ಸಿಂದಗಿ ಮತಕ್ಷೇತ್ರ ಜಿಲ್ಲೆಯಲ್ಲಿಯೇ ಹೆಚ್ಚು ಅಭಿವೃದ್ಧಿಯಾಗುತ್ತಿರುವ ಕ್ಷೇತ್ರವಾಗುತ್ತಿರುವುದು ಅತ್ಯಂತ ಸಂತಸ ತಂದಿದೆ. ಈ ಕ್ಷೇತ್ರದ ಅಭಿವೃದ್ಧಿಗೆ ನಿತ್ಯ ಪರಿಶ್ರಮ ಪಡುತ್ತಿರುವ ಶಾಸಕ ಅಶೋಕ ಮನಗೂಳಿ ಕಾರ್ಯ ಶ್ಲಾಘನೀಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಪ್ರಶಂಶೆ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಸಿಂದಗಿ
ಸಿಂದಗಿ ಮತಕ್ಷೇತ್ರ ಜಿಲ್ಲೆಯಲ್ಲಿಯೇ ಹೆಚ್ಚು ಅಭಿವೃದ್ಧಿಯಾಗುತ್ತಿರುವ ಕ್ಷೇತ್ರವಾಗುತ್ತಿರುವುದು ಅತ್ಯಂತ ಸಂತಸ ತಂದಿದೆ. ಈ ಕ್ಷೇತ್ರದ ಅಭಿವೃದ್ಧಿಗೆ ನಿತ್ಯ ಪರಿಶ್ರಮ ಪಡುತ್ತಿರುವ ಶಾಸಕ ಅಶೋಕ ಮನಗೂಳಿ ಕಾರ್ಯ ಶ್ಲಾಘನೀಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಪ್ರಶಂಶೆ ವ್ಯಕ್ತಪಡಿಸಿದರು.ಪಟ್ಟಣದ ನೂತನ ಗಾಂಧಿ ಪುತ್ಥಳಿ ಅನಾವರಣ, ರಾಷ್ಟ್ರೀಯ ಲಾಂಛನ ಅಶೋಕ ಸ್ತಂಭ, ನಗರಸಭೆ ಕಾರ್ಯಾಲಯ, ಸರ್ಕಾರಿ ಆಸ್ಪತ್ರೆಗೆ ನೂತನ ಹೈಟೆಕ್ ಆ್ಯಂಬುಲೆನ್ಸ್ ಮತ್ತು ಡಯಾಲಿಸಿಸ್ ಸೆಂಟರ್, ಪಿಡಿಯಾಡ್ರಿಕ್ ಐಸಿಯು ಘಟಕಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರತ ಸಂವಿಧಾನ ಯಾವುದೇ ಜಾತಿ, ಧರ್ಮಕ್ಕೆ ಸೇರಿಲ್ಲ, ಭಾರತ ಅತ್ಯಂತ ಶ್ರೇಷ್ಠ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಡಾ.ಅಂಬೇಡ್ಕರ್ ಹಾಗೂ ಗಾಂಧೀಜಿ ಕೊಡುಗೆ ಈ ದೇಶಕ್ಕೆ ಅಪಾರವಾಗಿದೆ. 77ನೇ ಗಣರಾಜ್ಯೋತ್ಸವ ದಿನ ಗಾಂಧೀಜಿಯವರ ಪುತ್ಥಳಿ ಮತ್ತು ರಾಷ್ಟ್ರ ಲಾಂಛನ ಅಶೋಕ ಸ್ತಂಭ ಅನಾವರಣಗೊಳಿಸಿದ್ದು ಗಾಂಧೀಜಿ ಮತ್ತು ಅಂಬೇಡ್ಕರ್‌ಗೆ ನೀಡಿದ ಗೌರವವಾಗಿದೆ ಎಂದರು.
ಈ ಜಿಲ್ಲೆಯಲ್ಲಿ ಎಲ್ಲಿಯೂ ಇಲ್ಲದಂತ ಅಶೋಕ ಸ್ತಂಭ ಸಿಂದಗಿಯಲ್ಲಿ ನಿರ್ಮಾಣವಾಗಿದ್ದು ಸಂತಸ. ವಿಜಯಪುರ ಜಿಲ್ಲೆ ಕೈಗಾರಿಕಾ ವಲಯದಲ್ಲಿ, ಆರೋಗ್ಯ, ಶಿಕ್ಷಣ, ಮೂಲಭೂತ ಸೌಕರ್ಯಗಳಲ್ಲಿ ಇನ್ನು ಹೆಚ್ಚು ಹೆಚ್ಚು ಅಭಿವೃದ್ಧಿಯಾಗಬೇಕಿದೆ. ಈ ಜಿಲ್ಲೆಯನ್ನು ಮಾದರಿ ಜಿಲ್ಲೆಯಾಗಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಹೆಚ್ಚು ಒತ್ತಡ ಹಾಕುತ್ತಿದ್ದೇವೆ. ಸಿಂದಗಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸಲು ನಾನು ಮತ್ತು ಶಾಸಕರು ಮುಖ್ಯಮಂತ್ರಿಗಳಿಗೆ ಒತ್ತಡ ಹಾಕುತ್ತೇವೆ ಎಂದರು.