ಈ ಬಾರಿ ಸರಳ ಚಾಮರಾಜನಗರ ದಸರಾ ಉತ್ಸವ: ಸಚಿವ ವೆಂಕಟೇಶ್
KannadaprabhaNewsNetwork | Published : Oct 18 2023, 01:01 AM IST
ಈ ಬಾರಿ ಸರಳ ಚಾಮರಾಜನಗರ ದಸರಾ ಉತ್ಸವ: ಸಚಿವ ವೆಂಕಟೇಶ್
ಸಾರಾಂಶ
ಈ ಬಾರಿಯ ದಸರಾ ಸಂತೋಷ ಸಂಭ್ರಮದಿಂದ ಆಚರಿಸುವ ದಸರಾ ಆಗಿಲ್ಲ. ಆದ್ದರಿಂದ ಈ ಬಾರಿಯದು ಸರಳ ದಸರಾ ಉತ್ಸವ ಆಗಿರಲಿದೆ ಎಂದು ಪಶುಸಂಗೋಪನೆ, ರೇಷ್ಮೆ ಹಾಗೂ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಹೇಳಿದರು. ಚಾಮರಾಜೇಶ್ವರ ದೇವಸ್ಥಾನದಲ್ಲಿ ಮುಂಭಾಗದ ವೇದಿಕೆಯಲ್ಲಿ ಚಾಮರಾಜನಗರ ದಸರಾ ಮಹೋತ್ಸವ ಸಾಂಸ್ಕೃತಿಕ ಕಾರ್‍ಯಕ್ರಮಕ್ಕೆ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು
ದಸರಾ ಮಹೋತ್ಸವ ಸಾಂಸ್ಕೃತಿಕ ಕಾರ್‍ಯಕ್ರಮಕ್ಕೆ ನಗಾರಿ ಬಾರಿಸಿ ಚಾಲನೆ ಕನ್ನಡಪ್ರಭ ವಾರ್ತೆ ಚಾಮರಾಜನಗರ ಈ ಬಾರಿಯ ದಸರಾ ಸಂತೋಷ ಸಂಭ್ರಮದಿಂದ ಆಚರಿಸುವ ದಸರಾ ಆಗಿಲ್ಲ. ಆದ್ದರಿಂದ ಈ ಬಾರಿಯದು ಸರಳ ದಸರಾ ಉತ್ಸವ ಆಗಿರಲಿದೆ ಎಂದು ಪಶುಸಂಗೋಪನೆ, ರೇಷ್ಮೆ ಹಾಗೂ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಹೇಳಿದರು. ನಗರದ ಚಾಮರಾಜೇಶ್ವರ ದೇವಸ್ಥಾನದಲ್ಲಿ ಮುಂಭಾಗದ ವೇದಿಕೆಯಲ್ಲಿ ಚಾಮರಾಜನಗರ ದಸರಾ ಮಹೋತ್ಸವ ಸಾಂಸ್ಕೃತಿಕ ಕಾರ್‍ಯಕ್ರಮಕ್ಕೆ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಮೈಸೂರು ದಸರಾ ಬಹಳ ಅದ್ಧೂರಿಯಾಗಿ ಆಚರಿಸುವ ಕಾರ್‍ಯಕ್ರಮ. ಇಡೀ ವಿಶ್ವವೇ ಕುತೂಹಲದಿಂದ ನೋಡುವ ಉತ್ಸವವಾಗಿದೆ. ಮೈಸೂರು ಜಿಲ್ಲೆಯಿಂದ ಚಾಮರಾಜನಗರ ಪ್ರತೇಕವಾಗಿದ್ದರೂ ದಸರಾ ಹಬ್ಬದ ಬಾಂಧವ್ಯದ ಕೊಂಡಿಯಾಗಿದೆ. ದಸರಾ ಆಚರಣೆ ಚಾಮರಾಜನಗರ ಜಿಲ್ಲೆಯಲ್ಲೂ ನಡೆಯುತ್ತಿದೆ ಎಂದರು. ರಾಜ್ಯದಲ್ಲಿ ಮಳೆಯಿಲ್ಲದೇ ರೈತರಿಗೆ ಬೆಳೆ ನಷ್ಠವಾಗಿದ್ದು, ಕುಡಿಯಲು ನೀರಿಗೂ ಕಷ್ಠ ಎದುರಿಸಬೇಕಾದ ಪರಿಸ್ಥಿತಿ ಎಂದುರಿಸುವಂತಾಗಿದೆ. ನೀರಿಗಾಗಿ ಹೋರಾಟ ನಡೆಯುತ್ತಿದೆ. ನಾವು ಮನವಿ ಮಾಡಿದ್ದೇವೆ. ಆದರೆ ಅ.30ರ ವರೆಗೂ 3000 ಕ್ಯೂಸೆಕ್ಸ್ ನೀರು ಬಿಡಲು ಆದೇಶವಿದೆ ಎಂದರು. ಕಾರ್‍ಯಕ್ರಮದಲ್ಲಿ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಗಣೇಶ್ ಪ್ರಸಾದ್, ವಿಧಾನಪರಿಷತ್ ಶಾಸಕ ಮರಿತಿಬ್ಬೇಗೌಡ, ಜಿಲ್ಲಾಧಿಕಾರಿ ಸಿ.ಟಿ ಶಿಲ್ಪಾನಾಗ್, ಎಸ್ಪಿ ಪದ್ಮಿನಿ ಸಾಹು, ಸಿಇಓ ಆನಂದ್ ಪ್ರಕಾಶ್ ಮೀನಾ, ಎಡಿಸಿ ಗೀತಾ ಹುಡೇದ್, ಎಸಿ ಮಹೇಶ್, ತಹಸೀಲ್ದಾರ್ ಬಸವರಾಜು, ಪೌರಾಯುಕ್ತ ರಾಮದಾಸ್, ನಗರಸಬೆ ಸದಸ್ಯೆ ಚಿನ್ನಮ್ಮ ಇದ್ದರು. ಮುಂದಿನ ಬಾರಿ ಅದ್ಧೂರಿ ದಸರಾ ರಾಜ್ಯದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಬಾರದು, ರಾಜ್ಯದಲ್ಲಿ ಮಳೆಯಾಗಬೇಕು, ರಾಜ್ಯದ ಜನರ ಜೀವನ ಸುಧಾರಣೆಯಾಗಬೇಕು ಸಂಕಷ್ಟ ನಿವಾರಣೆಯಾಗಬೇಕು ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದರು. ರಾಜ್ಯದಲ್ಲಿ ಮಳೆ ಇಲ್ಲದೇ ಬೆಳೆಯೂ ಇಲ್ಲ, ಕೂಡಿಯಲು ನೀರು ಇಲ್ಲದೇ ಜನರು ಸಂಕಷ್ಠದ ಸ್ಥಿತಿಯಲ್ಲಿರುವುದರಿಂದ ಈ ಬಾರಿ ಸರಳ ದಸರಾ ಆಚರಣೆ ಮಾಡಲಾಗುತ್ತಿದ್ದು, ಮುಂದಿನ ಬಾರಿ ಮಳೆ ಬೆಳೆಯಾದರೆ ಅದ್ಧೂರಿ ದಸರಾ ಆಚರಣೆ ಮಾಡೋಣ ಎಂದರು. ಚಾಮರಾಜನಗರದ ಚಾಮರಾಜೇಶ್ವರ ದೇವಸ್ಥಾನದಲ್ಲಿ ಮುಂಭಾಗದ ವೇದಿಕೆಯಲ್ಲಿ ಚಾಮರಾಜನಗರ ದಸರಾ ಮಹೋತ್ಸವ ಸಾಂಸ್ಕೃತಿಕ ಕಾರ್‍ಯಕ್ರಮಕ್ಕೆ ನಗಾರಿ ಬಾರಿಸುವ ಮೂಲಕ ಪಶುಸಂಗೋಪನೆ, ರೇಷ್ಮೆ ಹಾಗೂ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಚಾಲನೆ ನೀಡಿದರು.