ಮೋದಿ ಜೊತೆ ಪಾರಾಯಣ: ಸಮಾಜದ ಪ್ರಮುಖರ ಚಿಂತನಾ ಸಭೆ

| Published : Nov 12 2025, 03:00 AM IST

ಮೋದಿ ಜೊತೆ ಪಾರಾಯಣ: ಸಮಾಜದ ಪ್ರಮುಖರ ಚಿಂತನಾ ಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಚತುರ್ಥ ಪರ್ಯಾಯದ ಪ್ರತಿಷ್ಠಿತ ಲಕ್ಷಕಂಠ ಗೀತಾ ಪಾರಾಯಣ ಕಾರ್ಯಕ್ರಮದದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಲಿದ್ದು, ಈ ಹಿನ್ನೆಲೆಯಲ್ಲಿ ಗೀತಾ ಪಾರಾಯಣ ನಡೆಸುವ ಸಮಾಜದ ಪ್ರಮುಖ ಭಕ್ತರ ಚಿಂತನಾ ಸಭೆ ಕೃಷ್ಣಮಠದ ಕನಕ ಮಂಟಪದಲ್ಲಿ ಮಂಗಳವಾರ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಚತುರ್ಥ ಪರ್ಯಾಯದ ಪ್ರತಿಷ್ಠಿತ ಲಕ್ಷಕಂಠ ಗೀತಾ ಪಾರಾಯಣ ಕಾರ್ಯಕ್ರಮದದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಲಿದ್ದು, ಈ ಹಿನ್ನೆಲೆಯಲ್ಲಿ ಗೀತಾ ಪಾರಾಯಣ ನಡೆಸುವ ಸಮಾಜದ ಪ್ರಮುಖ ಭಕ್ತರ ಚಿಂತನಾ ಸಭೆ ಕೃಷ್ಣಮಠದ ಕನಕ ಮಂಟಪದಲ್ಲಿ ಮಂಗಳವಾರ ನಡೆಯಿತು.ನ.28ರಂದು ನಡೆಯುವ ಈ ಕಾರ್ಯಕ್ರಮದ ಬಗ್ಗೆ ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯರು ಮತ್ತು ಬೃಹತ್ ಗೀತೋತ್ಸವದ ಸಂಚಾಲಕರಾದ ಸುಪ್ರಸಾದ ಶೆಟ್ಟಿ ವಿಸ್ತೃತವಾದ ಮಾಹಿತಿಗಳನ್ನು ನೀಡಿ ಸರ್ವರ ಸಹಕಾರವನ್ನು ಕೋರಿದರು. ಸಭೆಯಲ್ಲಿ ವಿಶ್ವಕರ್ಮ, ಪದ್ಮಶಾಲಿ, ಸೋಮಕ್ಷತ್ರಿಯ, ರಾಮಕ್ಷತ್ರಿಯ, ದೇವಾಡಿಗ, ಬ್ರಾಹ್ಮಣ, ರಾಜಾಪುರ ಸಾರಸ್ವತ, ಗೌಡ ಸಾರಸ್ವತ, ದೈವಜ್ಞ ಬ್ರಾಹ್ಮಣ, ಜೋಗಿ, ಮೊಗವೀರ, ಸಮಾಜದ ಪ್ರಮುಖರ ಜೊತೆಗೆ ಕೇರಳ ಸಮಾಜ, ಸಣ್ಣ ಕೈಗಾರಿಗೆಗಳ ಸಂಘ, ಐಎಂಎ, ಯುವ ಬ್ರಾಹ್ಮಣ ಪರಿಷತ್, ವಿವಿಧ ಭಜನಾ ಮಂಡಳಿಗಳು, ಪತಂಜಲಿ ಯೋಗ ಸಮಿತಿ, ಸೌಂದರ್ಯ ತಜ್ಞೆಯರ ಸಂಘ, ಟೈಲರ್ಸ್ ಅಸೋಸಿಯೇಶನ್, ಮಠದಬೆಟ್ಟು ಯುವಕ ಮಂಡಲ, ಅಶ್ವಥಕಟ್ಟೆ ಭಕ್ತವೃಂದ, ಸರಕಾರಿ ನಿವೃತ್ತ ಅಧಿಕಾರಿಗಳ ಸಂಘ, ತುಳು ಶಿವಳ್ಳಿ ಬ್ರಾಹ್ಮಣ ಸಂಘ, ಆಯುಶ್ ಸಮಾಜ, ಪಣಿಯಾಡಿ ದೇವಸ್ಥಾನ, ಯಕ್ಷಗಾನ ಕಲಾರಂಗ, ಚಕ್ರತೀರ್ಥ ಯುವಕ ಸಂಘ , ತಾಲೂಕು ವಿಪ್ರ ಮಹಿಳಾ ತಂಡ, ಮೊದಲಾದ ಸಂಘಗಳ ಪ್ರಮುಖರು ಉಪಸ್ಥಿತರಿದ್ದರು.ಪ್ರಮೋದ್ ಸಾಗರ್ ಸ್ವಾಗತಿಸಿದರು. ಮಠದ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಡಾ. ಸುರೇಶ್ ಶೆಣೈ, ಜಯರಾಮ ಆಚಾರ್ಯ, ವಿಶ್ವನಾಥ ನಾಯಕ್, ರಮಣ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು. ಜಿ.ವಿ. ಆಚಾರ್ಯ ವಂದಿಸಿದರು.