ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ನೇತೃತ್ವದಲ್ಲಿ ಎಸ್ಐಆರ್ ಪ್ರಕ್ರಿಯೆ ಆರಂಭಗೊಂಡಿದ್ದು, 35 ವಾರ್ಡ್‌ಗಳಿಗೂ ಮಹಾನಗರ ಪಾಲಿಕೆ ಅಧಿಕಾರಿಗಳ ಜೊತೆ ಬಿಎಲ್ಓಗಳಿಗೆ ಫಾರಂಗಳನ್ನು ವಾಹನಗಳಲ್ಲಿ ಕಳುಹಿಸಲಾಯಿತು.

ಮಹಾನಗರ ಪಾಲಿಕೆ, ನಗರದ ವಾರ್ಡ್‌ಗಳಲ್ಲಿ ತೆರಳಿ ಮಾಹಿತಿ ಪಡೆದ ಬಿಎಲ್‌ಒಗಳು

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲೆಯಲ್ಲಿ ಮಂಗಳವಾರ ಎಸ್ಐಆರ್ ಪ್ರಕ್ರಿಯೆ ಆರಂಭಗೊಂಡಿದ್ದು, ಬಿಎಲ್‌ಒಗಳು ಫಾರಂಗಳನ್ನು ಹಿಡಿದು ಮನೆಮನೆಗಳಿಗೆ ತೆರಳಿ ಮಾಹಿತಿ ಪಡೆದರು.

ನಗರದಲ್ಲಿ ಎಸ್ಐಆರ್ ಪ್ರಕ್ರಿಯೆ ಚುರುಕುಗೊಂಡಿದ್ದು, ಶಿವಮೊಗ್ಗ ಮಹಾನಗರ ಪಾಲಿಕೆಯ 35 ವಾರ್ಡ್‌ಗಳಲ್ಲೂ ಎಸ್ ಐಆರ್ ಪ್ರಕ್ರಿಯೆಗೆ ಚಾಲನೆಗೊಂಡಿದೆ. ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ನೇತೃತ್ವದಲ್ಲಿ ಎಸ್ಐಆರ್ ಪ್ರಕ್ರಿಯೆ ಆರಂಭಗೊಂಡಿದ್ದು, 35 ವಾರ್ಡ್‌ಗಳಿಗೂ ಮಹಾನಗರ ಪಾಲಿಕೆ ಅಧಿಕಾರಿಗಳ ಜೊತೆ ಬಿಎಲ್ಓಗಳಿಗೆ ಫಾರಂಗಳನ್ನು ವಾಹನಗಳಲ್ಲಿ ಕಳುಹಿಸಲಾತು. ಹೊಳೆಹೊನ್ನೂರು : ಇಂದಿನಿಂದ ರಾಜ್ಯದಾದ್ಯಂತ ಎಸ್ಐಆರ್ ಅಧಿಕೃತವಾಗಿ ಆರಂಭವಾದ ಹಿನ್ನೆಲೆಯಲ್ಲಿ, ಶಿವಮೊಗ್ಗ ಗ್ರಾಮಾಂತರ ವಿಧಾನ ಸಭಾ ವ್ಯಾಪ್ತಿಯ ಅಗರದಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಹೊಳೆಹೊನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಹನುಮಂತು ಚಾಲನೆ ನೀಡಿದರು.

ಪ್ರತಿಯೊಬ್ಬರೂ ಎಸ್ಐಆರ್ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಬಾಗವಹಿಸಿ. ಬಿಎಲ್ಓಗಳು ಕೇಳುವ ಅಗತ್ಯ ದಾಖಲೆಗಳನ್ನು ಒದಗಿಸಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಸುಮಾರು ನೂರು ಮನೆಗಳನ್ನು ಭೇಟಿ ಮಾಡಿ ಫಾರಂ ವಿತರಣೆ ಮಾಡಲಾಯಿತು.

