ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಶಿರಸಿ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಿರಿಯ ಸಾಹಿತಿ ಡಿ.ಎಸ್. ನಾಯ್ಕ ಸರ್ವಾಧ್ಯಕ್ಷತೆಯಲ್ಲಿ ಫೆ. 11ರಂದು ನಗರದ ಬಣ್ಣದ ಮಠದಲ್ಲಿ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಶಿರಸಿ
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಶಿರಸಿ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಿರಿಯ ಸಾಹಿತಿ ಡಿ.ಎಸ್. ನಾಯ್ಕ ಸರ್ವಾಧ್ಯಕ್ಷತೆಯಲ್ಲಿ ಫೆ. 11ರಂದು ನಗರದ ಬಣ್ಣದ ಮಠದಲ್ಲಿ ನಡೆಯಲಿದೆ.ಸೋಮವಾರ ನಗರದ ಹೊಟೇಲ್ ಸುಪ್ರಿಯಾ ಇಂಟರ್ ನ್ಯಾಶನಲ್‍ನಲ್ಲಿ ಶಾಸಕ ಭೀಮಣ್ಣ ನಾಯ್ಕ ಆಮಂತ್ರಣ ಬಿಡುಗಡೆಗೊಳಿಸಿದರು. ಈ ವೇಳೆ ಮಾತನಾಡಿದ ಅವರು, ಸಮ್ಮೇಳನವು ಕನ್ನಡ ಭಾಷೆ, ಸಾಹಿತ್ಯ ಬೆಳವಣಿಗೆ ಪೂರಕವಾಗಿದೆ. ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸಮ್ಮೇಳನ ಯಶಸ್ಸು ಗೊಳಿಸಬೇಕು ಎಂದರು.
ತಾಲೂಕು ಘಟಕದ ಅಧ್ಯಕ್ಷ ಜಿ.ಸುಬ್ರಾಯ ಭಟ್ ಬಕ್ಕಳ ಮಾಹಿತಿ ನೀಡಿ, ಅಂದು ಬೆಳಗ್ಗೆ 9 ಗಂಟೆಗೆ ಧ್ವಜಾರೋಹಣ, 9.30ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. 10 ಗಂಟೆಗೆ ಬಣ್ಣದ ಮಠದ ಶಿವಲಿಂಗ ಸ್ವಾಮೀಜಿ ಉದ್ಘಾಟಿಸುವರು. ಪರಿಷತ್ ಜಿಲ್ಲಾ ಘಟಕದ ಧ್ಯಕ್ಷ ಬಿ.ಎನ್. ವಾಸರೆ ಆಶಯ ನುಡಿಗಳನ್ನಾಡುವರು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಶಾಸಕ ಭೀಮಣ್ಣ ನಾಯ್ಕ ಪುಸ್ತಕ ಲೋಕಾರ್ಪಣೆ ಮಾಡುವರು. ದಿ.ಡಿ.ಎಂ.ಭಟ್ ಕುಳವೆ ದ್ವಾರವನ್ನು ಉಪವಿಭಾಗಾಧಿಕಾರಿ ಚಂದ್ರಶೇಖರ ಆರ್.ಜಿ. ಉದ್ಘಾಟಿಸುವರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ರಾಜೀವ ಅಜ್ಜೀಬಳ ಧ್ವಜ ಹಸ್ತಾಂತರ ಮಾಡುವರು. ತಹಸೀಲ್ದಾರ ಪಟ್ಟರಾಜ ಗೌಡ, ಡಿಡಿಪಿಐ ಡಿ.