ಸರ್.ಸಿದ್ದಪ್ಪ ಕಂಬಳಿ ದೇಶದ ಮಹಾನ್ ನಾಯಕ

| Published : Sep 22 2024, 01:51 AM IST

ಸಾರಾಂಶ

ಸರ್.ಸಿದ್ದಪ್ಪ ಕಂಬಳಿ ದೇಶದ ಮಹಾನ್ ನಾಯಕರು ಒಮ್ಮೆಲೆ ಏಳು ಖಾತೆ ಹೊಂದಿ ಮಂತ್ರಿಗಳಾಗಿ ಜನಸೇವೆ ಸಲ್ಲಿಸಿದ್ದಾರೆ

ಮುಂಡರಗಿ: ಸರ್‌.ಸಿದ್ದಪ್ಪ ಕಂಬಳಿ ವಿಚಾರಗಳನ್ನು ಅರಿತುಕೊಂಡು ಗೌರವ ಕೊಡುವದರಿಂದ ಸಮಾಜದಲ್ಲಿ ನಮ್ಮನ್ನು ನಾವು ಗೌರವಿಸಿಕೊಂಡಂತಾಗುತ್ತದೆ ಎಂದು ರೋಣ ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಪಟ್ಟಣದ ಕೋಟೆ ಭಾಗದಲ್ಲಿ ಸರ್.ಸಿದ್ದಪ್ಪ ಕಂಬಳಿ ಕಂಚಿನಮೂರ್ತಿಯನ್ನು ಶನಿವಾರ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಯಾವುದೇ ವ್ಯಕ್ತಿಯ ಪುತ್ಥಳಿ ನಿರ್ಮಾಣವಾಗಬೇಕಾದರೆ ಅವರಲ್ಲಿ ಉದಾತ್ತ ಚಾರಗಳು ಅಡಗಿರುತ್ತವೆ ಅಂತಹ ವಿಚಾರಧಾರೆ ಹೊಂದಿದ್ದ ಸರ್. ಸಿದ್ದಪ್ಪ ಕಂಬಳಿ ಮೂರ್ತಿ ಸ್ಥಾಪನೆ ಇಂದಿನ ಯುವಕರಿಗೆ ಒಳ್ಳೆಯ ಮಾರ್ಗದಲ್ಲಿ ನಡೆಯುವಂತಾಗಲು ಪ್ರೇರಣೆಯಾಗಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಜ.ಡಾ. ಅನ್ನದಾನೀಶ್ವರ ಸ್ವಾಮಿಗಳು ಮಾತನಾಡಿ, ಸರ್.ಸಿದ್ದಪ್ಪ ಕಂಬಳಿ ದೇಶದ ಮಹಾನ್ ನಾಯಕರು ಒಮ್ಮೆಲೆ ಏಳು ಖಾತೆ ಹೊಂದಿ ಮಂತ್ರಿಗಳಾಗಿ ಜನಸೇವೆ ಸಲ್ಲಿಸಿದ್ದಾರೆ, ಸ್ವಂತ ವಕೀಲರಾಗಿದ್ದು ಶೀಮಠದ ಜತೆಗೆ ಬಹಳಷ್ಟು ಉತ್ತಮ ಸಂಬಂಧ ಹೊಂದಿದ್ದರು, ಹಲವು ವ್ಯಾಜ್ಯ ಬಂದಾಗ ಮಠದ ಶ್ರೀಗಳನ್ನು ನ್ಯಾಯಾಲಯಕ್ಕೆ ಕರೆಸದಂತೆ ಅರ್ಜಿ ಕೊಟ್ಟಿದ್ದನ್ನು ಸ್ಮರಿಸಬಹುದಾಗಿದೆ. ಈ ಹಿಂದೆ ಕೋಟೆ ಭಾಗದಲ್ಲಿ ಮೂರ್ತಿ ಸ್ಥಾಪನೆಗೊಂಡಾಗ ಪುರಸಭೆ ಅಧ್ಯಕ್ಷರಾಗಿದ್ದ ವೈ.ಎನ್. ಗೌಡರ ಜತೆಗೆ ಶ್ರೀಮಠವೂ ಆರ್ಥಿಕ ನೆರವು ನೀಡಿತ್ತು ಎಂದರು.

ಧಾರವಾಡ ಕಸಾಪ ಗೌರವ ಕಾರ್ಯದರ್ಶಿ ಪ್ರೊ. ಕೆ.ಎಸ್.ಕೌಜಲಗಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಮಾಜಿ ಅಧ್ಯಕ್ಷ ವೈ.ಎನ್.ಗೌಡರ ಅವರನ್ನು ಸನ್ಮಾನಿಸಲಾಯಿತು.

ಪುರಸಭೆ ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ, ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ಕೆ.ವಿ. ಹಂಚಿನಾಳ, ಪುರಸಭೆ ಸದಸ್ಯ ಲಿಂಗರಾಜಗೌಡ ಪಾಟೀಲ, ನಾಗರಾಜ ಹೊಂಬಳಗಟ್ಟಿ, ಶಿವಪ್ಪ ಚಿಕ್ಕಣ್ಣವರ, ಪವನ ಮೇಟಿ, ಎಸ್.ವಿ. ಪಾಟೀಲ, ಶೋಭಾ ಮೇಟಿ, ಡಿ.ಡಿ. ಮೋರನಾಳ, ಎ.ವೈ. ನವಲಗುಂದ, ರಾಜೇಸಾಬ್‌ ಬೆಟಗೇರಿ, ಹೇಮಗಿರೀಶ ಹಾವಿನಾಳ, ಆರ್.ಎಲ್. ಪೋಲಿಸಪಾಟೀಲ, ಶಂಕರ ಹಲಗತ್ತಿ, ನಿಂಗು ಸೊಲಗಿ, ಶಶಿಧರ ತೋಡಕರ, ಶಿವಶರಣ ಕಲಬಶೆಟ್ಟರ ಸೇರಿದಂತೆ ಇತರರು ಇದ್ದರು.

ಸಮಿತಿ ಅಧ್ಯಕ್ಷ ಮಂಜುನಾಥ ಇಟಗಿ ಸ್ವಾಗತಿಸಿದರು. ಪ್ರತಿಷ್ಠಾನ ಅಧ್ಯಕ್ಷ ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ಮುಧೋಳ ನಿರೂಪಿಸಿದರು.