ಗ್ರಾಮ ಪಂಚಾಯತಿ ಪಿಡಿಓ, ಗ್ರಾಮ ಲೆಕ್ಕಾಧಿಕಾರಿ ಅಭಿಷೇಕ್, ಬಿಎಲ್ಓಗಳು, ಅಂಗನವಾಡಿ ಕಾರ್ಯಕರ್ತರು, ಎಂ.ಎಸ್. ಮಮತಾ, ವೈಭವ್, ಈರಮ್ಮ, ಸಂತೋಣ್, ಗಿರಿಶ್, ಕುಮಾರ್, ಮಲ್ಲೀಕ, ರುದ್ರೇಶಯ್ಯ, ರಾಘು ಸೇರಿದಂತೆ ಇತರರು ಇದ್ದರು.ತೀರ್ಥಹಳ್ಳಿ: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ(ಎಸ್‍ಐಆರ್) ಕಾರ್ಯ ತಾಲೂಕಿನಲ್ಲಿ ಆರಂಭಗೊಂಡಿದ್ದು ಪಟ್ಟಣ ವ್ಯಾಪ್ತಿಯಲ್ಲಿರುವ 11 ಬೂತ್‍ಗಳೂ ಸೇರಿದಂತೆ ತಾಲೂಕಿನ 171 ಬೂತ್ ಮಟ್ಟದಲ್ಲಿ ಪರಿಷ್ಕರಣೆ ಸಾಂಕೇತಿಕವಾಗಿ ಮಂಗಳವಾರದಿಂದ ಆರಂಭಗೊಂಡಿದೆ.

ತೀರ್ಥಹಳ್ಳಿ ಪಟ್ಟಣ ವ್ಯಾಪ್ತಿಯಲ್ಲಿರುವ 11994 ಮತದಾರರೂ ಸೇರಿದಂತೆ ತಾಲೂಕಿನ ಒಟ್ಟು 171 ಬೂತ್ ವ್ಯಾಪ್ತಿಯಲ್ಲಿ 1,25,068 ಮತದಾರರಿದ್ದು ಸಂಜೆ 4.30 ಗಂಟೆಯ ವೇಳೆಗೆ ದೊರೆತ ಮಾಹಿತಿಯಂತೆ ತಾಲೂಕಿನಲ್ಲಿ 3000 ಮತದಾರರನ್ನು ಭೇಟಿ ಮಾಡಲಾಗಿದೆ. ಮಂಗಳವಾರ ಬೆಳಗಿನಿಂದ ಪ್ರತಿ ಮನೆಗಳಿಗೆ ಭೇಟಿ ನೀಡಿ ಮತಗಳ ಪರಿಷ್ಕರಣೆಯ ಫಾರಂಗಳನ್ನು ವಿತರಣೆ ಮಾಡಿದ್ದು ಗ್ರಾಮೀಣ ಭಾಗದಲ್ಲಿ ನೆಟ್‍ವರ್ಕ್ ಸಮಸ್ಯೆಯಿಂದಾಗಿ ಪೂರ್ಣ ಮಾಹಿತಿ ದೊರೆತಿಲ್ಲಾ.

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಾಲೂಕಿನಿಂದ ಹೊರಗಿನ ಹೊಸನಗರ ತಲೂಕು ವ್ಯಾಪ್ತಿಯ ನಗರ,ಹುಂಚ ಹಾಗೂ ಶಿವಮೊಗ್ಗ ತಾಲೂಕು ವ್ಯಾಪ್ತಿಯ ನಿಧಿಗೆ ಹೋಬಳಿಗಳ ಒಟ್ಟು 87 ಬೂತ್ ಮಟ್ಟದಲ್ಲೂ ಎಸ್‍ಐಆರ್ ಪ್ರಕ್ರಿಯೆ ಆರಂಭಗೊಂಡಿದೆ.

