ಕಡೂರುಎಸ್.ಐ.ಆರ್ ಪ್ರಕ್ರಿಯೆಯಲ್ಲಿ ಇದುವರೆಗೆ ಡಿಜಿಟಲೈಸೇಶನ್ ಕಾರ್ಯದಲ್ಲಿ ಶೇ 52.08 ಪ್ರಗತಿ ಸಾಧಿಸಲಾಗಿದೆ ಎಂದು ಮತದಾರ ನೋಂದಣಾಧಿಕಾರಿ ಎಂ‌.ತಿರುಮಲೇಶ್ ಹೇಳಿದರು.

205158 ಮತದಾರರಿಗೆ ಇವಿ ಫಾರ್ಮ್ । 107673 ಫಾರ್ಮ್ ಗಳನ್ನು ಡಿಜಿಟಲೈಸ್

ಕನ್ನಡಪ್ರಭ ವಾರ್ತೆ ಕಡೂರು

ಎಸ್.ಐ.ಆರ್ ಪ್ರಕ್ರಿಯೆಯಲ್ಲಿ ಇದುವರೆಗೆ ಡಿಜಿಟಲೈಸೇಶನ್ ಕಾರ್ಯದಲ್ಲಿ ಶೇ 52.08 ಪ್ರಗತಿ ಸಾಧಿಸಲಾಗಿದೆ ಎಂದು ಮತದಾರ ನೋಂದಣಾಧಿಕಾರಿ ಎಂ‌.ತಿರುಮಲೇಶ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 206740 ಮತದಾರರಿದ್ದು, 205158 ಮತದಾರರಿಗೆ ಇವಿ ಫಾರ್ಮ್ ನೀಡಲಾಗಿದೆ.107673 ಫಾರ್ಮ್ ಗಳನ್ನು ಡಿಜಿಟಲೈಸ್ ಮಾಡಲಾಗಿದೆ. 99067 ಮತದಾರರ ಡಿಜಟಲೀಕರಣ ಬಾಕಿ ಉಳಿದಿದೆ. ಒಟ್ಟಾರೆ ಡಿಜಿಟಲೈಜೇಷನ್ ನಲ್ಲಿ 52.08 ಪ್ರಗತಿ ಸಾಧಿಸಲಾಗಿದೆ. ಈವರೆಗೆ 199230 (96. ಶೇ 37) ಮತದಾರರ ಮ್ಯಾಪಿಂಗ್ ಕಾರ್ಯ ಮುಗಿದಿದೆ. 8 ತಾಲೂಕು ಮಟ್ಟದ ಅಧಿಕಾರಿಗಳನ್ನು ನೋಡಲ್ ಆಫೀಸರ್ ಗಳನ್ನಾಗಿ ನೇಮಿಸಲಾಗಿದೆ.

ಕಡೂರು ಮತ್ತು ಬೀರೂರು ಪುರಸಭೆ ಸೇರಿದಂತೆ 253 ಮತಗಟ್ಟೆಗಳಿವೆ. ಒಟ್ಟು 253 ಮತಗಟ್ಟೆ ಅಧಿಕಾರಿಗಳು, 46 ಮತಗಟ್ಟೆ ಮೇಲ್ವಿಚಾರಕರು, 759 ಮತಗಟ್ಟೆ ಸಹಾಯಕರು ಐಎಸ್ಆರ್ ಪ್ರಕ್ರಿಯೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಿಕ್ಕಮಗಳೂರು ಕ್ಷೇತ್ರ ವ್ತಾಪ್ತಿಗೆ ಸೇರುವ ಸಖರಾಯಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿ ಒಟ್ಟು 50 ಮತಗಟ್ಟೆಗಳಿದ್ದು, 50 ಮತಗಟ್ಟೆ ಅಧಿಕಾರಿಗಳು, 12 ಮೇಲ್ವಿಚಾರಕರು, 150 ಮತಗಟ್ಟೆ ಸಹಾಯಕರು, ಒಬ್ಬರು ನೋಡಲ್ ಅಧಿಕಾರಿ ಕಾರ್ಯನಿರ್ವಹಿಸುತ್ತಿದ್ದು, ಸಖರಾಯಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿ ಒಟ್ಟು 44988 ಮತದಾರರಿದ್ದಾರೆ. 43743 ಮತದಾರರ ಮ್ಯಾಪಿಂಗ್ ಮುಗಿದಿದೆ. 25869 ಇಎಫ್ ಗಳ ಡಿಜಿಟಲೈಸ್ ಮಾಡಲಾಗಿದೆ. ಒಟ್ಟಾರೆ 57.50 ಪ್ರಗತಿ ಸಾಧಿಸಲಾಗಿದೆ ಎಂದರು.

