ತರೀಕೆರೆ, ಅಜ್ಜಂಪುರದಲ್ಲೂ ಹಕ್ಕುಪತ್ರ ನೀಡಬೇಕಿದೆ: ಶಾಸಕ ಜಿ.ಎಚ್.ಶ್ರೀನಿವಾಸ್

| Published : Oct 06 2024, 01:32 AM IST

ತರೀಕೆರೆ, ಅಜ್ಜಂಪುರದಲ್ಲೂ ಹಕ್ಕುಪತ್ರ ನೀಡಬೇಕಿದೆ: ಶಾಸಕ ಜಿ.ಎಚ್.ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ ಮತ್ತು ಅಜ್ಜಂಪುರ ತಾಲೂಕಿನಲ್ಲಿ ಒಟ್ಟು 15000 ಕುಟುಂಬಗಳಿಗೆ 94 ಸಿ ಅಡಿ ಹಕ್ಕುಪತ್ರ ನೀಡಬೇಕಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ತಿಳಿಸಿದರು.

₹ 80 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ

ಕನ್ನಡಪ್ರಭ ವಾರ್ತೆ, ತರೀಕೆರೆ

ತರೀಕೆರೆ ಮತ್ತು ಅಜ್ಜಂಪುರ ತಾಲೂಕಿನಲ್ಲಿ ಒಟ್ಟು 15000 ಕುಟುಂಬಗಳಿಗೆ 94 ಸಿ ಅಡಿ ಹಕ್ಕುಪತ್ರ ನೀಡಬೇಕಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ತಿಳಿಸಿದರು.ತಾಲೂಕಿನ ಲಕ್ಕವಳ್ಳಿ ಹೋಬಳಿ ಗೋಪಾಲ ಗ್ರಾಪಂ ವ್ಯಾಪ್ತಿಯ ಬೀರೇಶ್ವರ ಗ್ರಾಮದಲ್ಲಿ ₹80 ಲಕ್ಷ ವೆಚ್ಚದಲ್ಲಿ ನಿರ್ಮಿಸುವ ಸಿಸಿ ರಸ್ತೆ ಕಾಮಗಾರಿಗೆ ಶನಿವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ಬರಗೇನಹಳ್ಳಿ ಗ್ರಾಪಂ ವ್ಯಾಪ್ತಿಯ ಗುರುಪುರ ಗ್ರಾಮದಲ್ಲಿ ₹ 1 ಕೋಟಿ ಗೌಳಿಗರ ಕ್ಯಾಂಪ್‌ನಲ್ಲಿ ₹15 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಿಸಲಾಗುತ್ತಿದೆ.

ಸೌಲಭ್ಯ ವಂಚಿತ ಗ್ರಾಮಗಳನ್ನು ಗುರುತಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಉಪಗ್ರಾಮಗಳ ಸ್ಥಾಪನೆಯಿಂದ ಸುಮಾರು 5,000 ಜನರಿಗೆ ಅನುಕೂಲವಾಗಲಿದೆ. ಈ ಭಾಗದ ಹಲವು ಗ್ರಾಮಗಳಲ್ಲಿ 94 ಸಿ ಹಕ್ಕುಪತ್ರ ನೀಡಲು ಕ್ರಮವಹಿಸಲಾಗುವುದು. ಬರಗೇನಹಳ್ಳಿ, ಮುಡುಗೋಡು ಗ್ರಾಮಗಳಿಗೆ ಭದ್ರಾ ಜಲಾಶಯದಿಂದ ಕುಡಿಯುವ ನೀರು ಒದಗಿಸಲಾಗುವುದು. ಈ ಭಾಗದಲ್ಲಿ ಆಗಬೇಕಿರುವ ಇತರೆ ರಸ್ತೆಗಳಿಗೆ ಅನುದಾನ ನೀಡಲಾಗುವುದು ಎಂದು ತಿಳಿಸಿದರು.

ಕೆಪಿಸಿಸಿ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ, ಲಕ್ಕವಳ್ಳಿ ಹೋಬಳಿ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನವನ್ನು ಶಾಸಕ ಜಿ.ಎಚ್. ಶ್ರೀನಿವಾಸ್ ನೀಡುತ್ತಿದ್ದಾರೆ. ಕುಗ್ರಾಮವಾಗಿರುವ ಗುರುಪುರ ಗ್ರಾಮಕ್ಕೆ ರಸ್ತೆ ಬೇಕೆಂಬುದು ಹಲವು ವರ್ಷಗಳ ಬೇಡಿಕೆಯಾಗಿತ್ತು. ಈಗ ಬೇಡಿಕೆ ಈಡೇರಿದೆ ಎಂದು ಹೇಳಿದರು.ಬರಗೇನಹಳ್ಳಿ ಗ್ರಾಪಂ ಅಧ್ಯಕ್ಷ ಮುನಿರಾಜ್, ಉಪಾಧ್ಯಕ್ಷೆ ಜಯಲಕ್ಷ್ಮೀ, ಸದಸ್ಯ ಚೇತನ್, ಮಣಿಯಣ್ಣ, ಬಾಲು, ಶಿವಣ್ಣ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ರವಿಕಿಶೋರ್, ತಾಪಂ ಮಾಜಿ ಸದಸ್ಯ ಕೆಂಪೇಗೌಡ, ಗೋಪಾಲ ಗ್ರಾಪಂ ಸದಸ್ಯರಾದ ಲತಾಪಾಲಯ್ಯ, ಮಮತಾ, ಸ್ಥಳೀಯ ಮುಖಂಡರಾದ ಮಣಿಕಂಠ ಪಾಲಯ್ಯ, ಕಾಳೇಗೌಡಕುಮಾರ್, ಸಂತೋಷ್ ಹಾಗೂ ಇತರರು ಹಾಜರಿದ್ದರು. 5ಕೆಟಿಆರ್.ಕೆ.4ಃ

ತರೀಕೆರೆ ತಾಲೂಕಿನ ಲಕ್ಕವಳ್ಳಿ ಹೋಬಳಿ ಗೋಪಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀರೇಶ್ವರ ಗ್ರಾಮದಲ್ಲಿ ₹80 ಲಕ್ಷ ವೆಚ್ಚದಲ್ಲಿ ನಿರ್ಮಿಸುವ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಜಿ.ಎಚ್.ಶ್ರೀನಿವಾಸ್ ಗುದ್ದಲಿಪೂಜೆ ನೆರವೇರಿಸಿದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ರವಿಕಿಶೋರ್ ಮತ್ತಿತರರು ಇದ್ದರು.