ಪ್ರತಿ ಬೂತ್‍ಗೆ ಒಬ್ಬರಂತೆ ಗ್ರಾಮ ಲೆಕ್ಕಿಗರು, ಸಮಾಜ ಕಲ್ಯಾಣ, ಲೋಕೋಪಯೋಗಿ ಹಾಗೂ ಗ್ರಾಮೀಣ ಕುಡಿಯುವ ನೀರಿನ ಇಲಾಖೆಯ ಸಿಬ್ಬಂದಿ ಶಿಕ್ಷಕರು, ಅಂಗನವಾಡಿ ಶಿಕ್ಷಕಿಯರು, ಗ್ರಾಪಂ ಆರ್‌ಡಿಪಿಆರ್ ಮತ್ತು ಬೇರೆ ಇಲಾಖೆಗಳಿಂದ ಬಿಎಲ್‍ಓಗಳನ್ನು ನೇಮಕಗೊಳಿಸಲಾಗಿದೆ. ರಾಜಕೀಯ ಪಕ್ಷಗಳಿಂದ ನೇಮಕಗೊಂಡಿರುವ ಬಿಎಲ್‍ಎಗಳು ಕೂಡಾ ಈ ಕಾರ್ಯಕ್ಕೆ ನೆರವು ನೀಡುತ್ತಿದ್ದಾರೆ.ಆನಂದಪುರ : ರಾಜ್ಯದಲ್ಲಿ ಮತಪಟ್ಟಿ ಪರಿಷ್ಕರಣೆ ಮನೆ ಮನೆಗೆ ಎಸ್ಐಆರ್ ತಂಡದ ಭೇಟಿ ಮಂಗಳವಾರ ಬೆಳಗ್ಗೆಯಿಂದಲೇ ಪ್ರಾರಂಭಗೊಂಡಿದೆ. ಆನಂದಪುರ ಪಟ್ಟಣ ಸೇರಿದಂತೆ ಆಚಾಪುರ, ಯಡೇಹಳ್ಳಿ, ಹೊಸೂರು, ಗೌತಮಪುರ ಪಂಚಾಯಿತಿ ವ್ಯಾಪ್ತಿಯ ಮತಗಟ್ಟೆಗಳಲ್ಲಿನ ಮತದಾರರ ಬಳಿ ರಾಜ್ಯದಲ್ಲೇ ನಡೆಯುತ್ತಿರುವ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕಣೆಗೆ ಬಿ ಎಲ್ ಓ, ಮತ್ತು ಅಧಿಕಾರಿಗಳು ಹಾಗೂ ವಿವಿಧ ಪಕ್ಷದ ಪದಾಧಿಕಾರಿಗಳು ಮನೆ ಮನೆ ಭೇಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮತದಾರರಿಗೆ ಅರ್ಜಿ ವಿತರಿಸಿ ಮಾಹಿತಿ ಕಲೆ ಹಾಕಿದರು.

ನಾಡ ಕಚೇರಿಯ ಉಪತಹಸಿಲ್ದಾರ್ ಶಾಂತಮೂರ್ತಿ ಗೌತಮಪುರ ಮತಗಟ್ಟೆಯ ಹಿರಿಯ ಮತದಾರರಿಗೆ ಎಸ್ಐಆರ್ ಮಾಹಿತಿ ಅರ್ಜಿಯನ್ನು ವಿತರಿಸಿದರು. ಅಧಿಕಾರಿಗಳು ಮನೆಮನೆ ಭೇಟಿ ನೀಡಿ ಮಾಹಿತಿ ಪತ್ರವನ್ನು ವಿತರಿಸುವ ಸಂದರ್ಭದಲ್ಲಿ ಅಧಿಕಾರಿಗಳು ಮನೆಗಳಿಗೆ ಸ್ಟಿಕರ್ ಅಂಟಿಸಲಾಯಿತು.

