ಸಿಂಗರಾಜಪುರ ಪಿಎಸಿಎಸ್ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

| Published : Nov 08 2025, 01:45 AM IST

ಸಾರಾಂಶ

ಚನ್ನಪಟ್ಟಣ: ತಾಲೂಕಿನ ಪ್ರತಿಷ್ಠಿತ ಸಹಕಾರ ಸಂಸ್ಥೆಯಲ್ಲಿ ಒಂದಾಗಿರುವ ಸಿಂಗರಾಜಪುರ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಹನಿಯೂರು ಎಚ್.ಎಂ.ಶಿವರಾಮೇಗೌಡ ಹಾಗೂ ಉಪಾಧ್ಯಕ್ಷರಾಗಿ ಸಿಂಗರಾಜಿಪುರದ ಎಸ್.ಶಿವಕುಮಾರ್ ಅವಿರೋಧವಾಗಿ ಆಯ್ಕೆಯಾದರು.

ಚನ್ನಪಟ್ಟಣ: ತಾಲೂಕಿನ ಪ್ರತಿಷ್ಠಿತ ಸಹಕಾರ ಸಂಸ್ಥೆಯಲ್ಲಿ ಒಂದಾಗಿರುವ ಸಿಂಗರಾಜಪುರ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಹನಿಯೂರು ಎಚ್.ಎಂ.ಶಿವರಾಮೇಗೌಡ ಹಾಗೂ ಉಪಾಧ್ಯಕ್ಷರಾಗಿ ಸಿಂಗರಾಜಿಪುರದ ಎಸ್.ಶಿವಕುಮಾರ್ ಅವಿರೋಧವಾಗಿ ಆಯ್ಕೆಯಾದರು.

ಸಂಘದ ೨೦೨೫-೩೦ನೇ ಸಾಲಿನ ಆಡಳಿತ ಮಂಡಳಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಂಘದ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹನಿಯೂರು ಎಚ್.ಎಂ.ಶಿವರಾಮೇಗೌಡ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಿಂಗರಾಜಿಪುರದ ಎಸ್. ಶಿವಕುಮಾರ್ ಅವರು ಮಾತ್ರ ನಾಮಪತ್ರ ಸಲ್ಲಿಸಿ ಕಣದಲ್ಲಿ ಉಳಿದಿದ್ದರು. ಅವರ ಪ್ರತಿಸ್ಪರ್ಧಿಯಾಗಿ ಯಾರೂ ನಾಮಪತ್ರ ಸಲ್ಲಿದ ಕಾರಣ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಸಹಕಾರಿ ಇಲಾಖೆಯ ಅಧಿಕಾರಿ ರಮ್ಯಶ್ರೀ ಚುನಾವಣಾ ಪ್ರಕ್ರಿಯೆ ನಡೆಸಿ ಇವರಿಬ್ಬರ ಅವಿರೋಧ ಆಯ್ಕೆಯನ್ನು ಘೋಷಿಸಿದರು.

ಚುನಾವಣಾ ಪ್ರಕ್ರಿಯೆಯಲ್ಲಿ ನಿರ್ದೇಶಕರಾದ ಭೂಹಳ್ಳಿ ಕೃಷ್ಣೇಗೌಡ, ಕೆಂಪ್ಪಮ್ಮ, ಗೌರಮ್ಮ , ವರದರಾಜು, ಪಿಹಳ್ಳಿದೊಡ್ಡಿ ಎಂ. ಪ್ರಕಾಶ್, ಬೈರಶೆಟ್ಟಿಹಳ್ಳಿ ಎಸ್.ಲಿಂಗೇಶ್‌ಕುಮಾರ್, ಲೋಕೇಶ್, ಪಿ.ಹಳ್ಳಿದೊಡ್ಡಿ ವಿಜಯ್‌ಕುಮಾರ್, ಉಜ್ಜನಹಳ್ಳಿ ಸಂಪತ್ತು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಿರೋಧ ಆಯ್ಕೆಗೆ ಸಹಕರಿಸಿ ಅಭಿನಂದಿಸಿದರು.

ಮುಖಂಡರಾದ ಸಿಂಗರಾಜಪುರ ರಾಜಣ್ಣ, ಅರಳಾಳಸುಂದ್ರ ಶಿವಪ್ಪ, ಬಾನುಪ್ರಸಾದ್, ಭೂಹಳ್ಳಿ ಗ್ರಾ.ಪಂ.ಅಧ್ಯಕ್ಷ ಭೈರಪ್ಪ, ಮಾಜಿ ಅಧ್ಯಕ್ಷ ನಿಂಗೇಗೌಡ, ರವೀಶ್,ಸುದರ್ಶನ್,ಚನ್ನೇಗೌಡ ಹಾಗೂ ಸಂಘದ ಪ್ರಬಾರ ಕಾರ್ಯದರ್ಶಿ ಸಿದ್ದರಾಮು, ಸಿಬ್ಬಂದಿಗಳಾದ ಲಕ್ಷ್ಮಮ್ಮ, ರೂಪ, ಸ್ಪಂದನಗೌಡ, ಶಶಿಕುಮಾರ್ ಇತರರು ಹಾಜರಿದ್ದು ನೂತನ ನಿರ್ದೇಶಕರನ್ನು ಅಭಿನಂದಿಸಿದರು.

ಸಂಘದ ಶ್ರೇಯೋಭಿವೃದ್ದಿಗೆ ಶ್ರಮಿಸುವೆ:

ನನ್ನ ಮೇಲೆ ವಿಶ್ವಾಸವಿಟ್ಟು ಅವಿರೋಧವಾಗಿ ಆಯ್ಕೆ ಮಾಡಿದ್ದು ಸಂಘ ಪ್ರಗತಿಯತ್ತ ಸಾಗುತ್ತಿದ್ದು ಸದಸ್ಯರು ಮತ್ತು ಮುಖಂಡರ ಸಲಹೆ ಸಹಕಾರವನ್ನು ಪಡೆದು ಸರ್ಕಾರ ಮತ್ತು ಸಂಘದಿಂದ ದೊರೆಯುವ ಸೌಲಭ್ಯಗಳನ್ನು ರೈತರಿಗೆ ದೊರಕಿಸಿಟ್ಟು ಕೊಟ್ಟು ಸಂಘದ ಶ್ರೇಯೋಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ ಎಂದು ಸಂಘದ ಅಧ್ಯಕ್ಷ ಎಚ್.ಎಂ.ಶಿವರಾಮೇಗೌಡ ಮತ್ತು ಉಪಾಧ್ಯಕ್ಷ ಎಸ್.ಶಿವಕುಮಾರ್ ತಿಳಿಸಿದರು.

ಪೊಟೋ೫ಸಿಪಿಟಿ೨:

ಚನ್ನಪಟ್ಟಣ ತಾಲೂಕಿನ ಸಿಂಗರಾಜಪುರ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹನಿಯೂರು ಎಚ್.ಎಂ.ಶಿವರಾಮೇಗೌಡ ಹಾಗೂ ಉಪಾಧ್ಯಕ್ಷರಾಗಿ ಸಿಂಗರಾಜಿಪುರದ ಎಸ್. ಶಿವಕುಮಾರ್ ಅವರನ್ನು ಅಭಿನಂದಿಸಲಾಯಿತು.