ಸಾರಾಂಶ
ತರೀಕೆರೆ, ರಾಜ್ಯ ಮಟ್ಟದ ದಸರಾ ಬಯಲು ಜಂಗಿ ಕುಸ್ತಿ ಸ್ಪರ್ಧೆಗೆ ಬಹುಮಾನವಾಗಿ ನೀಡುವ ಪ್ರತಿಷ್ಠಿತ ಬೆಳ್ಳಿಗದೆಯನ್ನು ಪಟ್ಟಣದ ಬಯಲು ರಂಗ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುರಸಭೆಯಿಂದ ಕುಸ್ತಿ ಸಂಘದ ಅಧ್ಯಕ್ಷ ಟಿ.ಎಸ್.ರಮೇಶ್ ಗೆ ಹಸ್ತಾಂತರಿಸಲಾಯಿತು.
ಪುರಸಭೆಯಿಂದ ಭಾನುವಾರ ನಡೆದ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆರಾಜ್ಯ ಮಟ್ಟದ ದಸರಾ ಬಯಲು ಜಂಗಿ ಕುಸ್ತಿ ಸ್ಪರ್ಧೆಗೆ ಬಹುಮಾನವಾಗಿ ನೀಡುವ ಪ್ರತಿಷ್ಠಿತ ಬೆಳ್ಳಿಗದೆಯನ್ನು ಪಟ್ಟಣದ ಬಯಲು ರಂಗ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುರಸಭೆಯಿಂದ ಕುಸ್ತಿ ಸಂಘದ ಅಧ್ಯಕ್ಷ ಟಿ.ಎಸ್.ರಮೇಶ್ ಗೆ ಹಸ್ತಾಂತರಿಸಲಾಯಿತು.
ಪುರಸಭೆಯಿಂದ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷ ವಸಂತಕುಮಾರ್ ಮಾತನಾಡಿ ರಾಜ್ಯ ಮಟ್ಟದ ದಸರಾ ಬಯಲು ಜಂಗಿ ಕುಸ್ತಿ ಗೆ ಪುರಸಭೆಯಿಂದ ಅನೂಚಾನವಾಗಿ ಪ್ರತಿಷ್ಠಿತ ಬೆಳ್ಳಿಗದೆ ನೀಡಲಾಗುತ್ತಿದೆ. ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಕೋರಿದರು. ಶ್ರೀ ಗುರು ರೇವಣಸಿದ್ದೇಶ್ವರ ಕುರುಬರ ಸಮಾಜ ಮತ್ತು ಶ್ರೀ ಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘದ ಅಧ್ಯಕ್ಷ ಟಿ.ಎಸ್.ರಮೇಶ್ ಮಾತನಾಡಿ ರಾಜ್ಯ ಮಟ್ಟದ ದಸರಾ ಬಯಲು ಜಂಗಿ ಕುಸ್ತಿ ಸ್ಪರ್ಧೆ ಕಾರ್ಯಕ್ರಮ ನಮ್ಮೂರಿನ ಹಬ್ಬ ವಾಗಿದೆ. ಪುರಸಭೆ ಪ್ರತಿಷ್ಟಿತ ಬೆಳ್ಳಿ ಗದೆ ನೀಡುತ್ತಾ ಇತಿಹಾಸ ಎತ್ತಿ ಹಿಡಿದಿದೆ. ಕ್ರೀಡೆಗೆ ಪುರಸಭೆ ಪ್ರೋತ್ಸಾಹ ನೀಡುತ್ತಿದೆ. ಪುರಸಭೆ ಅಧ್ಯಕ್ಷರಿಗೆ ಉಪಾಧ್ಯಕ್ಷರು, ಸರ್ವ ಸದಸ್ಯರುಗೆ, ಪುರಸಭೆ ಮುಖ್ಯಾಧಿಕಾರಿ, ಸರ್ವರಿಗೂ ಕೃತಜ್ಞತೆ ತಿಳಿಸಿದರು.ಪುರಸಭೆ ಉಪಾಧ್ಯಕ್ಷೆ ಪಾರ್ವತಮ್ಮ, ಸದಸ್ಯರು, ಶ್ರೀ ಗುರು ರೇವಣಸಿದ್ದೇಶ್ವರ ಕುರುಬರ ಸಮಾಜ, ಶ್ರೀ ಗುರು ರೇವಣ ಸಿದ್ದೇಶ್ವರ ಗರಡಿ ಕುಸ್ತಿ ಸಂಘದ ಪದಾದಿಕಾರಿ, ಸದಸ್ಯರು, ಪುರಸಭೆ ಮುಖ್ಯಾದಿಕಾರಿ ವಿಜಯಕುಮಾರ್ ಮತ್ತಿತರರು ಭಾಗವಹಿಸಿದ್ದರು.-
5ಕೆಟಿಆರ್.ಕೆ.30ಃ ತರೀಕೆರೆ ಪುರಸಭೆಯಿಂದ ಶ್ರೀ ಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘದ ಅಧ್ಯಕ್ಷ ಟಿ.ಎಸ್. ರಮೇಶ್ ಗೆ ಪ್ರತಿಷ್ಠಿತ ಬೆಳ್ಳಿಗದೆ ಹಸ್ತಾಂತರಿಸಲಾಯಿತು. ಪುರಸಭೆ ಅಧ್ಯಕ್ಷ ವಸಂತಕುಮಾರ್, ಉಪಾಧ್ಯಕ್ಷೆ ಪಾರ್ವತಮ್ಮ, ಮುಖ್ಯಾಧಿಕಾರಿ ವಿಜಯಕುಮಾರ್ ಇದ್ದರು.