ಶಾಸಕ ಅಶೋಕ ಮನಗೂಳಿ ಮಾತನಾಡಿ, ನಾನು ಈ ಕ್ಷೇತ್ರವನ್ನು ಇನ್ನು ಹೆಚ್ಚು ಅಭಿವೃದ್ಧಿ ಮಾಡುವ ಕನಸು ಹೊತ್ತಿದ್ದೇನೆ. ಸಿಂದಗಿಯಲ್ಲಿನ ಬಸ್ ನಿಲ್ದಾಣ ಇಕ್ಕಟ್ಟಾಗುತ್ತಿದೆ ಗೋಲಗೇರಿ ರಸ್ತೆಯಲ್ಲಿ 2 ಎಕರೆ ಜಮೀನಿನಲ್ಲಿ ಸೇಟ್ ಲೈಟ್ ಬಸ್ ನಿಲ್ದಾಣ ಮಾಡುವ ಕನಸು ಹೊತ್ತು ನಿಂತಿದ್ದೇನೆ. ಜೊತೆಗೆ ಆರೋಗ್ಯ ಸೇವೆಗೆ ನಾನು ಸದಾ ಸಿದ್ಧ. ರಾಜ್ಯ ಯಾವುದೆ ಸರ್ಕಾರಿ ಆಸ್ಪತ್ರೆಯಲ್ಲಿ ಇರದೆ ಇರುವ ಹೈಟೆಕ್ ಆ್ಯಂಬುಲೆನ್ಸ್ ತಂದಿರುವುದು ಸಂತಸ ತಂದಿದೆ. ಸಿಂದಗಿ ಪಟ್ಟಣದ 54 ಸಾವಿರ ಜನರ ಬಹುದಿನಗಳ ಬೇಡಿಕೆಯಾಗಿರುವ ಸಿಂದಗಿ ಪುರಸಭೆಯನ್ನು ನಗರಸಭೆ ಮಾಡುವುದಾಗಿತ್ತು ಅದು ನಮ್ಮ ಸರ್ಕಾರ ಒದಗಿಸಿದೆ. ಡಯಾಲಿಸಿಸ್‌ಗಾಗಿ ನಮ್ಮ ಭಾಗದ ಜನತೆ ದೂರದ ವಿಜಯಪುರ, ಸೋಲಾಪುರ ನಗರಗಳಿಗೆ ಹೋಗುವ ಸ್ಥಿತಿ ನಿರ್ಮಾಣವಾಗಿತ್ತು ಇಂದು ಸಿಂದಗಿ ಆಸ್ಪತ್ರೆಯಲ್ಲಿಯೆ ಅದು ಸಿಗುವಂತಾಗಿದೆ ಕ್ಷೇತ್ರದ ಜನತೆ ನನ್ನ ಕಾರ್ಯಗಳಿಗೆ ಸದಾ ಸಹಕಾರ ನೀಡಿ ಎಂದರು.
ಸಾನ್ನಿಧ್ಯ ವಹಿಸಿದ ಸೋನ್ನ ದಾಸೋಹ ವಿರಕ್ತ ಮಠದ ಡಾ.ಶಿವಾನಂದ ಮಹಾಸ್ವಾಮೀಜಿ, ಸಿಂದಗಿ ಬುದ್ದವಿಹಾರದ ಶ್ರೀ ಸಂಘಪಾಲ ಭಂತೇಜಿ, ಹುಲಜಯಂತಿಯ ಶ್ರೀ ಮಾಳಿಂಗರಾಯ ಮಹಾರಾಜರು ಸಾನ್ನಿಧ್ಯ ವಹಿಸಿ ಮಾತನಾಡಿದರು. ವೇದಿಕೆ ಮೇಲೆ ಕಾಂಗ್ರೆಸ್ ಮುಖಂಡರಾದ ಅಶೋಕ ವಾರದ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಬಸವರಾಜ ಕಾಂಬಳೆ, ಶ್ರೀಶೈಲ ಕವಲಗಿ, ಸಾಧಿಕ ಸುಂಬಡ ಸೇರಿದಂತೆ ಇತರರು ಇದ್ದರು.ಸಿಂದಗಿ ಶಾಸಕ ಹಠವಾದಿ. ಒಮ್ಮೆ ಹಿಡಿದ ಕೆಲಸವನ್ನು ಯಾವುತ್ತು ಬಿಟ್ಟ ಉದಾರಹಣೆಗಳೆ ಇಲ್ಲ. ದಿ.ಎಂ.ಸಿ.ಮನಗೂಳಿ ಅವರ ಕನಸುಗಳನ್ನು ನನಸು ಮಾಡುವಲ್ಲಿ ಕ್ಷೇತ್ರದ ತುಂಬೆಲ್ಲ ನಿತ್ಯ ದುಡಿಯುತ್ತಿದ್ದಾರೆ. ನನ್ನ ಕ್ಷೇತ್ರದಲ್ಲಿ ಕಳೆದ ಬಾರಿ ಅನೇಕ ಅಭೀವೃದ್ಧಿ ಪರ ಕಾರ್ಯ ಮಾಡಿದ್ದೇನೆ ಆದರೆ ರಾಜ್ಯ ಸರ್ಕಾರದ ಹಿಂತಾ ಪರಿಸ್ಥಿತಿಯಲ್ಲಿ ಪ್ರಸ್ತುತ ನನ್ನ ಕ್ಷೇತ್ರದಲ್ಲಿ ನಾನು ಇಷ್ಟು ಕಾರ್ಯ ಮಾಡಿಲ್ಲ. ಶಾಸಕ ಅಶೋಕ ಮನಗೂಳಿ ಸಂಬಂಧಿಸಿದ ಇಲಾಖೆಗಳಿಗೆ, ಸಚಿವರಿಗೆ ಭೇಟಿ ನೀಡಿ ಅಭಿವೃದ್ಧಿಗೆ ಅನುದಾನ ತರುತ್ತಲೆ ಇದ್ದಾರೆ ಇದು ಅವರ ಸೃಜನಾತ್ಮಕ ಕಾರ್ಯ.
ಎಂ.ಬಿ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವರು