ಇಂಡಿಗನತ್ತ ಗ್ರಾಮದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ಅಭಿಯಾನ

| Published : Feb 04 2024, 01:31 AM IST / Updated: Feb 04 2024, 01:32 AM IST

ಸಾರಾಂಶ

ನಾಗಮಲೆಗೆ ಬರುವ ಭಕ್ತಾದಿಗಳು ಬೆಟ್ಟಗುಡ್ಡಗಳನ್ನು ದಾಟಿಕೊಂಡು ಬರಬೇಕು ಅಂತಹ ಸಂದರ್ಭದಲ್ಲಿ ತಾವು ತರುವ ಪ್ಲಾಸ್ಟಿಕ್ ಬಾಟಲ್ ತ್ಯಾಜ್ಯಗಳನ್ನು ಡಸ್ಟ್‌ಬಿನ್‌ನಲ್ಲಿ ಹಾಕುವಂತೆ ಪರಿಸರ ವಾರಿಯರ್ಸ್ ಗ್ರೂಪ್‌ನ ಮಂಜುನಾಥ್ ಭಕ್ತಾದಿಗಳಲ್ಲಿ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಹನೂರು ನಾಗಮಲೆಗೆ ಬರುವ ಭಕ್ತಾದಿಗಳು ಬೆಟ್ಟಗುಡ್ಡಗಳನ್ನು ದಾಟಿಕೊಂಡು ಬರಬೇಕು ಅಂತಹ ಸಂದರ್ಭದಲ್ಲಿ ತಾವು ತರುವ ಪ್ಲಾಸ್ಟಿಕ್ ಬಾಟಲ್ ತ್ಯಾಜ್ಯಗಳನ್ನು ಡಸ್ಟ್‌ಬಿನ್‌ನಲ್ಲಿ ಹಾಕುವಂತೆ ಪರಿಸರ ವಾರಿಯರ್ಸ್ ಗ್ರೂಪ್‌ನ ಮಂಜುನಾಥ್ ಭಕ್ತಾದಿಗಳಲ್ಲಿ ಮನವಿ ಮಾಡಿದರು. ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಶ್ರೀ ಕ್ಷೇತ್ರ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಿಂದ ಶ್ರೀ ಕ್ಷೇತ್ರದ ವರೆಗೆ 25 ಕಡೆಗೆ ಡಸ್ಟ್ ಬಿನ್ ಗಳನ್ನು ಇಟ್ಟು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪವಾಡಪುರುಷ ಪುಣ್ಯಕ್ಷೇತ್ರ ನಾಗಮಲೆಗೆ ಬರುವ ಮಾದಪ್ಪನ ಭಕ್ತಾದಿಗಳು ಬೆಟ್ಟ ಗುಡ್ಡಗಳನ್ನು ದಾಟಿಕೊಂಡು ಬರುವ ಸಂದರ್ಭದಲ್ಲಿ ತಾವು ತರುವ ಪ್ಲಾಸ್ಟಿಕ್ ಬಾಟಲ್ ಮತ್ತು ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬೀಸಾಡದೇ ಮೈಸೂರು ಪರಿಸರ ವಾರಿಯರ್ಸ್ ಗ್ರೂಪ್ ಹಾಗೂ ಅರಣ್ಯ ಇಲಾಖೆ ಸಹಯೋಗದೊಂದಿಗೆ ನಡೆಯುತ್ತಿರುವ ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ಅಭಿಯಾನಕ್ಕೆ ಮಾದಪ್ಪನ ಭಕ್ತರು ಕೈಜೋಡಿಸುವ ಮೂಲಕ ಭಕ್ತಾದಿಗಳು ಎಲ್ಲೆಂದರಲ್ಲಿ ಬಾಟಲ್ ಮತ್ತು ಪ್ಲಾಸ್ಟಿಕ್ ಇನ್ನಿತರ ತ್ಯಾಜ್ಯ ವಸ್ತುಗಳನ್ನು ಇಟ್ಟಿರುವ ಡಸ್ಟ್ ಬಿನ್ ಗಳಲ್ಲಿ ಹಾಕಬೇಕು ಜೊತೆಗೆ ಪ್ಲಾಸ್ಟಿಕ್ ಬಾಟಲ್ ಗಳ ಮತ್ತು ತ್ಯಾಜ್ಯಗಳಿಂದ ಅರಣ್ಯ ಪ್ರದೇಶ ಪರಿಸರ ಹಾಳಾಗುವುದರ ಜೊತೆಗೆ ಕಾಡುಪ್ರಾಣಿಗಳು ಅದನ್ನು ತಿಂದು ಜೀವಹಾನಿ ಸಂಭವಿಸುತ್ತದೆ ತಪ್ಪಿಸಲು ನಾಗಮಲೆ ದೇವಾಲಯ ಮತ್ತು ಬರುವ ಕಾಲು ದಾರಿಗಳಲ್ಲಿ ಪರಿಸರ ಪರಿಸರ ಮಾಲಿನ್ಯ ರಹಿತವಾಗಿ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕಳೆದ ಮೂರು ವರ್ಷಗಳಿಂದ ಹಲವಾರು ಬಾರಿ ಜಾಗೃತಿ ಸಭೆಗಳನ್ನು ನಡೆಸಿ ಭಕ್ತರಿಗೆ ಮನವಿ ಮಾಡಲಾಗಿದೆ ಎಂದರು.