ಸಾರಾಂಶ
ಕೊರಟಗೆರೆ: ಇಬ್ಬರು ಸಹೋದರಿಯರು ಆಕಸ್ಮಿಕವಾಗಿ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿರುವ ಘಟನೆ ತಾಲೂಕಿನ ಅರಸಾಪುರ ಗ್ರಾಮದಲ್ಲಿ ನಡೆದಿದೆ.
ಕೊರಟಗೆರೆ: ಇಬ್ಬರು ಸಹೋದರಿಯರು ಆಕಸ್ಮಿಕವಾಗಿ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿರುವ ಘಟನೆ ತಾಲೂಕಿನ ಅರಸಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಂಜೀವಪ್ಪನ ಮಕ್ಕಳಾದ ಶಾಂತಮ್ಮ (೩೬), ಗಂಗಮ್ಮ (೩೨) ಮೃತಪಟ್ಟ ದುರ್ದೈವಿಗಳು. ಗ್ರಾಮದ ಸಮೀಪ ಹತ್ತಿ ಬಿಡಿಸಲು ಹೋಗಿದ್ದ ಕೆಲಸಗಾರರಿಗೆ, ಚಹಾ ತರಲು ಹೋಗಿದ್ದ ಇಬ್ಬರು ಸಂಜೆಯಾದರೂ ಬರದ ಕಾರಣ ಅವರ ಮೊಬೈಲ್‌ಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸದೆ ಇರುವ ಕಾರಣ ಹುಡುಕಾಡಿದ್ದಾರೆ. ನಂತರ ಕೃಷಿ ಹೊಂಡದ ಸಮೀಪ ಮೊಬೈಲ್‌ಗಳು ದೊರೆತಿದ್ದು, ತಕ್ಷಣ ಕೃಷಿ ಹೊಂಡದಲ್ಲಿ ಹುಡುಕಾಡಿದಾಗ ಇಬ್ಬರ ಮೃತದೇಹ ಸಿಕ್ಕಿವೆ. ತಕ್ಷಣ ಕೊರಟಗರೆ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಮಧುಗಿರಿ ಡಿವೈಎಸ್ಪಿ ಮಂಜುನಾಥ್ ಸಿಪಿಐ ಅನಿಲ್ ಪಿಎಸೈ ತೀರ್ಥೇಶ್ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.