ನಿಡಗಲ್ಲಿನ ಪಾಳೆಯಗಾರರ ಐತಿಹಾಸಿಕ ಜಾನಪದ ಇತಿಹಾಸ ಕುರಿತು ಹೊಸ ಬೆಳಕು ಚೆಲ್ಲುವ "ಸಿರಿವೆತ್ತ ನಿಡಗಲ್ಲು " ಎಂಬ ಅತ್ಯುತ್ತಮ ಚಾರಿತ್ರಿಕ ಜಾನಪದ ಅಂಶಗಳನ್ನು ಒಳಗೊಂಡಿರುವ ಹೊಸ ಕೃತಿಯನ್ನು ತಾಲೂಕಿನ ವದನಕಲ್ಲು ಗ್ರಾಮದ ಪವಾಡಪುರುಷ ತಿಪ್ಪೇರುದ್ರಸ್ವಾಮಿ ದೇವಾಲಯದ ರಂಗಮಂದಿರದಲ್ಲಿ ಬಿಡುಗಡೆ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಪಾವಗಡ
ನಿಡಗಲ್ಲಿನ ಪಾಳೆಯಗಾರರ ಐತಿಹಾಸಿಕ ಜಾನಪದ ಇತಿಹಾಸ ಕುರಿತು ಹೊಸ ಬೆಳಕು ಚೆಲ್ಲುವ "ಸಿರಿವೆತ್ತ ನಿಡಗಲ್ಲು " ಎಂಬ ಅತ್ಯುತ್ತಮ ಚಾರಿತ್ರಿಕ ಜಾನಪದ ಅಂಶಗಳನ್ನು ಒಳಗೊಂಡಿರುವ ಹೊಸ ಕೃತಿಯನ್ನು ತಾಲೂಕಿನ ವದನಕಲ್ಲು ಗ್ರಾಮದ ಪವಾಡಪುರುಷ ತಿಪ್ಪೇರುದ್ರಸ್ವಾಮಿ ದೇವಾಲಯದ ರಂಗಮಂದಿರದಲ್ಲಿ ಬಿಡುಗಡೆ ಮಾಡಲಾಯಿತು.ನಿಡಗಲ್ಲು ಮಹರ್ಷಿ ವಾಲ್ಮೀಕಿ ಆಶ್ರಮದ ಶ್ರೀ ಸಂಜಯ್ ಕುಮಾರ್ ನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಸಿರಿವೆತ್ತ ನಿಡಗಲ್ಲು " ಜಾನಪದ ಚಾರಿತ್ರಿಕ ಪುಸ್ತಕದ ಲೋಕಾರ್ಪಣೆ ಬಳಿಕ ಮಾತನಾಡಿದರು. ತಿಪ್ಪೇಸ್ವಾಮಿ ಅವರು ನಿಡಗಲ್ಲು ದುರ್ಗದ ಇತಿಹಾಸದಲ್ಲಿ ಬರುವ ಗಂಡೆಯ್ಯ, ಗೊಡಗು ಪಾಲಯ್ಯರ ನಡುವೆ ನಡೆದ ಕಾಳಗ ಹಾಗೂ ಗಂಡೆಯ್ಯ ಉಲಸನ್ನು ಗ್ರಾಮದ ಗಡಿವರೆಗೂ ಕೊಂಡೊಯ್ಯುವ ಸಾಹಸಮಯ ಘಟನಾವಳಿಗಳನ್ನು ಮನೋಜ್ಞವಾಗಿ ಚಿತ್ರಿಸಿರುವುದು ಸಂತಸ ತಂದಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕಟ್ಟಾ ನರಸಿಂಹಮೂರ್ತಿ ಅವರು ಮಾತನಾಡಿ, ಸಿರಿವತ್ತ ನಿಡಗಲ್ಲು ಪುಸ್ತಕದ ಮೂಲಕ ಲೇಖಕರು ನಿಡಗಲ್ಲು ದುರ್ಗದ ಯಾವುದೇ ಶಾಸನಗಳಲ್ಲಿ ಉಲ್ಲೇಖವಿರದ ಜಾನಪದ ಇತಿಹಾಸವನ್ನು ಜನರಿಗೆ ತಿಳಿಸಲು ಬರೆದಿರುವ ಪುಸ್ತಕ್ಕೆ ಪ್ರಶಂಸೆ ವ್ಯಕ್ತಪಡಿಸಿದರುನಿವೃತ್ತ ಪ್ರಾಂಶುಪಾಲರು ಹಾಗೂ ಜಾನಪದ ಅಧ್ಯಯನಕಾರರಾದ ಸಣ್ಣನಾಗಪ್ಪ ಮಾತನಾಡಿ, ಜನಪದ ಸಾಹಿತ್ಯದ ಸಾರಸಂಗ್ರಹ ಈ ಕೃತಿಯಲ್ಲಿ ಅಡಕವಾಗಿದ್ದು, ನಿಡಗಲ್ಲಿನ ಇತಿಹಾಸದ ಕುರಿತು ಹೊಸ ಆಯಾಮಗಳನ್ನು ಪರಿಚಯಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಪುಸ್ತಕದ ಲೇಖಕ ಬಿ. ತಿಪ್ಪೇಸ್ವಾಮಿ ಮಾತನಾಡಿ, ನಿಡಗಲ್ಲು ಸಂಸ್ಥಾನಕ್ಕೆ ಸೇರಿದ ರಂಗಸಮುದ್ರ ಗ್ರಾಮದಲ್ಲಿನ ಜಾತ್ರೆಗೆ ನಿಡಗಲ್ ಪಾಳೇಗಾರ ಮುಮ್ಮಡಿ ಒಟ್ಟಣ್ಣ ನಾಯಕನನ್ನು ಜಾತ್ರೆಗೆ ಕರೆ ತರುವ ಜಾನಪದ ಇತಿಹಾಸ ಹಾಗೂ ಲಾವಣಿ ಪದಗಳ ಆಧಾರವಾಗಿಟ್ಟುಕೊಂಡು ಸ್ಥಳೀಯರ ಪ್ರೋತ್ಸಾಹದಿಂದ ಈ ಕೃತಿ ಹೊರಬರಲು ಸಾಧ್ಯವಾಯಿತು. ನಿಡಗಲ್ಲಿನ ಇತಿಹಾಸವನ್ನು ಎಷ್ಟು ಅಧ್ಯಯನ ಮಾಡಿದರೂ ಹೊಸ ವಿಚಾರಗಳು ಬೆಳಕಿಗೆ ಬರುತ್ತವೆ. ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ ಅನೇಕ ಪಾಳೆಯಗಾರರ ವಂಶಸ್ಥರು ವೇದಿಕೆಯಲ್ಲಿ ಉಪಸ್ಥಿತರಿರುವುದು ನನಗೆ ಸಂತಸ ತಂದಿದೆ ಎಂದು ಹೇಳಿದರು.ಪುಸ್ತಕವನ್ನು ಲೋಕಾರ್ಪಣೆ ಮಾಡಿದ ಹಾ. ರಾಮಚಂದ್ರಪ್ಪ ಮಾತನಾಡಿ, ತೆಲುಗು ಪ್ರಾಭಲ್ಯದ ಪ್ರದೇಶದಲ್ಲಿ ಕನ್ನಡ ಪುಸ್ತಕವೊಂದನ್ನು ಪ್ರಕಟಿಸಿರುವುದು ಕನ್ನಡ ಸಾಹಿತ್ಯಕ್ಕೂ ಹಾಗೂ ತಾಲೂಕಿನ ಇತಿಹಾಸಕ್ಕೂ ಮಹತ್ವದ ಕೊಡುಗೆಯಾಗಿದೆ. ಹೊಸತನದ ಸೃಜನಶೀಲತೆಯನ್ನು ಉಳಿಸಿಕೊಂಡಿರುವ ತಿಪ್ಪೇಸ್ವಾಮಿ ಅವರು ಇನ್ನಷ್ಟು ಕೃತಿಗಳನ್ನು ರಚಿಸುವ ಮೂಲಕ ನಿಡಗಲ್ಲಿನ ಇತಿಹಾಸವನ್ನು ಶ್ರೀಮಂತಗೊಳಿಸಬೇಕು ಎಂದು ಆಶಿಸಿದರು.
ಪ್ರಾಧ್ಯಾಪಕರಾದ ಡಾ. ಎಚ್.ಕೆ. ನರಸಿಂಹಮೂರ್ತಿ, ನಿವೃತ್ತ ಜಿಲ್ಲಾಧಿಕಾರಿ ಪಾಲಯ್ಯ ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಜಾ ರಂಗಪ್ಪರಾಜು, ರಾಜಾ ಪ್ರಸನ್ನ ಕುಮಾರ್ ನಾಯಕ, ರುದ್ರಮುನಿ, ತಿಪ್ಪೇಶ್, ತಿಪ್ಪೇಶ್ ನಾಯಕ, ಕಾರ್ತಿಕ್, ಪೊಲೀಸ್ ಶ್ರೀಧರ್ ನಾಯಕ, ಪಾಳೇಗಾರ ಲೋಕೇಶ್. ಚಂದ್ರು ಪಾಳೇಗಾರ್, ,ದೇವರಾಯ, ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ, ತಿಮ್ಮಾರೆಡ್ಡಿ, ಆರ್. ಸಿ. ಅಂಜಿನಪ್ಪ ಎಸ್.ಕೆ. ರೆಡ್ಡಿ, ಕೋಟಗುಡ್ಡ ಅಂಜಪ್ಪ ಬಲರಾಮರೆಡ್ಡಿ, ನಾಯಕ ನೌಕರ ಸಂಘದ ಅಧ್ಯಕ್ಷ ಎನ್. ಅನಿಲ್ ಕುಮಾರ್ ಆರ್.ಟಿ.ಓ. ನಾಗರಾಜು, ನಾಗರತ್ನಮ್ಮ, ಸಿದ್ದಾರ್ಥ, ಭರತ್, ಶಿವಪ್ಪ, ಸಿದ್ದರಾಜು, , ಕೆ.ಎಂ. ಪ್ರಭಾಕರ್, ಹೂ.ಮ.ನಾಗರಾಜ, ಡಾ. ಓಂಕಾರ ನಾಯಕ, ಜಯರಾಮಪ್ಪ, ಆರ್ .ಎನ್. ಲಿಂಗಪ್ಪ, ಲೋಕೇಶ್ ಪಾಳೇಗಾರ , ಪದ್ಮಾವತಿ ಗೋವಿಂದಯ್ಯ, ಗಿರಿರಾಜು, ರಾಜಗೋಪಾಲ್, ನರಸಿಂಹ, ಅಂಜನಾಯಕ, ಅಂಬಿಕಾ ರಮೇಶ್, ಓಂಕಾರ ನಾಯಕ, ಕಂಪ್ಪಲಿನಾಯಕ,