ನಿವೃತ್ತರಾದ ನಂತರ ತಮ್ಮ ಕರ್ತವ್ಯ ಮುಗಿಯಿತೆಂದು ಭಾವಿಸಬೇಡಿ. ದೇಹದಲ್ಲಿ ಶಕ್ತಿ ಇರುವವರೆಗೆ ಸಮಾಜ ಸೇವೆಗೆ ಹೆಚ್ಚು ಒತ್ತು ನೀಡಿ. ಬಿಡುವಿನ ಸಮಯದಲ್ಲಿ ಪುಸ್ತಕ ಮತ್ತು ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ. ಸಂಘದಲ್ಲಿ ಗ್ರಂಥಾಲಯ ಸ್ಥಾಪನೆಗೆ ವೈಯಕ್ತಿಕವಾಗಿ ಆರ್ಥಿಕ ಸಹಾಯ ನೀಡುತ್ತೇನೆ.

ಕನ್ನಡಪ್ರಭ ವಾರ್ತೆ ಮದ್ದೂರು

ಸರ್ಕಾರಿ ನಿವೃತ್ತ ನೌಕರರ ಸಂಘಕ್ಕೆ ಅಗತ್ಯ ನಿವೇಶನ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಕೆ.ಎಂ. ಉದಯ್ ಮಂಗಳವಾರ ಹೇಳಿದರು.

ಪಟ್ಟಣದ ಸರ್ಕಾರಿ ನಿವೃತ್ತ ನೌಕರರ ಸಂಘದ ಕಚೇರಿಯಲ್ಲಿ ವಾರ್ಷಿಕ ದಿನದರ್ಶಿ ಬಿಡುಗಡೆ ಮಾಡಿ ಅವರು ಮಾತನಾಡಿದರು. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಲವಾರು ವರ್ಷಗಳ ಕಾಲ ಜನಸೇವೆ ಮಾಡಿ ನಿವೃತ್ತರಾಗಿರುವ ತಮಗೆ ವಿಶ್ರಾಂತಿ ಜೀವನ ಅಗತ್ಯವಾಗಿದೆ. ಹೀಗಾಗಿ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಿ ಎಂದರು.

ನಿವೃತ್ತರಾದ ನಂತರ ತಮ್ಮ ಕರ್ತವ್ಯ ಮುಗಿಯಿತೆಂದು ಭಾವಿಸಬೇಡಿ. ದೇಹದಲ್ಲಿ ಶಕ್ತಿ ಇರುವವರೆಗೆ ಸಮಾಜ ಸೇವೆಗೆ ಹೆಚ್ಚು ಒತ್ತು ನೀಡಿ. ಬಿಡುವಿನ ಸಮಯದಲ್ಲಿ ಪುಸ್ತಕ ಮತ್ತು ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ. ಸಂಘದಲ್ಲಿ ಗ್ರಂಥಾಲಯ ಸ್ಥಾಪನೆಗೆ ವೈಯಕ್ತಿಕವಾಗಿ ಆರ್ಥಿಕಸಹಾಯ ನೀಡುವುದಾಗಿ ಭರವಸೆ ನೀಡಿದರು.

ಸಂಘಕ್ಕೆ ಹೆಚ್ಚುವರಿಯಾಗಿ ನಿವೇಶನ ದೊರಕಿಸುವಂತೆ ಮನವಿ ಸಲ್ಲಿಸಿದ್ದೀರಿ, ನಿವೇಶನ ದೊರಕಿಸುವ ಸಂಬಂಧ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಉದಯ ಆಶ್ವಾಸನೆ ನೀಡಿದರು. ಗುರುಗಳ ಮಾತಿಗೆ ಕಟ್ಟು ಬಿದ್ದು ಕಣದಿಂದ ಹಿಂದಕ್ಕೆ: ಸ್ವಾಮೀಜಿ

ಪಾಂಡವಪುರ: ನಮ್ಮ ಗುರುಗಳು ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಸೂಚಿಸಿದ್ದರಿಂದ ಅವರ ಮಾತಿಗೆ ಕಟ್ಟು ಬಿದ್ದು ಲೋಕಸಭೆಗೆ ಸಲ್ಲಿಸಲಾಗಿದ್ದ ನಾಮಪತ್ರ ಹಿಂಪಡೆಯುವ ನಿರ್ಧಾರ ಮಾಡಿದೆ ಎಂದು ಶಿರಹಟ್ಟಿಯ ಭಾವೈಕ್ಯತಾ ಮಹಾಪೀಠದ ಉತ್ತರಾಧಿಕಾರಿ ಡಾ.ಫಕೀರದಿಂಗಾಲೇಶ್ವರ ಮಹಾ ಸ್ವಾಮೀಜಿ ಹೇಳಿದರು.ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಪಟ್ಟಣಕ್ಕೆ ಆಗಮಿಸಿದ ಶ್ರೀಗಳು ಸುದ್ಧಿಗಾರರ ಪ್ರಶ್ನೆಗೆ ಉತ್ತರಿಸಿ, ಗುರುಗಳ ಮಾತಿಗೆ ವಿರುದ್ಧವಾಗಿ ನಡೆದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಅವರ ಮಾತಿಗೆ ಬೆಲೆಕೊಟ್ಟು ಉಮೇದುವಾರಿಕೆ ವಾಪಸ್ ಪಡೆದೆ ಎಂದರು.

ಕೇಂದ್ರ ಸಚಿವ ಪ್ರಹ್ಲಾದಜೋಶಿ ಅವರಿಂದ ಹಣ ಪಡೆದು ನಾಮಪತ್ರ ಹಿಂದಕ್ಕೆ ಪಡೆದೆ ಎನ್ನುವುದು ಸತ್ಯಕ್ಕೆ ದೂರವಾದ ವಿಚಾರ. ಆ ರೀತಿ ಹೇಳಿಕೊಳ್ಳುವವರಿಗೆ ನೂರಾರು ದಾರಿಗಳಿರುತ್ತವೆ ಪ್ರತಿಕ್ರಿಯಿಸಿದರು.

ಮದ್ದೂರು ತಾಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಚ್.ಎಂ .ಮಲ್ಲಯ್ಯ ಅಧ್ಯಕ್ಷತೆ ವಹಿಸಿದ್ದರು. ಸಂಘದ ಮೈಸೂರು ವಿಭಾಗದ ಉಪಾಧ್ಯಕ್ಷ ರಾದಶ್ರೀನಿವಾಸ್, ಶಶಿಧರ್, ಗೌರವಾಧ್ಯಕ್ಷ ಮುದ್ದೇಗೌಡ, ಉಪಾಧ್ಯಕ್ಷ ಪುಟ್ಟೇಗೌಡ ಕಾರ್ಯದರ್ಶಿ ಸಿದ್ದೇಗೌಡ, ಚಿಕ್ಕ ಪುಟ್ಟಯ್ಯ, ರಾಜ್ಯ ಸಂಘದ ಪ್ರತಿನಿಧಿ ಮಲ್ಲೇಶಪ್ಪ, ತಾಲೂಕು ಸರ್ಕಾರಿ ನೌಕರ ಸಂಘದ ಮಾಜಿ ಅಧ್ಯಕ್ಷ ಎಚ್.ಕೆ.ನಾರಾಯಣ ಮತ್ತಿತರರು ಭಾಗವಹಿಸಿದ್ದರು.