ಸಮಾಜದಲ್ಲಿ ಸಂಘಟನೆ ಹಾಗೂ ಒಗ್ಗಟ್ಟು ಮುಖ್ಯ. ಎಲ್ಲರ ಸಹಕಾರದೊಂದಿಗೆ ರಾಜ್ಯದಲ್ಲಿ ದೇವಾಂಗ ಸಮಾಜವನ್ನು ಬಲಪಡಿಸುವುದರ ಜತೆಗೆ, ಸರ್ಕಾರ ಮತ್ತು ರಾಜಕೀಯ ಪಕ್ಷಗಳಿಂದ ಸಮಾಜಕ್ಕೆ ಸಿಗಬೇಕಾದ ಹಕ್ಕು ಹಾಗೂ ಗೌರವಗಳನ್ನು ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
ಕನ್ನಡಪ್ರಭ ವಾರ್ತೆ ಗದಗ
ಸಮಾಜದಲ್ಲಿ ಸಂಘಟನೆ ಹಾಗೂ ಒಗ್ಗಟ್ಟು ಮುಖ್ಯ. ಎಲ್ಲರ ಸಹಕಾರದೊಂದಿಗೆ ರಾಜ್ಯದಲ್ಲಿ ದೇವಾಂಗ ಸಮಾಜವನ್ನು ಬಲಪಡಿಸುವುದರ ಜತೆಗೆ, ಸರ್ಕಾರ ಮತ್ತು ರಾಜಕೀಯ ಪಕ್ಷಗಳಿಂದ ಸಮಾಜಕ್ಕೆ ಸಿಗಬೇಕಾದ ಹಕ್ಕು ಹಾಗೂ ಗೌರವಗಳನ್ನು ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಕರ್ನಾಟಕ ರಾಜ್ಯ ದೇವಾಂಗ ಸಂಘದ ಸಂಘಟನಾ ಕಾರ್ಯದರ್ಶಿ ಹಾಗೂ ನಗರಸಭಾ ಸದಸ್ಯ ರಾಘವೇಂದ್ರ ಯಳವತ್ತಿ ಹೇಳಿದರು. ಬೆಟಗೇರಿಯ ಪಾಲಾ ಬದಾಮಿ ರೋಡ್ ಬಳಿಯಿರುವ ಆದ್ಯವಚನಕಾರ ದೇವರ ದಾಸಿಮಯ್ಯನವರ ಪುತ್ಥಳಿ ಬಳಿ ನಡೆದ 45ನೇ ಹುಣ್ಣಿಮೆ ವಚನ ವಾಚನ ಕಾರ್ಯಕ್ರಮದಲ್ಲಿ, ರಾಜ್ಯ ದೇವಾಂಗ ಸಂಘಕ್ಕೆ ಆಯ್ಕೆಯಾದ ರಾಘವೇಂದ್ರ ಯಳವತ್ತಿ ಹಾಗೂ ನಿರ್ದೇಶಕರಾಗಿ ಆಯ್ಕೆಯಾದ ಅಶೋಕ ಹೊನ್ನಳ್ಳಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಕಾರ್ಯಕ್ರಮದಲ್ಲಿ ವೀರಭದ್ರ ದೇವಧರ ಪೂಜೆ ನೆರವೇರಿಸಿದರು. ಸಾಹಿತಿ ರಾಮಚಂದ್ರ ಹುಬ್ಬಳ್ಳಿ, ದೊಡ್ಡಪ್ಪ ಮೂಲಿಮನಿ ಹಾಗೂ ಶಂಕ್ರಪ್ಪ ತೊಂಡಿಹಾಳ ಅವರು ದೇವರ ದಾಸಿಮಯ್ಯನವರ ಒಲವಿಲ್ಲದ ಭಕ್ತಿ ಲವಲವಿಕೆಯಿಲ್ಲದ ಪೂಜೆ ಎಂಬ 45ನೇ ವಚನವನ್ನು ವಾಚಿಸಿ, ಅದರ ತಾತ್ಪರ್ಯವನ್ನು ವಿವರಿಸಿದರು.
ಶ್ರೀನಿವಾಸ ಹುಬ್ಬಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜದ ಒಗ್ಗಟ್ಟಿನ ಮಹತ್ವವನ್ನು ತಿಳಿಸಿದರು. ಜಿಲ್ಲಾಧ್ಯಕ್ಷ ಡಿ. ಎಫ್. ಕೊಳ್ಳಿ ಮಾತನಾಡಿ, ಪ್ರತಿ ಹುಣ್ಣಿಮೆಯಂದು ಬೆಳಗ್ಗೆ 9.30ರಿಂದ 10 ಗಂಟೆಯವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಂಘಟನೆಯನ್ನು ಬಲಪಡಿಸಬೇಕೆಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಅಶೋಕ ಬಣ್ಣದ, ಮಲ್ಲಣ್ಣ ಬೆಲ್ಲದ, ಅನಿಲ ಗಡ್ಡಿ, ಆರ್.ಕೆ. ಹುಬ್ಬಳ್ಳಿ, ವೀರಭದ್ರಪ್ಪ ದೇವದಾರ, ಅಶೋಕ ಅಂಟಿನ, ಮಂಜುನಾಥ ಹರವಿ, ಸುಭಾಸ್ ಸಿಂಗಾಡಿ, ಪ್ರಭು ನೀಲಗುಂದ, ಪ್ರಕಾಶ ಹತ್ತಿಕಾಳ, ಸಂಕಣ್ಣ ಸೊರಟೂರ, ಶ್ರೀಧರ ಹಾಳಕೇರಿ, ಸಿದ್ದು ಪಿಂಡಕೂರ, ಮೈಲಾರಿ ತುರಕಾಣಿ, ಬಸವರಾಜ ಮುದಗಲ್ಲ, ಶಂಕ್ರಪ್ಪ ಗಂಜಿ, ನವೀನ ಮೇಡಿ ಮುಂತಾದವರಿದ್ದರು.