ಕಟೀಲು ದೇವಸ್ಥಾನದಲ್ಲಿ 41 ಜೋಡಿಗಳಿಗೆ ಸರಳ ವಿವಾಹ

| Published : May 02 2024, 12:21 AM IST

ಸಾರಾಂಶ

ಕಾರ್ಮಿಕರ ದಿನಾರಚಣೆ ಪ್ರಯುಕ್ತ ಸರ್ಕಾರಿ ರಜೆಯಿದ್ದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಸುಮಾರು 10, 000 ಜನರು ಅನ್ನ ಪ್ರಸಾದ ಭೋಜನ ಸ್ವೀಕರಿಸಿದ್ದಾರೆ.

ಕನ್ನಡಪ್ರಭವಾರ್ತೆ ಮೂಲ್ಕಿ

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬುಧವಾರ 41 ಜೋಡಿಗಳಿಗೆ ಸರಳ ರೀತಿಯಲ್ಲಿ ವಿವಾಹ ಬೆಳಗ್ಗೆ 8ರಿಂದ ಆರಂಭವಾಗಿ 1 ಗಂಟೆ ತನಕ ನಡೆಯಿತು.

ಕಾರ್ಮಿಕರ ದಿನಾರಚಣೆ ಪ್ರಯುಕ್ತ ಸರ್ಕಾರಿ ರಜೆಯಿದ್ದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಸುಮಾರು 10, 000 ಜನರು ಅನ್ನ ಪ್ರಸಾದ ಭೋಜನ ಸ್ವೀಕರಿಸಿದ್ದಾರೆ. ಸುವವ್ಯಸ್ಥಿತವಾಗಿ ಮದುವೆ ಮುಹೂರ್ತ ನಡೆಯುವ ನಿಟ್ಟಿನಲ್ಲಿ ಮದುವೆ ವ್ಯವಸ್ಥೆ ಗೆ 8 ಜನ ಅರ್ಚಕ, ಪುರೋಹಿತರು, ನಾಲ್ಕು ಕೌಂಟರ್ ಹಾಗೂ ನೋಂದಣಿಗೆ ಪ್ರತ್ಯೇಕ ಸಿಬ್ಬಂದಿ ನೇಮಕ ಮಾಡಲಾಗಿದೆ. ಮೇ ತಿಂಗಳಿನಲ್ಲಿ ಮೌಡ್ಯ ಇರುವುದರಿಂದ ಶುಭ ಕಾರ್ಯ ಮದುವೆ ಮಹೂರ್ತಗಳು ಇರದ ಕಾರಣ ಗುರುವಾರ ಹಾಗೂ ಆದಿತ್ಯವಾರ ಹೆಚ್ಚಿನ ಮದುವೆಗಳು ನಡೆಯಲಿದೆ.

ಟ್ರಾಫಿಕ್ ವ್ಯವಸ್ಥೆ: ಮದುವೆಯಿದ್ದ ಕಾರಣ ಮದುವೆಗೆ ಬಂದ ದಿಬ್ಬಣ ಹಾಗೂ ರಜಾ ದಿನವಾದುದರಿಂದ ಕಟೀಲು ಪೇಟೆ ಹಾಗೂ ರಥಬೀದಿ ಬಸ್ಸು ನಿಲ್ದಾಣದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.