ಆರ್.ನಾಯ್ಕ, ಜನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯ್ಕ, ಪರಿಷತ್ ಗೌರವ ಕಾರ್ಯದರ್ಶಿಗಳಾದ ಜಾರ್ಜ್ ಫರ್ನಾಂಡೀಸ್, ಪಿ.ಆರ್.ನಾಯ್ಕ, ರೋಟರಿ ಶಿರಸಿ ಘಟಕದ ಅಧ್ಯಕ್ಷ ಶ್ರೀನಿವಾಸ ನಾಯ್ಕ, ಸಾಹಿತಿ ಆರ್.ಡಿ. ಹೆಗಡೆ ಆಲ್ಮನೆ, ಸುವರ್ಣ ಸಹಕಾರ ಬ್ಯಾಂಕ್ ಅಧ್ಯಕ್ಷ ಸಂತೋಷ ಶೇಟ್ ಪಾಲ್ಗೊಳ್ಳುವರು ಎಂದರು.12.30ರಿಂದ ಸಹಕಾರ ಕ್ಷೇತ್ರದ ಸವಾಲುಗಳ ಕುರಿತು ವಿಚಾರಗೋಷ್ಠಿ ನಡೆಯಲಿದೆ. 2.30ರಿಂದ ಸಾಹಿತಿ ವಾಸುದೇವ ಶಾನಭಾಗ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ. ಸಾಹಿತಿ ಮೋಹನ ಭರಣಿ ಆಶಯ ಮಾತನಾಡುವರು. 4 ಗಂಟೆಗೆ ಬಿ.ಎನ್.ವಾಸರೆ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪದಲ್ಲಿ ಶಾಸಕ ಶಿವರಾಮ ಹೆಬ್ಬಾರ, ಬಣ್ಣದ ಮಠದ ವ್ಯವಸ್ಥಾಪಕ ಎಸ್.ಬಿ. ಹಿರೇಮಠ, ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ, ಸಾಮಾಜಿ ಹೋರಾಟಗಾರ ಅನಂತಮೂರ್ತಿ ಹೆಗಡೆ, ಉದ್ಯಮಿ ಉಪೇಂದ್ರ ಪೈ ಪಾಲ್ಗೊಳ್ಳುವರು. 6 ಗಂಟೆಯಿಂದ ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಪರಿಷತ್ ಶಿರಸಿ ಘಟಕದ ಗೌರವ ಕಾರ್ಯದರ್ಶಿ ವಾಸುದೇವ ಶಾನಭಾಗ, ಕೆ.ಎನ್. ಹೊಸ್ಮನಿ, ಕಾರ್ಯಕಾರಿಣಿ ಸದಸ್ಯರಾದ ಆರ್.ಡಿ. ಹೆಗಡೆ, ಕೃಷ್ಣ ಪದಕಿ, ರಾಜೇಶ ದೇಶಭಾಗ, ಜಗದೀಶ ಭಂಡಾರಿ, ಪ್ರಮುಖರಾದ ಎಸ್.ಕೆ. ಭಾಗವತ ಉಪಸ್ಥಿತರಿದ್ದರು. ಸಾಧಕರಿಗೆ ಸನ್ಮಾನಶೈಕ್ಷಣಿಕ ಕ್ಷೇತ್ರದ ಸಾಧನೆಗಾಗಿ ಜಿ.ಎಂ. ಹೆಗಡೆ ಮುಳಖಂಡ, ಕಲಾಕ್ಷೇತ್ರದಲ್ಲಿ ರೇಖಾ ಹೆಗಡೆ ನಾಡಗುಳಿ, ವೈದ್ಯಕೀಯ ಕ್ಷೇತ್ರದಿಂದ ಡಾ. ವೆಂಕಟರಮಣ ಹೆಗಡೆ, ಸಂಗೀತ ಕ್ಷೇತ್ರದಿಂದ ರೇಖಾ ದಿನೇಶ, ಸಹಕಾರ ಕ್ಷೇತ್ರದಿಂದ ಡಿ.ಎಸ್.ಹೆಗಡೆ ಶೇಡಿಕೊಡ್ಲು ಅವರನ್ನು ಗೌರವಿಸಲಾಗುತ್ತದೆ.