ಬೀಗ ಹಾಕಿದ ಮನೆಗಳಿಗೆ ಪ್ರತ್ಯೇಕ ಸ್ಟಿಕ್ಕರನ್ನು ಅಂಟಿಸಲಾಯಿತು. ಒಂದೊಂದು ಮತಗಟ್ಟೆಯಲ್ಲಿನ 40 ಮತದಾರರಿಗೆ ಅರ್ಜಿಯನ್ನು ನೀಡುವ ಅವಕಾಶವಿದ್ದು ಕೆಲವು ಮತಗಟ್ಟೆ ವ್ಯಾಪ್ತಿಯಲ್ಲಿ 40ಕ್ಕೂ ಅಧಿಕ ಅರ್ಜಿ ನೀಡಿರುವುದಾಗಿ ತಿಳಿದು ಬಂದಿದೆ.

ಆನಂದಪುರ ಪಟ್ಟಣ, ಸಮೀಪದ ಯಡೇಹಳ್ಳಿ, ಗೌತಮಪುರ, ಹೊಸೂರು ಆಚಾಪುರ ಈ ಪಂಚಾಯಿತಿ ವ್ಯಾಪ್ತಿಗಳಲ್ಲಿನ ಒಟ್ಟು 31 ಬೂತ್‌ಗಳಲ್ಲಿನ ಮತದಾರರ ಮನೆಗಳಿಗೆ 1300ಕ್ಕೂ ಅಧಿಕ ಅರ್ಜಿಯನ್ನು ವಿತರಿಸಿದ ಬಗ್ಗೆ ಮಾಹಿತಿ ತಿಳಿದಿದೆ. ಈ ಸಂದರ್ಭದಲ್ಲಿ ರಾಜಸ್ವ ನಿರೀಕ್ಷಕ ಕವಿರಾಜ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಬಿಎಲ್‌ಒ, ಪಕ್ಷದ ವಿವಿಧ ಮುಖಂಡರು ಮನೆ ಭೇಟಿ ಸಂದರ್ಭದಲ್ಲಿ ಉಪಸ್ಥಿತರಿದ್ದರು.

----------------------ಫೋಟೋ 30 ಎ, ಎನ್, ಪಿ 1 ಆನಂದಪುರದಲ್ಲಿ ಮಂಗಳವಾರದಿಂದ ಆರಂಭಗೊಂಡ ಮನೆ ಮನೆಗೆ ಎಸ್ಐಆರ್ ತಂಡ ಭೇಟಿ ಯಲ್ಲಿ ಆನಂದಪುರ ಸಮೀಪದ ಗೌತಮಪುರ ಮತಗಟ್ಟೆಯಲ್ಲಿ ಹಿರಿಯ ನಾಗರಿಕರಿಗೆ ಮಾಹಿತಿ ಅರ್ಜಿಯನ್ನು ವಿತರಿಸಿದ ನಾಡಕಚೇರಿಯ ಉಪತಹಸಿಲ್ದಾರ್ ಶಾಂತ ಮೂರ್ತಿ ಹಾಗೂ ತಂಡ.---------------------

ಫೋಟೋ 30 ಟಿಟಿಎಚ್ 01: ತೀರ್ಥಹಳ್ಳಿ ಪಟ್ಟಣ ವ್ಯಾಪ್ತಿಯ ಬಾಳೇಬೈಲು ಮನೆಯೊಂದರಲ್ಲಿ ಫಾರಂ ತುಂಬುತ್ತಿರುವ ಚಿತ್ರ

-----------------

ಪೋಟೋ ,30 ಎಚ್ ಎಚ್ ಆರ್ ಪಿ 2.

ಅಗರದಹಳ್ಳಿಯಲ್ಲಿ ಸಿ.ಹನುಮಂತು ಮನೆಯಿಂದ ಎಸ್ಐಆರ್‌ಗೆ ಚಾಲನೆ ನೀಡಲಾಯಿತು. ಎಂ.ಎಸ್.ಮಮತಾ, ಈರಮ್ಮ, ವೈಭವ್, ಅಭಿಷೇಕ್, ಸಂತೋಷ್ ಹಾಗೂ ಗಿರೀಶ್ ಇದ್ದರು.