ಇಎಫ್ ಫಾರ್ಮ್ ಪಡೆದವರು ಅದರಲ್ಲಿರುವ ಮಾಹಿತಿ ದಾಖಲಿಸಿ ಅದನ್ನು ವಾಪಸ್ ಬಿಎಲ್ಓ ಗಳಿಗೆ ಕಡ್ಡಾಯವಾಗಿ ನೀಡಬೇಕು. ಆಗ ಮಾತ್ರ ಮತದಾರರ ಪಟ್ಟಿಯಲ್ಲಿ ಹೆಸರು ಸೇರುತ್ತದೆ ಎಂಬುದನ್ನು ಗಮನಿಸಬೇಕು. ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂಬುದು ಇಡೀ ಎಸ್ಐಆರ್ ಪ್ರಕ್ರಿಯೆ ಮೂಲ ಉದ್ದೇಶ ವಾಗಿದೆ. ಈ ಪ್ರಕ್ರಿಯೆಯಲ್ಲಿ ಪ್ರತಿ ಮನೆಗೂ ಬಿಎಲ್ಓ ಗಳು ಕನಿಷ್ಠ 3 ಬಾರಿ ಭೇಟಿ ನೀಡುವುದು ಕಡ್ಡಾಯ.

ಆಗಸ್ಟ್ 5 ರಂದು ಕರಡು ಮತದಾರರ ಪಟ್ಟಿ‌ಪ್ರಕಟವಾಗುತ್ತದೆ. ಆಗ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದವರು ಮನವಿ ಸಲ್ಲಿಸ ಬಹುದು‌. ಮ್ಯಾಪಿಂಗ್ ಕಾರ್ಯ ಆಗದವರ ಪಟ್ಟಿ ತಯಾರಿಸಿ ಅವರಿಗೆ ನೋಟೀಸ್ ನೀಡಿ ಅಗತ್ಯ ದಾಖಲೆ ಪರಿಶೀಲನೆ ನಡೆಸಿ ಅರ್ಹರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ಕಾರ್ಯ ಮಾಡಲಾಗುವುದು. ಈ ಎಲ್ಲ ಕಾರ್ಯಗಳು ಮುಗಿದ ನಂತರ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ. ಕ್ಷೇತ್ರ ವ್ಯಾಪ್ತಿಯಲ್ಲಿ‌ಮತದಾರರ ಉಪಯೋಗಕ್ಕೆ 4 ಸಹಾಯ ಕೇಂದ್ರ ಗಳನ್ನು ಸ್ಥಾಪಿಸಲಾಗಿದೆ. ಯಾವುದೇ ಸಹಾಯ ಬೇಕಿದ್ದರೆ ಈ ಸಹಾಯ ಕೇಂದ್ರದ ಉಪಯೋಗ ಪಡೆಯಬಹುದು ಎಂದರು.ಒಟ್ಟಾರೆ ಎಸ್.ಐ‌.ಆರ್.ಪ್ರಕ್ರಿಯೆ ಸಂಪೂರ್ಣ ಪಾರದರ್ಶಕ ಹಾಗೂ ಸಮರ್ಪಕವಾಗಿ ನಡೆಯುವ ನಿಟ್ಟಿನಲ್ಲಿ ಎಲ್ಲ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಮತದಾರರ ನೊಂದಣಾಧಿಕಾರಿಯೂ ಆದ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ಇಓ ಸಿ‌ಆರ್.ಪ್ರವೀಣ್, ಚುನಾವಣಾ ಶಿರಸ್ತೇದಾರ್ ಎಲ್.ಕೆ.ಪ್ರದೀಪ್ ಕುಮಾರ್ ಇದ್ದರು.

14ಕೆಕೆಡಿಯು4: ಮತದಾರರಿಗೆ ಇಎಫ್ ಫಾರ್ಮ್ ನೀಡಿದ ಮತದಾರರ ನೋಂದಣಾಧಿಕಾರಿ ಎ‌ಂ.ತಿರುಮಲೇಶ್. ತಹಸೀಲ್ದಾರ್ ಪೂರ್ಣಿಮಾ ಇದ್ದರು.