ಎಸ್‌ಐಆರ್ ವಿಶೇಷ ಮತ ಪರಿಷ್ಕರಣೆ ಪ್ರಜಾಪ್ರಭುತ್ವದ ಆಶಯಗಳಿಗೆ ಮಾರಕ ಎಂದು ದೂರಿ ಪ್ರಗತಿಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.

ಕನ್ನಡಪ್ರಭ ವಾರ್ತೆ, ತುಮಕೂರುಎಸ್‌ಐಆರ್ ವಿಶೇಷ ಮತ ಪರಿಷ್ಕರಣೆ ಪ್ರಜಾಪ್ರಭುತ್ವದ ಆಶಯಗಳಿಗೆ ಮಾರಕ ಎಂದು ದೂರಿ ಪ್ರಗತಿಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಿಸರವಾದಿ ಸಿ.ಯತಿರಾಜ್ ಕೇಂದ್ರದ ಬಿಜೆಪಿ ಸರ್ಕಾರ ದೇಶದ ನಾಗರಿಕರ ಮತದಾನದ ಹಕ್ಕನ್ನು ಕಸಿಯುತ್ತಿರುವುದು ಪ್ರಜಾಪ್ರಭುತ್ವದ ವಿರೋಧಿ ನಡೆಯಾಗಿದೆ, ಚುನಾವಣಾ ಆಯುಕ್ತರು ನಿಷ್ಪಕ್ಷಪಾತವಾಗಿ ಮತ ಪರಿಷ್ಕರಣೆ ನಡೆಸುತ್ತಾರೆಂಬ ನಂಬುಕೆ ನಮಗಿಲ್ಲ ಎಂದರು. ಬಿಜೆಪಿ ಪಕ್ಷದ ವಕ್ತಾರರಂತೆ ಚುನಾವಣಾ ಆಯುಕ್ತರು ವರ್ತಿಸುತ್ತಿರುವುದು ಖಂಡನೀಯವಾಗಿದೆ. ಮತದಾನದ ಹಕ್ಕು ನಮ್ಮ ಮೂಲಭೂತ ಹಕ್ಕಾಗಬೇಕು. ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸುವಲ್ಲಿ ವಿಫಲವಾಗಿದೆ ಅವರನ್ನುಅಧಿಕಾರದಿಂದ ಕೆಳಗಿಳಿಸಬೇಕು ಎಂದರು. ಎಸ್‌ಐಆರ್ ಕೇವಲ ರಾಜಕೀಯ ವಿಷಯಗಳಲ್ಲ ಜನಸಾಮಾನ್ಯರಿಗೆತೊಂದರೆ ನೀಡುತ್ತದೆ.ನಾಗರಿಕರಾದ ನಾವೆಲ್ಲ ಎಚ್ಚರ ವಹಿಸಬೇಕು. ರಾಜಕೀಯ ಪಕ್ಷಗಳು ಬರೀ ಮತದಾನ ಮಾಡಿಸಿಕೊಳ್ಳುವುದಷ್ಟೇ ಅಲ್ಲ, ಪ್ರಜೆಗಳ ಹಿತವನ್ನು ಕಾಯುವ ಹಿಚ್ಚಾಶಕ್ತಿ ಪ್ರದರ್ಶಿಸಬೇಕು ಎಂದರು. ಪಿಯುಸಿಎಲ್ ಜಿಲ್ಲಾಧ್ಯಕ್ಷ ಪ್ರೊ.ಕೆ ದೊರೈರಾಜ್‌ ಎಸ್‌ಐಆರ್‌ ಜನಾಭಿಪ್ರಾಯ ಕೇಳದೆ ಸರ್ವಾಧಿಕಾರಿ ಧೋರಣೆಯ ಪ್ರಕ್ರಿಯೆ ಪ್ರಜಾಪ್ರಭುತ್ವದ ವಿರುದ್ಧದ ನಡೆಯಾಗಿದೆ ಎಂದರು.ನಂತರ ಟ್ರಾನ್ಸಜೆಂಡರ್ ಸಮುದಾಯದ ದೀಪಿಕಾ ಮಾತನಾಡಿ ಎಸ್‌ಐಆರ್‌ ನಮ್ಮ ಸಾಂವಿಧಾನಿಕ ಗುರುತನ್ನು ಹೊಸಕಿ ಹಾಕುವ ಹುನ್ನಾರವಾಗಿದೆ.ತಂದೆ ತಾಯಿ ಸಮಾಜದಿಂದ ದೂರವಿರಿಸಿದ ನಮ್ಮಂತವರಿಗೆ ಸಂವಿಧಾನ ನೀಡಿರುವ ಮೂಲಭೂತ ಹಕ್ಕು ಅದೇ ಮತದಾನ, ಅಂತಹ ಹಕ್ಕನ್ನು ಎಸ್‌ಐಆರ್ ವಿಶೇಷ ಮತಪರಿಷ್ಕರಣೆ ನೆಪದಲ್ಲಿ ಕಸಿಯುತ್ತಿರುವುದು ಚುನಾವಣಾ ಆಯೋಗ ತಾರತಮ್ಯದ ನೀತಿಯಾಗಿದೆ ಎಂದರು.ಲಿಂಗತ್ವ ಅಲ್ಪಸಂಖ್ಯಾತರಾದ ನಾವು ತಂದೆತಾಯಿ ಬಿಟ್ಟು ಊರು ಬಿಟ್ಟು ವಲಸೆ ಸುತ್ತುವ ನಮ್ಮನ್ನು ನಿಮ್ಮ ತಂದೆಯಾರು.?ಎಲ್ಲಿಂದ ಬಂದಿರಿ,? ನಿಮ್ಮ ಹುಟ್ಟಿದ ಜನನ ಪ್ರಮಾಣ ಪತ್ರಕೊಡಿ ವಂಶ ವೃಕ್ಷಕೊಡಿ ಎಂಬ 11 ದಾಖಲೆಗಳು ಕೇಳಿದರೇ ಏನು ಮಾಡುವುದು. ಇದು ಜನವಿರೋಧಿಯಾಗಿದೆ ಇಂತಹ ಎಸ್‌ಐಆರ್ ನಮಗೆ ಬೇಡ ಎಂದರು.

ಈ ಸಂದರ್ಭದಲ್ಲಿ ಎದ್ದೇಳು ಕರ್ನಾಟಕದ ರಾಮಕೃಷ್ಣಪ್ಪ, ಎನ್.ಇಂದಿರಮ್ಮ, ವೆಲ್ಪೇರ್ ಪಾರ್ಟಿಯ ಜಿಲ್ಲಾಧ್ಯಕ್ಷ ತಾಜದ್ದೀನ್. ಸ್ಲಂಜನಾಂದೋಲನ ಕರ್ನಾಟಕದ ಅರುಣ್, ಆಮಾತೆ ಇಸ್ಲಾಮಿ ಅಸ್ರಾರ್‌ ಅಹ್ಮದ್,ಲೇಖಕಿಯರ ಸಂಘದ ಸುನಂದಮ್ಮ, ಜಾಗೃತ ಕರ್ನಾಟಕದ ಮಂಜುಳಾ,ಕರ್ನಾಟಕ ರಾಜ್ಯ ರೈತ ಸಂಘದ ಬಿಸಿ ಶಂಕ್ರಪ್ಪ, ಎಐಎಂಎಸ್‌ಎಸ್‌ ಜಿಲ್ಲಾಧ್ಯಕ್ಷರಾದ ಎಂ.ವಿ ಕಲ್ಯಾಣಿ ಮುಂತಾದವರು ಪಾಲ್ಗೊಂಡಿದ್ದರು.