಭಟ್, ವರದರಾಜ್ ಭಟ್ ಸಹಕರಿಸಿದರು.

ಈ ಸಂದರ್ಭದಲ್ಲಿ ಮಂದಿರದ ಅಧ್ಯಕ್ಷರಾದ ಕೆ.ಗೋಕುಲ್ ದಾಸ್ ಪೈ, ವಿಶ್ವನಾಥ ಭಟ್, ಸುದೀರ್ ಶೆಣೈ, ಶಾಲಿನಿ ಪೈ, ಅನಿಲ್ ಕಾಮತ್, ಜಿ.ಎಸ್.ಬಿ. ಸಮಾಜದ, ಶ್ರೀ ರಾಮ ಸೇವಾ ಟ್ರಸ್ಟ್ ಸದಸ್ಯರು, ಜಿ.ಎಸ್.ಬಿ. ಯುವಕ ಮಂಡಳಿ ಹಾಗೂ ಮಹಿಳಾ ಮಂಡಳಿ ಸದಸ್ಯರು, ನೂರಾರು ಸಮಾಜ ಬಾಂಧವರು ಉಪಸ್ಥಿತರಿದ್ದರು.