SIR: Massive Campaign Against the Conspiracy of Anarchy
-ಸಂಸದ ರಾಘವೇಂದ್ರ ಮಾಹಿತಿ । ಕಾಂಗ್ರೆಸ್ ಷಡ್ಯಂತ್ರದ ವಿರುದ್ಧ ದೇಶಾದ್ಯಂತ ಹೋರಾಟಕನ್ನಡಪ್ರಭ ವಾರ್ತೆ ಶಿಕಾರಿಪುರ
ಕಾಂಗ್ರೆಸ್ ಪಕ್ಷ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆಯ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದ ಕೆಲ ದೇಶ ವಿರೋಧಿ ಚಿಂತನೆಗಳ ಜೊತೆ ಕೈಜೋಡಿಸಿ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡಿಸುವ ಮೂಲಕ ದೇಶದಲ್ಲಿ ಅರಾಜಕತೆ ರೂಪಿಸುವ ಸಂಚು ರೂಪಿಸುತ್ತಿದ್ದು, ಈ ಷಡ್ಯಂತ್ರದ ವಿರುದ್ಧ ದೇಶಾದ್ಯಂತ ದೊಡ್ಡ ಮಟ್ಟದ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ಎಂಬ ಹೆಗ್ಗಳಿಕೆ ಹೊಂದಿರುವ ದೇಶದಲ್ಲಿ ಚುನಾವಣೆಗೆ ಸೀಮಿತವಾಗದೆ ಪ್ರತಿಯೊಬ್ಬ ಮತದಾರರ ಹಕ್ಕು ರಕ್ಷಿಸುವ ಜೊತೆಗೆ ಸಂವಿಧಾನದ ಘನತೆ ಗೌರವ ಹಾಗೂ ಪಾವಿತ್ರವನ್ನು ಕಾಪಾಡುವುದು ಎಲ್ಲ ಪಕ್ಷದ ಮುಖ್ಯ ಉದ್ದೇಶ ಎಂದ ಅವರು ಕಾಂಗ್ರೆಸ್ ನಾಯಕರು ಪಕ್ಷ ಜಯ ಗಳಿಸಿದಾಗ ಚುನಾವಣೆ ವ್ಯವಸ್ಥೆ ಬಗ್ಗೆ ಮೌನವಹಿಸಿ ಸೋತಾಗ ಟೀಕಿಸಿ ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಸಂಚು ರೂಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನಾಭಿಪ್ರಾಯ ಸಹಜ. ತರ್ಕ, ಚರ್ಚೆ ಮೂಲಕ ಪರಿಹರಿಸಿಕೊಳ್ಳಬಹುದಾದ ಸಮಸ್ಯೆಯ ನೆಪದಲ್ಲಿ ದೇಶ ವಿರೋಧಿ ಶಕ್ತಿಗಳ ಜತೆ ಕೈ ಜೋಡಿಸಿ ಜನತೆಯಲ್ಲಿ ಗೊಂದಲ ಹುಟ್ಟಿ ಹಾಕಿ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಅಪನಂಬಿಕೆ ಹುಟ್ಟುಹಾಕುವ ಪ್ರಯತ್ನ ಯುಪಿಎ ನಾಯಕರು ಮಾಡುತ್ತಿದ್ದಾರೆ ಎಂದು ದೂರಿದರು.ಜನಪರ ಆಡಳಿತದಿಂದಾಗಿ ಸತತ ಮೂರು ಬಾರಿ ಮೋದಿ ದೇಶದ ಪ್ರಧಾನಿಯಾಗಿದ್ದು, ಸತತ ಮೂರು ಬಾರಿ ಸೋಲು ಅನುಭವಿಸಿದ ಕಾಂಗ್ರೆಸ್ ಪಕ್ಷ ಇದೀಗ ಮತದಾರರ ಸಮಗ್ರ ಪಟ್ಟಿ ಪರಿಷ್ಕರಣೆ ಬಗ್ಗೆ ಗೊಂದಲ ಹುಟ್ಟು ಹಾಕಿ ದೇಶ ವಿರೋಧಿ ಶಕ್ತಿಗಳ ಜೊತೆ ಕೈಜೋಡಿಸಿ ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಪ್ರಯತ್ನ ಮಾಡುತ್ತಿದೆ ಎಂದ ಅವರು ವಿಪಕ್ಷದ ಪ್ರಜಾತಂತ್ರ ವಿರೋಧಿ ನಡೆ ಖಂಡಿಸಿ ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ ಎಂದು ದೇಶದ ಜನತೆಯಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ದೇಶಾದ್ಯಂತ ಪಕ್ಷಾತೀತ ಆಂದೋಲನ ಹಮ್ಮಿಕೊಳ್ಳಲಾಗಿದೆ.
ಇಂದು ಶಿವಮೊಗ್ಗದಲ್ಲಿ: ಗುರುವಾರ ಬೆಳಗ್ಗೆ 10 ಕ್ಕೆ ಶಿವಮೊಗ್ಗದ ರಾಮಣ್ಣ ಶೆಟ್ಟಿ ಪಾರ್ಕನಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಬಾರಿ ಜನಾಂದೋಲನವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಕೋಟ ಶ್ರೀನಿವಾಸ ಪೂಜಾರಿ ಸಹಿತ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.ಗೋಷ್ಠಿಯಲ್ಲಿ ತಾ. ಬಿಜೆಪಿ ಉಪಾಧ್ಯಕ್ಷ ವಸಂತಗೌಡ, ಶಿವಣ್ಣ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಚನ್ನವೀರಪ್ಪ, ದಿಶಾ ಸಮಿತಿ ಸದಸ್ಯ ಮಲ್ಲಿಕಾರ್ಜುನ ಹಕ್ರೆ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಸಿದ್ದಲಿಂಗಪ್ಪ ಮುಖಂಡ ಸುಧೀರ್ ಮಾರವಳ್ಳಿ, ಪಾಲಾಕ್ಷಪ್ಪ, ರಾಘವೇಂದ್ರ, ರುದ್ರಪ್ಪಯ್ಯ, ವೀರಣ್ಣ ಇದ್ದರು.
ಫೋಟೋ:4 ಕೆ.ಎಸ್.ಕೆ.ಪಿ 1ಶಿಕಾರಿಪುರ ಪತ್ರಿಕಾಗೋಷ್ಠಿಯಲ್ಲಿ ಸಂಸದ ರಾಘವೇಂದ್ರ ಮಾತನಾಡಿದರು.