ಸಾರಾಂಶ
ಹೊಸಕೋಟೆ: ನಗರದ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿ ಸಕಲ ಮೂಲ ಸೌಕರ್ಯಗಳನ್ನು ಒದಗಿಸಿ ಮಾದರಿ ನಗರವನ್ನಾಗಿ ಮಾಡುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ಹೊಸಕೋಟೆ: ನಗರದ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿ ಸಕಲ ಮೂಲ ಸೌಕರ್ಯಗಳನ್ನು ಒದಗಿಸಿ ಮಾದರಿ ನಗರವನ್ನಾಗಿ ಮಾಡುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು
ಹೊಸಕೋಟೆ ನಗರಸಭೆ ವ್ಯಾಪ್ತಿಯ 5ನೇ ವಾರ್ಡ್ ನ ಕೆಳಗಿನ ಪೇಟೆಯ ದೊಡ್ಡನಾಲಯವನ್ನು 1 ಕೋಟಿ ವೆಚ್ಚದಲ್ಲಿ ಹಾಗೂ 1ನೇ ವಾರ್ಡ್ ನ ಸ್ವಾಮಿ ವಿವೇಕಾನಂದ ನಗರದ ಮುಖ್ಯರಸ್ತೆಯಲ್ಲಿ 80 ಲಕ್ಷ ರು. ವೆಚ್ಚದ ಚರಂಡಿ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಶರತ್ ಬಚ್ಚೇಗೌಡ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರುಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಗುತ್ತಿಗೆದಾರರು ಗುಣ ಮಟ್ಟಕ್ಕೆ ಆದ್ಯತೆ ನೀಡಬೇಕು. ಕಾಂಕ್ರೀಟ್ ರಸ್ತೆ, ಡಾಂಬರು ರಸ್ತೆ, ಪೈಪ್ ಲೈನ್ ನಿರ್ಮಾಣ ಕಾಮಗಾರಿ, ಚರಂಡಿ ಇತರೆ ಎಲ್ಲಾ ಕೆಲಸಗಳು ಗುಣಮಟ್ಟದಿಂದ ಇರಬೇಕು ಎಂದರು.
ನುಡಿದಂತೆ ನಡೆದಿದ್ದೇವೆ:ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದ್ದೇವೆ. ಆದ್ದರಿಂದ ಮತದಾರರು ಅಭಿವೃದ್ಧಿಗೆ ಆದ್ಯತೆ ನೀಡುವವರಿಗೆ ಆಶೀರ್ವಾದ ಮಾಡಬೇಕು. ಮುಂದಿನ ದಿನಗಳಲ್ಲಿ ನಗರವನ್ನು ಮಾದರಿ ನಗರವನ್ನಾಗಿ ನಿರ್ಮಿಸಲು ಅಗತ್ಯ ಅನುದಾನವನ್ನು ಸರ್ಕಾರದಿಂದ ತರುವ ಪ್ರಯತ್ನ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಆಯುಕ್ತ ಜಹೀರ್ ಅಬ್ಬಾಸ್, ನಗರಸಭೆ ಸದಸ್ಯರಾದ ಕೇಶವಮೂರ್ತಿ, ರೂಪಾ ರಮೇಶ್, ಜಮುನಾ ಹರೀಶ್, ಮುಖಂಡರಾದ ಬಿ.ವಿ. ಭೈರೇಗೌಡ, ಕೃಷ್ಣಮೂರ್ತಿ (ಕಿಟ್ಟಿ), ರಾಕೇಶ್, ಗೋಪಿ, ಆರ್‌ಟಿಸಿ ಗೋವಿಂದ್ ರಾಜ್ ಸೇರಿ ಹಲವು ಮುಖಂಡರು ಹಾಜರಿದ್ದರು.ಫೋಟೋ: 5 ಹೆಚ್‌ಎಸ್‌ಕೆ 2ಹೊಸಕೋಟೆಯ ವಿವೇಕಾನಂದ ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಶರತ್ ಬಚ್ಚೇಗೌಡ ಚಾಲನೆ ನೀಡಿದರು.